ಇವರೇ ನೋಡಿ ಅನಂತ್ ಅಂಬಾನಿ ಮಾವ 755 ಕೋಟಿ ಉದ್ಯಮದ ಒಡೆಯನಾದರೂ ಪ್ರಚಾರದಿಂದ ದೂರ ದೂರ
ಅಂಬಾನಿ ಕುಟುಂಬದವರ ಬಗ್ಗೆ ಬಹುತೇಕ ದೇಶದ ಪ್ರತಿಯೊಬ್ಬ ಜನತೆಗೂ ಗೊತ್ತು. ಆದರೆ ಈ ಅಂಬಾನಿ ಕುಟುಂಬಕ್ಕೆ ಮಗಳು ರಾಧಿಕಾ ಮರ್ಚೆಂಟ್ ಅವರನ್ನು ಕೊಡುತ್ತಿರುವ ವಿರೇನ್ ಮರ್ಚೆಂಟ್ ಅವರ ಬಗ್ಗೆ ತಿಳಿದಿರುವವರು ಬಹಳ ವಿರಳ. ಸ್ವತಃ ಉದ್ಯಮಿ ಆಗಿರುವ ಅವರ ಬಗ್ಗೆ ಇಲ್ಲಿದೆ ಡಿಟೇಲ್ಸ್
ದೇಶದ ಅತ್ಯಂತ ಶ್ರೀಮಂತ ಕುಟುಂಬದ ಕುಡಿ ಅನಂತ್ ಅಂಬಾನಿ ಜೊತೆ ವಿವಾಹ ನಿಶ್ಚಿತಾರ್ಥವಾದಾಗಿನಿಂದಲೂ ರಾಧಿಕಾ ಮರ್ಚೆಂಟ್ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಹೈಲೈಟ್ ಆಗುತ್ತಿದ್ದಾರೆ. ಅಂಬಾನಿ ಕುಟುಂಬದವರ ಬಗ್ಗೆ ಬಹುತೇಕ ದೇಶದ ಪ್ರತಿಯೊಬ್ಬ ಜನತೆಗೂ ಗೊತ್ತು.
ಆದರೆ ಈ ಅಂಬಾನಿ ಕುಟುಂಬಕ್ಕೆ ಹೆಣ್ಣು ಕೊಡುತ್ತಿರುವ ವಿರೇನ್ ಮರ್ಚೆಂಟ್ ಅವರ ಬಗ್ಗೆ ತಿಳಿದಿರುವವರು ಬಹಳ ವಿರಳ. ಅನಂತ್ ಅಂಬಾನಿ ಭಾವಿ ಪತ್ನಿ ರಾಧಿಕಾ ಮರ್ಚೆಂಟ್ ಅಪ್ಪನಾಗಿರುವ ವಿರೇನ್ ಮರ್ಚೆಂಟ್ ಅವರು ಡಿಗ್ರಿ ಪಡೆಯುವುದಕ್ಕೂ ಮೊದಲೇ ಉದ್ಯಮ ಆರಂಭಿಸಿದವರು ಅವರ ಬಗ್ಗೆ ಇಲ್ಲಿದೆ ಡಿಟೇಲ್ಸ್
ಅನಂತ್ ಅಂಬಾನಿ ಕುಟುಂಬ ತಮ್ಮ ಮನೆಯ ಯಾವುದೇ ಹಬ್ಬವಿರಬಹುದು, ಮದುವೆ ಮುಂಜಿ ಇರಬಹುದು ಯಾವುದನ್ನು ಸರಳವಾಗಿ ಮಾಡಿರುವ ಇತಿಹಾಸವೇ ಇಲ್ಲ, ಶ್ರೀಮಂತಿಕೆಗೆ ತಕ್ಕಂತೆ ಇಲ್ಲಿ ನಡೆಯುವ ಪ್ರತಿ ಕಾರ್ಯಕ್ರಮವೂ ಅದ್ದೂರಿಯೇ, ಅದೇ ರೀತಿ ಈಗ ತಮ್ಮ ಕುಟುಂಬ 2ನೇ ತಲೆಮಾರಿನ ಹಾಗೂ ಮನೆಯ ಕೊನೆಯ ಮದುವೆಗೆ ಅಂಬಾನಿ ಕುಟುಂಬ ಎಂದೆಂದಿಗಿಂತಲೂ ತುಸು ಹೆಚ್ಚೇ ಎಂಬಂತೆ ಸಜ್ಜಾಗಿದೆ. ಅಂಬಾನಿ ಕುಟುಂಬದ ಬಗ್ಗೆ ತಿಳಿದಿರುವಷ್ಟು ಜನರಿಗೆ ರಾಧಿಕಾ ಮರ್ಚೆಂಟ್ ಕುಟುಂಬದ ಬಗ್ಗೆ ಗೊತ್ತಿಲ್ಲ.
ರಾಧಿಕಾ ಮರ್ಚೆಂಟ್ ಉದ್ಯಮಿ ವಿರೇನ್ ಮರ್ಚೆಂಟ್ ಹಾಗೂ ಶೈಲಾ ಮರ್ಚೆಂಟ್ ಪುತ್ರಿ, ಅಂಬಾನಿ ಕುಟುಂಬದಂತೆ ರಾಧಿಕಾ ಮರ್ಚೆಂಟ್ ಕುಟುಂಬದವರು ಕೂಡ ಉದ್ಯಮಿಗಳೇ, ರಾಧಿಕಾ ಅಪ್ಪ ವಿರೇನ್ ಮರ್ಚೆಂಟ್ ಕೂಡ ಕೋಟ್ಯಾಧಿಪತಿ ಉದ್ಯಮಿಯಾಗಿದ್ದು, ಎನ್‌ಕೋರ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಆಗಿದ್ದಾರೆ.
1965ರಲ್ಲಿ ಜನಿಸಿದ ವಿರೇನ್ ಮರ್ಚೆಂಟ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಂಬೈನ ಪ್ರತಿಷ್ಠಿತ ಶಾಲೆಯಲ್ಲಿ ಪೂರೈಸಿದ್ದು, ಡಿಗ್ರಿ ಪಡೆಯುವುದಕ್ಕಾಗಿ ಅಮೆರಿಕಾದ ಕೇಂಟ್ ವಿವಿಗೆ ತೆರಳಿದರು. ಬಾಲ್ಯದಿಂದಲೂ ಉದ್ಯಮದ ಹಲವು ಆಯಾಮಗಳನ್ನು ನೋಡಿಕೊಂಡೆ ಬೆಳೆದ ವಿರೇನ್, ತಮ್ಮ ಕಾಲೇಜು ಪದವಿ ಮುಗಿಸುವುದಕ್ಕೂ ಮೊದಲೇ ಉದ್ಯಮವೊಂದನ್ನು ಆರಂಭಿಸಿದರು. ಪ್ರಸ್ತುತ ಅವರು ಕೇವಲ ರಾಷ್ಟಮಟ್ಟದಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತ ಉದ್ಯಮಿ ಎನಿಸಿದ್ದಾರೆ.
ಅವರು ನಿರ್ಮಿಸಿದ ಆನ್‌ಲೈನ್ ಮತ್ತು ಆಫ್‌ಲೈನ್ ಆರೋಗ್ಯ ಸೇವೆಗಳನ್ನು ಒದಗಿಸುವ ಎನ್‌ಕೋರ್(ENCORE) ಎಂಬ ನವೀನ ಆನ್‌ಲೈನ್ ಹೆಲ್ತ್‌ಕೇರ್ ಪ್ಲಾಟ್‌ಫಾರ್ಮ್ ಸಂಸ್ಥೆ ಇಂದು ಆರೋಗ್ಯ ಕ್ಷೇತ್ರದ ಪ್ರಮುಖ ಶಕ್ತಿ ಎನ್ನುವಷ್ಟು ಬೃಹದಾಕಾರವಾಗಿ ಬೆಳೆದಿದೆ.
ಎನ್‌ಕೋರ್‌ನ ಸಿಇಒ ಆಗಿರುವುದಲ್ಲದೇ ಭಾರತದ ಹಲವು ದೊಡ್ಡ ಕಂಪನಿಗಳ ನಿರ್ದೇಶಕರು ಆಗಿದ್ದಾರೆ.
ಎನ್‌ಕೋರ್ ಬ್ಯುಸಿನೆಸ್ ಸೆಂಟರ್ ಪ್ರೈವೇಟ್ ಲಿಮಿಟೆಡ್, ಎನ್‌ಕೋರ್ ನ್ಯಾಚುರಲ್ ಪಾಲಿಮರ್ಸ್ ಪ್ರೈವೇಟ್ ಲಿಮಿಟೆಡ್, ZYG ಫಾರ್ಮಾ ಪ್ರೈವೇಟ್ ಲಿಮಿಟೆಡ್, ಸಾಯಿದರ್ಶನ್ ಬ್ಯುಸಿನೆಸ್ ಸೆಂಟರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಎನ್‌ಕೋರ್ ಪಾಲಿಫ್ರಾಕ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳಲ್ಲಿ ವಿರೇನ್ ಅವರು ನಿರ್ದೇಶಕತ್ವವನ್ನು ಹೊಂದಿದ್ದಾರೆ.
ಉದ್ಯಮ ಜಗತ್ತಿನಲ್ಲಿ ಪ್ರಮುಖ ಹೆಸರಾಗಿರುವ ವೀರೇನ್ ಅವರು ತಮ್ಮ ಕಠಿಣ ಪರಿಶ್ರಮದಿಂದ ಎನ್‌ಕೋರ್ ಹೆಲ್ತ್‌ಕೇರ್‌ಗೆ ಜಾಗತಿಕ ಮಾರುಕಟ್ಟೆ ರೂಪಿಸಿದರು. ಪ್ರಸ್ತುತ ಉದ್ಯಮಿ 755 ಕೋಟಿ ಮೊತ್ತದ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಯಶಸ್ವಿ ಉದ್ಯಮಿ ಎನಿಸಿದರು ವಿರೇನ್ ಮರ್ಚಂಟ್ ಅವರು ಪ್ರಚಾರದಿಂದ ಬಹಳ ದೂರ ಇರುವ ವ್ಯಕ್ತಿ. ತಾರೆಯರು ಗಣ್ಯರಿಂದ ತುಂಬಿರುವ ಯಾವುದೇ ಪಾರ್ಟಿಯಲ್ಲಿ ಅವರು ಕಾಣಿಸಿಕೊಳ್ಳುವುದೇ ಇಲ್ಲ. ಶೈಲಾ ಮರ್ಚೆಂಟ್ ಅವರನ್ನು ಮದುವೆಯಾಗಿದ್ದು, ರಾಧಿಕಾ ಮರ್ಚೆಂಟ್ ಜೊತೆ ಅಂಜಲಿ ಮರ್ಚೆಂಟ್ ಎಂಬ ಮತ್ತೊರ್ವ ಮಗಳನ್ನು ಹೊಂದಿದ್ದಾರೆ. ಪತ್ನಿ ಶೈಲಾ ಮರ್ಚೆಂಟ್ ಕೂಡ ಉದ್ಯಮಿಯಾಗಿದ್ದಾರೆ.
ಭಾರತದಲ್ಲಿರುವ ಕೆಲವೇ ಕೆಲವು ಕುಟುಂಬಗಳಲ್ಲಿ ಮಾತ್ರ ಎಲ್ಲರೂ ಉದ್ಯಮಗಳಾಗಿದ್ದಾರೆ ಅಂತಹ ಕುಟುಂಬಗಳಲ್ಲಿ ವಿರೇನ್ ಮರ್ಚೆಂಟ್ ಕುಟುಂಬವೂ ಒಂದು, ಪತ್ನಿ ಶೈಲಾ ಮರ್ಚೆಂಟ್ ಎನ್‌ಕೋರ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದರೆ, ಹಿರಿಯ ಮಗಳು ಅಂಜಲಿ ಮರ್ಚೆಂಟ್ ಹೇರ್ ಸ್ಟೈಲಿಂಗ್ ಕ್ಲಬ್ ಸರಣಿಗಳಲ್ಲಿ ಒಂದಾಗಿರುವ ಡ್ರೈಫಿಕ್ಸ್‌ನ ಸಹ ಸಂಸ್ಥಾಪಕರಾಗಿದ್ದಾರೆ. ಇನ್ನು ರಾಧಿಕಾ ಮರ್ಚೆಂಟ್ ಕೂಡ ಅವರ ಕುಟುಂಬದ ಇತರ ಸದಸ್ಯರಂತೆ ಉದ್ಯಮಿಯಾಗಿದ್ದು, ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.