ಹಿಂಗಿದ್ರು.. ಹಿಂಗಾದ್ರು... ಟ್ರೋಲ್‌ಗೆ ಗುರಿಯಾದ ಮುಖ್ಯಮಂತ್ರಿ ಪತ್ನಿ!
ಪ್ರಮುಖ ರಾಜ್ಯವೊಂದರ ಮುಖ್ಯಮಂತ್ರಿಯ ಪತ್ನಿಯ ರೂಪಾಂತರದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ 2014 ರಿಂದ ಇಲ್ಲಿಯವರೆಗಿನ ಅವರ ಮುಖಚಹರೆಯಲ್ಲಿ ಆದ ಬದಲಾವಣೆಯನ್ನು ತೋರಿಸಲಾಗಿದ್ದು, ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ಚರ್ಚೆಗೆ ಕಾರಣವಾಗಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅದ್ಭುತ ಟ್ರಾನ್ಸ್‌ಫಾರ್ಮೇಷನ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದ ಎಲ್ಲರೂ ಅಮೃತಾ ಫಡ್ನವಿಸ್ ಮುಖಚಹರೆಯೇ ಸಂಪೂರ್ಣವಾಗಿ ಬದಲಾಗಿದ್ದು ಹೇಗೆ ಎಂದು ಅಚ್ಚರಿಪಟ್ಟಿದ್ದಾರೆ.
ಈ ವೀಡಿಯೊದಲ್ಲಿ ಅಮೃತಾ ಅವರ ಎರಡು ವೀಡಿಯೊ ತುಣುಕುಗಳ ಪಕ್ಕಪಕ್ಕದ ಹೋಲಿಕೆ ಇದೆ, ಒಂದು 2014-2019ರ ವಿಡಿಯೀ ಆಗಿದೆ. ದೇವೇಂದ್ರ ಅವರ ರಾಜಕೀಯ ಚಟುವಟಿಕೆಗಳ ಆರಮಭದಿಂದಾಗಿ, ಅಮೃತಾ ಫಡ್ನವಿಸ್ ಹೆಚ್ಚಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದರು. ಇನ್ನೊಂದು ಅವರ ಇತ್ತೀಚಿನ ಸಂದರ್ಶನದ ವಿಡಿಯೋ ಆಗಿದೆ.
ಅಮೃತಾ ಖಂಡಿತವಾಗಿಯೂ ಯಾವುದಾದರೂ ಒಂದು ರೀತಿಯ ಆಧುನಿಕ ಸೌಂದರ್ಯವರ್ಧಕ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಸೋಶಿಯಲ್ ಮೀಡಿಯಾ ಮಂದಿ ನಂಬಿದ್ದಾರೆ. ಏಕೆಂದರೆ ಶಸ್ತ್ರಚಿಕಿತ್ಸೆಗೆ ಮುನ್ನ ಮತ್ತು ನಂತರ ಇಬ್ಬರು ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಗಳಂತೆ ಕಾಣುತ್ತಿದ್ದಾರೆ ಎಂದಿದೆ.
ಆದರೆ, ಸ್ವತಃ ಅಮೃತಾ ಫಡ್ನವಿಸ್ ಈ ಹಿಂದೆ ಅಂದರೆ 2022ರಲ್ಲಿ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಅವರಲ್ಲಾಗಿರುವ ವ್ಯತ್ಯಾಸ ಸಂಪೂರ್ಣವಾಗಿ ಕಾಣುತ್ತಿದೆ ಎಂದಿದ್ದು, ಯಾರೂ ಕೂಡ ಇದನ್ನು ನಿರಾಕರಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ಹೆಚ್ಚಾಗಿ ಸೌಂದರ್ಯದ ಮಾನದಂಡಗಳು ಮತ್ತು ಮಾಧ್ಯಮಗಳಿಂದ ಪ್ರಭಾವಿತರಾಗುತ್ತಾರೆ ಎಂದು ಗಮನಸೆಳೆದಿದ್ದಾರೆ. ಇದು ಜಾಗತಿಕ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ, ಅಲ್ಲಿ ಅನೇಕ ಸೆಲೆಬ್ರಿಟಿಗಳು ಮತ್ತು ರಾಜಕೀಯ ವ್ಯಕ್ತಿಗಳಲ್ಲಿ ಕಾಸ್ಮೆಟಿಕ್ ಸರ್ಜರಿಗಳು ಹೆಚ್ಚು ಸಾಮಾನ್ಯವಾಗುತ್ತಿವೆ.
ಆಧುನಿಕ ವೈದ್ಯಕೀಯ ತಂತ್ರಜ್ಞಾನಗಳ ಸುಲಭ ಲಭ್ಯತೆ ಮತ್ತು ಬಲವಾದ ಆರ್ಥಿಕ ಹಿನ್ನೆಲೆಯೊಂದಿಗೆ, ಇತ್ತೀಚಿನ ದಿನಗಳಲ್ಲಿ ಯಾರು ಬೇಕಾದರೂ ಅದ್ಭುತ ಸುಂದರಿಯಾಗಬಹುದಾಗಿದೆ.
ಅಮೃತಾ ಫಡ್ನವಿಸ್ ಅವರ ಟ್ರಾನ್ಸ್‌ಫಾರ್ಮೇಷನ್ ವಿಡಿಯೋಗೆ ಎಂದಿನಂತೆಯೇ ತಮಾಷೆಯ ಕಾಮೆಂಟ್‌ಗಳೂ ಬಂದಿವೆ. ನಮ್ಮ ತೆರಿಗೆ ಹಣ ಎಲ್ಲಿ ಹೋಗುತ್ತಿದೆ ಎನ್ನುವುದು ಗೊತ್ತಾಗುತ್ತಿದೆ ಎಂದು ಟ್ರೋಲ್ ಮಾಡಿದ್ದಾರೆ.
ಇಂದು, ಅಸಂಖ್ಯಾತ ಸಾರ್ವಜನಿಕ ವ್ಯಕ್ತಿಗಳು ತಮ್ಮ ದೈಹಿಕ ಲಕ್ಷಣಗಳನ್ನು ವರ್ಧನೆ ಮಾಡಿಕೊಳ್ಳಲು ಶಸ್ತ್ರಚಿಕಿತ್ಸೆಗಳು ಮತ್ತು ವೈದ್ಯಕೀಯ ವಿಧಾನಗಳನ್ನು ಆರಿಸಿಕೊಳ್ಳುತ್ತಾರೆ, ಮತ್ತು ಅದು ಅವರ ಆಯ್ಕೆಯಾಗಿದ್ದರೂ, ಅವರು ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ.
ಅಮೃತಾ ಫಡ್ನವಿಸ್ ಮೊದಲು ಕೂಡ ಸುಂದರವಾಗಿದ್ದರು. ಅವರ ಬ್ಯೂಟಿಯಲ್ಲಿ ಯಾವುದೇ ಸಮಸ್ಯೆಗಳು ಇದ್ದಿರಲಿಲ್ಲ. ಆದರೆ, ಮುಖಚಹರೆಯಲ್ಲಿ ಆಗಿರುವ ಬದಲಾವಣೆಯಿಂದಾಗಿ ಅವರಲ್ಲಿ ಮಹಾರಾಷ್ಟ್ರದ ಮಹಿಳೆಯ ಲಕ್ಷಣಗಳೇ ಕಾಣುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಬ್ಯಾಂಕ್ ಉದ್ಯೋಗಿಯಾಗಿದ್ದ ಅಮೃತಾ ಫಡ್ನವಿಸ್, ಮಹಾರಾಷ್ಟ್ರದಲ್ಲಿ ಈಗ ಪ್ರಭಾವಿ ವ್ಯಕ್ತಿ. ಮಧ್ಯ ವಯಸ್ಕ ಮಹಿಳೆಯರು ಅಮೃತಾ ಫಡ್ನವಿಸ್ ಅವರನ್ನು ನೋಡಿಯೇ ತಮ್ಮ ಚಹರೆಯನ್ನು ಬದಲಾಯಿಸಿಕೊಳ್ಳಲು ತಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳಲು ಮುಂದಾಗುತ್ತಿದ್ದಾರೆ.
ಇನ್ನೊಬ್ಬ ವ್ಯಕ್ತಿ, ರಾಜಕಾರಣಿಗಳು ಹಾಗೂ ಅವರ ಕುಟುಂಬದವರು ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸುವ ಬದಲು ತಾವು ಹೇಗೆ ಕಾಣಿಸಿಕೊಳ್ಳಬೇಕು ಅನ್ನೋದರಲ್ಲೇ ಹೆಚ್ಚಾಗಿ ಮಗ್ನರಾಗಿರುತ್ತಾರೆ ಎಂದ್ದಾರೆ.
ಅಮೃತಾ ಫಡ್ನವಿಸ್ ಕಾಸ್ಮೆಟಿಕ್ ಸರ್ಜರಿಯ ಆರೋಪ ನಿರಾಕರಿಸಿದ್ದರೂ ಅಂತರ್ಜಾಲದ ಕಣ್ಣುಗಳಿಂದ ಯಾವುದೇ ರೀತಿಯ ಮೇಕಪ್‌ಗಳ ಸತ್ಯಗಳು ಹೊರಬರದಿರಲು ಸಾಧ್ಯವೇ ಇಲ್ಲ ಎನ್ನವುದಂತೂ ಸತ್ಯ.