ಆಸ್ಪತ್ರೆಗೆ ಸೇರಿಸಲು ವೈದ್ಯರ ನಕಾರ, ನರಳಾಡ್ತಾ ಪ್ರಾಣ ಬಿಟ್ಟ ತುಂಬು ಗರ್ಭಿಣಿ!

First Published Jun 6, 2020, 3:48 PM IST

ಕೊರೋನಾ ಸಂಕಷ್ಟದ ನಡುವೆ ನೊಯ್ಡಾದಲ್ಲಿ ಮಾನವರು ತಲೆ ತಗ್ಗಿಸುವ ಘಟನೆ ವರದಿಯಾಗಿದೆ. ಇಲ್ಲಿ 8 ತಿಂಗಳ ಗರ್ಭಿಣಿ ಚಿಕಿತ್ಸೆ ಸಿಗದೇ ನರಳಾಡುತ್ತಾ ಪ್ರಾಣ ಬಿಟ್ಟಿದ್ದಾಳೆ. ಇಲ್ಲಿನ ಆಸ್ಪತ್ರೆಗಳು ಆಕೆಯನ್ನು ದಾಖಲಿಸಲು ಹಿಂದೆ ಸರಿದ ಪರಿಣಾಮ ಇಂತಹ ದುರಂತ ಸಂಭವಿಸಿದೆ. ಮೃತ ಮಹಿಳೆಯ ಅನಾರೋಗ್ಯದಿಂದ ಬಳಲುತ್ತಿದ್ದ ಹೆಂಡತಿಗೆ ಚಿಕಿತ್ಸೆ ಕೊಡಿಸಲು ಪತಿ ರಾತ್ರಿ ಇಡೀ ಒಂದಾದ ಬಳಿಕ ಮತ್ತೊಂದು ಆಸ್ಪತ್ರೆಗೆ ಅಲೆದಾಡಿದ್ದಾರೆ. ಆದರೆ ಯಾರೊಬ್ಬರೂ ಚಿಕಿತ್ಸೆ ನೀಡಲು ಮುಂದಾಗದ ಪರಿಣಾಮ ಗರ್ಭಿಣಿ ಮಹಿಳೆ ಆಂಬುಲೆನ್ಸ್‌ನಲ್ಲೇ ಕೊನೆಯುಸಿರೆಳೆದಿದ್ದಾಳೆ.