12 ಎಕರೆ ವಿಸ್ತೀರ್ಣದ ಬಂಗಲೆಯಲ್ಲಿ ಮೋದಿ ವಾಸ, ಒಳಗಿದೆ ಸುರಂಗ: ಇಲ್ಲಿದೆ ಫೋಟೋಸ್

First Published 19, Jul 2020, 4:04 PM

ಕೊರೋನಾದಿಂದಾಗಿ ದೇಶಾದ್ಯಂತ ಮಾರ್ಚ್‌ನಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ಹೀಗಿರುವಾಗ ರಾಜಕೀಯ ನಾಯಕರು, ಸಿನಿಮಾ ತಾರೆಯರು ಸೇರಿ ಎಲ್ಲಾ ಜನ ಸಾಮಾನ್ಯರು ತಮ್ಮ ಮನೆಗಳಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ದಿನ ಕಳೆಯುತ್ತಿದ್ದರು.  ಹೀಗಿರುವಾಗ ಪಿಎಂ ಮೋದಿ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನ ಮಂತ್ರಿ ನಿವಾಸದಲ್ಲೇ ಸಮಯ ಕಳೆದಿದ್ದರು. ಅಲ್ಲದೇ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲಾ ರಾಜ್ಯದ ಅಧಿಕಾರಿ ಹಾಗೂ ಮುಖ್ಯಮಂತ್ರಿಗಳೊಡನೆ ನಿರಂತರವಾಗಿ ಅಲ್ಲಿಂದಲೇ ಮಾತುಕತೆ ನಡೆಸಿದ್ದರು. ಜೊತೆಗೆ ಚೀನಾ ಜೊತೆಗಿನ ವಿವಾದ ಸಂಬಂಧ ಅಧಿಕಾರಿಗಳೊಡನೆಯೂ ಅಲ್ಲಿಂದಲೇ ಮಾತುಕತೆ ನಡೆಸಿದ್ದರು. ಈ ಐದು ತಿಂಗಳ ಅವಧಿಯಲ್ಲಿ ಮೋದಿ ಕೇವಲ ತಮ್ಮ ನಿವಾಸದಿಂದ ಹೊರ ಬಂದಿದ್ದರು. ಹೀಗಿರುವಾಗ ಪ್ರಧಾನ ಮಂತ್ರಿ ನಿವಾಸದ ಕುರಿತು ಕೆಲ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಭಾರತದ ಪ್ರಧಾನ ಮಂತ್ರಿಯ ಸರ್ಕಾರಿ ನಿವಾಸದ ಹೆಸರು 7 ರೇಸ್‌ ಕೋರ್ಸ್‌ ರೋಡ್ ಅಥವಾ '7 ಲೋಕ ಕಲ್ಯಾಣ್ ಮಾರ್ಗ್' ಎಂದು ಕರೆಯಲಾಗುತ್ತದೆ. ಪಿಎಂ ಮೋದಿ ಈ ನಿವಾಸದಲ್ಲಿ 2014 ರಿಂದ ವಾಸಿಸುತ್ತಿದ್ದಾರೆ. ಅಲ್ಲದೇ ತಮ್ಮ ಬಹುತೇಕ ಕಾರ್ಯಾಲಯ ಹಾಗೂ ರಾಜಕೀಯ ಸಭೆಯನ್ನು ಇಲ್ಲಿಂದಲೇ ಆಯೋಜಿಸುತ್ತಾರೆ.

ಪ್ರಧಾನ ಮಂತ್ರಿ ನಿವಾಸ 12 ಎಕರೆ ಪ್ರದೇಶ ವಿಸ್ತೀರ್ಣದಲ್ಲಿದೆ. ಇಲ್ಲಿ ಒಂದೆರಡಲ್ಲ, ಬದಲಾಗಿ ಐದು ಬಂಗಲೆಗಳಿವೆ. ಇದರಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯ- ನಿವಾಸ ಕ್ಷೇತ್ರ ಹಾಗೂ ಸುರಕ್ಷಾ ಪ್ರತಿಷ್ಠಾನವಿದೆ. ಇದರಲ್ಲಿ ಒಂದು ಎಸ್‌ಪಿಜಿ ಹಾಗೂ ಮತ್ತೊಂದು ಗೆಸ್ಟ್‌ ಹೌಸ್ ಕೂಡಾ ಇದೆ. ಜೊತೆಗೆ ಇಲ್ಲೊಂದು ಸುರಂಗವೂ ಇದೆ.

7 ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನ ಮಂತ್ರಿ ನಿವಾಸದ ಬಂಗಕಡಯ ನಕ್ಷೆಯನ್ನು ರಾಬರ್ಟ್‌ ಟಾರ್ ರಸೇಲ್ ರಚಿಸಿದ್ದರು. ರಸೇಲ್ 1920 ಹಾಗೂ 1930ರ ದಶಕದಲ್ಲಿ ದೆಹಲಿಯಲ್ಲಿ ನಕ್ಷೆ ತಯಾರಿಸುತ್ತಿದ್ದ ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವಿನ್ ಲುಟಿಯಾನ್ ತಂಡದವರಾಗಿದ್ದರು.

7 ಲೋಕ ಕಲ್ಯಾಣ್ ಮಾರ್ಗದಲ್ಲಿ ಬರೋಬ್ಬರಿ 5 ಬಂಗಲೆಗಳಿವೆ. ಇವುಗಳನ್ನು  1, 3, 5, 7 ಹಾಗೂ 9 ಎಂಬ ಸಂಖ್ಯೆಗಳಿಂದ ಹೆಸರಿಸಲಾಗಿದೆ. ಬಂಗಲೆ ಸಂಖ್ಯೆ  1ರಲ್ಲಿ ಪ್ರಧಾನ ಮಂತ್ರಿ ಸೇವೆಗಾಗಿ ನಿರ್ಮಿಸಲಾಗಿರುವ ಹೆಲಿಪ್ಯಾಡ್ ಇದೆ. ಇದನ್ನು 2003ರಿಂದ ಬಸಲಾಗುತ್ತಿದೆ. ಬಂಗಲೆ ಸಂಖ್ಯೆ 3ರಲ್ಲಿ ಪ್ರಧಾನ ಮಂತ್ರಿ ಅತಿಥಿಗಳಿಗಾಗಿ ಗೆಸ್ಟ್‌ ಹೌಸ್ ಇದೆ. ಬಂಗಲೆ ಸಂಖ್ಯೆ 5ರಲ್ಲಿ ಪ್ರಧಾನ ಮಂತ್ರಿಯ ಖಾಸಗಿ ನಿವಾಸವಿದೆ. ಬಂಗಲೆ ಸಂಖ್ಯೆ 7ರಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯ ಹಾಗೂ ಬಂಗಲೆ ಸಂಖ್ಯೆ 9ರಲ್ಲಿ ಎಸ್‌ಪಿಜಿ ಸಿಬ್ಬಂದಿ ಇರುತ್ತಾರೆ. ಇವರು ಪ್ರಧಾನ ಮಂತ್ರಿಯ ಸುರಕ್ಷತೆ ಜವಾಬ್ದಾರಿ ಹೊಂದಿದ್ದಾರೆ.

ಇವು ದೊಡ್ಡ ದೊಡ್ಡ ಬಂಗಲೆಗಳಲ್ಲ. ಪ್ರಧಾನ ಮಂತ್ರಿ ನಿವಾಸದಲ್ಲಿ ಎರಡು ಬೆಡ್‌ ರೂಂ, ಒಂದು ಎಕ್ಸ್‌ಟ್ರಾ ರೂಂ, ಒಂದು ಡೈನಿಂಗ್ ರೂಂ ಹಾಗೂ ಒಂದು ಲಿವಿಂಗ್ ರೂಂ ಇದೆ. ಈ ಲಿವಿಂಗ್ ರೂಂನಲ್ಲಿ ಒಂದು ಬಾರಿ ಸುಮಾರು 30 ಮಂದಿ ಕುಳಿತುಕೊಳ್ಳಬಹುದು.

ಕುತೂಹಲಕಾರಿ ಮಾಹಿತಿ ಎಂದರೆ ಇಲ್ಲಿ ಸುಮಾರು ಎರಡು ಕಿ. ಮೀಟರ್‌ನಷ್ಟು ಉದ್ದದ ಭೂಗತ ಸುರಂಗ ಮಾರ್ಗವಿದೆ. ಇದು ಪ್ರಧಾನ ಮಂತ್ರಿ ನಿವಾಸ ಹಾಗೂ ಸಫ್ದರ್‌ಗಂಜ್ ವಿಮಾನ ನಿಲ್ದಾಣದ ನಡುವೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿ VIP ಹೆಲಿಕಾಪ್ಟರ್‌ಗಳಿಗಾಗಿ ಪ್ರದೇಶವಿದೆ. ಈ ಮೂಲಕ ಜನಸಂದಣಿ ಕಡಿಮೆಯಾಗುತ್ತದೆ.

ಈ ಸುರಂಗ ಮಾರ್ಗವನ್ನು 2010ರಲ್ಲಿ ಆರಂಭಿಸಿದ್ದು, 2014ರಲ್ಲಿ ಪೂರ್ಣಗೊಂಡಿತ್ತು. ಅಲ್ಲದೇ ಇದನ್ನು ಮೊದಲು ಬಳಸಿದ ಪ್ರಧಾನ ಮಂತ್ರಿ ಮೋದಿ ಆಗಿದ್ದಾರೆ.

ಪ್ರಧಾನಿ ಮೋದಿ ನಿವಾಸಕ್ಕೆ ತೆರಳಲು ಒಂದೇ ಪ್ರವೇಶ ದ್ವಾರವಿರುವುದು. ಇದರ ಪ್ರವೇಶ 9 ಲೋಕ ಕಲ್ಯಾಣ ಮಾರ್ಗ ಮೂಲಕವಾಗಿದೆ. ಇನ್ನು ಯಾವುದೇ ವ್ಯಕ್ತಿ ಪಿಎಂ ಮೋದಿ  ನಿವಾಸಕ್ಕೆ ತೆರಳಿದರೆ ಅವರಿಗೆ ಮೊದಲು 9 ಲೋಕ ಕಲ್ಯಾಣ ಮಾರ್ಗದಿಂದ ಪ್ರವೇಶ ನೀಡಲಾಗುತ್ತದೆ. ಇದಾದ ಬಳಿಕ ಪಾರ್ಕಿಂಗ್ ಇದೆ, ಬಳಿಕ ವೆಲ್‌ಕಂ ರೂಂ.  ಎಲ್ಲಾ ಭದ್ರತಾ ತಪಾಸಣೆ ಬಳಿಕ 7,5,3 ಹಾಗೂ 1 ಲೋಕ ಕಲ್ಯಾಣ ಮಾರ್ಗಕ್ಕೆ ತೆರಳಬೇಕಾಗುತ್ತದೆ.

ಪಿಎಂ ನಿವಾಸದ ಭದ್ರತಾ ಪಡೆ ಎಷ್ಟು ಖಡಕ್ ಎಂದರೆ ಮೋದಿ ಕುಟುಂಬ ಸದಸ್ಯರು ಬಂದರೂ ಅವರೆಲ್ಲರೂ ಈ ತಪಾಸಣೆ ಮಾಡಿಯೇ ಒಳ ಪ್ರವೇಶಿಸಬೇಕಾಗಗುತ್ತದೆ. ಪಿಎಂ ಮೋದಿ ಪರ್ಸನಲ್ ಸೆಕ್ರೆಟರಿ ಎಸ್‌ಪಿಜಿ ಪಡೆಗೆ ಆರಂಭದಲ್ಲೇ ಆಗಮಿಸುವವರ ಹೆಸರು ನೀಡಿರುತ್ತಾರೆ. ಹೀಗಾಗಿ ಈ ಪಟ್ಟಿಯಲ್ಲಿ ಹೆಸರಿರುವವರಿಗಷ್ಟೇ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ

ಪ್ರಧಾನ ಮಂತ್ರಿ ನಿವಾಸದಲ್ಲಿ ಸಿನಿಮಾ ವೀಕ್ಷಣೆಗೂ ವ್ಯವಸ್ಥೆ ಇದೆ. 2006ರಲ್ಲಿ ಲಗೇ ರಹೋ ಮುನ್ನಾ ಭಾಯಿ ಸಿನಿಮಾ ರಿಲೀಸ್ ಆದ ಮರುಕ್ಷಣವೇ ಯುಎಫ್‌ಓ ಮೂವೀಸ್‌ನ ಡೈರೆಕ್ಷನ್‌ನಿಂದ 7 ಲೋಕ ಕಲ್ಯಾಣ ಮಾರ್ಗದಲ್ಲಿ ಸಿನಿಮಾದ ಪ್ರೈವೇಟ್ ಸ್ಕ್ರೀನಿಂಗ್ ನಡೆದಿತ್ತು. ಬಳಿಕ ತಾರೆ ಜಮೀನ್ ಪರ್ ಹಾಗೂ ಪೀಪ್ಲಿ ಲೈವ್ ಕೂಡಾ ಇಲ್ಲಿ ವೀಕ್ಷಿಸಲಾಗಿತ್ತು.

loader