MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಸೊಂಟ ನೋವಿನಿಂದ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ಲವೇ? ಈ ಯೋಗ ಮಾಡಿ

ಸೊಂಟ ನೋವಿನಿಂದ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ಲವೇ? ಈ ಯೋಗ ಮಾಡಿ

ಆರೋಗ್ಯ ತಜ್ಞರು (health experts) ಪ್ರತಿದಿನ ಸಾಕಷ್ಟು ನಿದ್ರೆ ಮಾಡಲು ಶಿಫಾರಸು ಮಾಡುತ್ತಾರೆ. ಏಕೆಂದರೆ, ಗಾಢ ಮತ್ತು ಸಾಕಷ್ಟು ನಿದ್ರೆ ಮಾಡುವುದರಿಂದ ಸ್ನಾಯುಗಳು ರಿಪೇರಿ ಮಾಡುವುದಲ್ಲದೆ  ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಎಂಬುದು ಸಾಬೀತಾಗಿದೆ. ಆದರೆ ವಿವಿಧ ಕಾರಣಗಳು ನಿದ್ರೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಅಂತಹ ಒಂದು ಕಾರಣವೆಂದರೆ ಸೊಂಟ ಮತ್ತು ಸೊಂಟದ ಸ್ನಾಯುಗಳಲ್ಲಿ ಬಿಗಿತ.  

2 Min read
Suvarna News | Asianet News
Published : Oct 09 2021, 12:08 PM IST
Share this Photo Gallery
  • FB
  • TW
  • Linkdin
  • Whatsapp
110

ಆರೋಗ್ಯ ತಜ್ಞರು (health experts) ಪ್ರತಿದಿನ ಸಾಕಷ್ಟು ನಿದ್ರೆ ಮಾಡಲು ಶಿಫಾರಸು ಮಾಡುತ್ತಾರೆ. ಏಕೆಂದರೆ, ಗಾಢ ಮತ್ತು ಸಾಕಷ್ಟು kನಿದ್ರೆ ಮಾಡುವುದರಿಂದ ಸ್ನಾಯುಗಳು ರಿಪೇರಿ ಮಾಡುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಎಂಬುದು ಸಾಬೀತಾಗಿದೆ. ಆದರೆ ವಿವಿಧ ಕಾರಣಗಳು ನಿದ್ರೆಯ ಮೇಲೆ ಪರಿಣಾಮ (Effect) ಬೀರಬಹುದು ಮತ್ತು ಅಂತಹ ಒಂದು ಕಾರಣವೆಂದರೆ ಸೊಂಟ ಮತ್ತು ಸೊಂಟದ ಸ್ನಾಯುಗಳಲ್ಲಿ ಬಿಗಿತ.  

210

ಹೌದು ಸೊಂಟ ನೋವು ಸಾಮಾನ್ಯವಾಗಿ ಜನರಿಗೆ ಕಾಡುವಂತಹ ಸಮಸ್ಯೆ, ಇದರ ಬಗ್ಗೆ ತಿಳಿದಿರದಿರಬಹುದು, ಆದರೆ ಸೊಂಟ ಅಥವಾ ಸೊಂಟದ ಸ್ನಾಯುಗಳಲ್ಲಿನ ಬಿಗಿತವು ನಿದ್ರೆ ಸಮಸ್ಯೆಗೆ (sleeping problem) ಕಾರಣವಾಗುತ್ತದೆ ಮತ್ತು  ಗಾಢ ನಿದ್ರೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.

310

ಇಲ್ಲಿ ಹೇಳಿರುವ 3 ಯೋಗಾಸನಗಳ (Yoga) ಸಹಾಯದಿಂದ ಸೊಂಟ ಮತ್ತು ಸೊಂಟದ ಸ್ನಾಯುಗಳನ್ನು (Yoga for back and pelvic muscles) ಸಡಿಲಗೊಳಿಸಿ ಗಾಢ ಮತ್ತು ಆರಾಮದಾಯಕ ನಿದ್ರೆಪಡೆಯಬಹುದು. ಈ ಯೋಗಾಸನಗಳ ಪ್ರಮುಖ ಲಕ್ಷಣವೆಂದರೆ  ಮಲಗುವ ಮೊದಲು ಅವುಗಳನ್ನು ಹಾಸಿಗೆಯ ಮೇಲೆ (Yoga positions on bed) ಮಾಡಬಹುದು.

410

ಗಾಢ ನಿದ್ರೆಗೆ ಯೋಗ: ಗಾಢ ನಿದ್ರೆ ಪಡೆಯಲು ಯೋಗಾಸನಗಳು (yoga for deep sleep)
ಸೊಂಟ ಮತ್ತು ಸೊಂಟದ ಸೆಟೆತವನ್ನು ನಿವಾರಿಸಿ ಗಾಢ ನಿದ್ರೆ ಪಡೆಯಲು ಊಟ ಮಾಡಿದ 1 ಗಂಟೆಯ ನಂತರ ಈ ಯೋಗಾಸನಗಳನ್ನು ಮಾಡಿ. ಇದೇ ವೇಳೆ ಈ ಯೋಗಾಸನಗಳನ್ನು ಮಾಡುವಾಗ ಆಳವಾಗಿ ಉಸಿರನ್ನು (deep breath) ತೆಗೆದುಕೊಳ್ಳಿ. ಇದು ನರಮಂಡಲವನ್ನು ಸಡಿಲಗೊಳಿಸುತ್ತದೆ ಮತ್ತು  ಬೇಗನೆ ನಿದ್ರೆ ಬರುತ್ತದೆ.

510

ಅಶ್ವ ಸಂಚಲನಾಸನ (ashwa sanchalanasana)
ಸೊಂಟದ ಮೇಲೆ ನೇರ ಪರಿಣಾಮ ಬೀರುವ ಈ ಯೋಗಾಸನದೊಳಗೆ ಸ್ವಲ್ಪ ಬದಲಾವಣೆ ಮಾಡಬೇಕುಮೊದಲು ಹಾಸಿಗೆಯ ಮೇಲೆ ಹೊಟ್ಟೆಯ ಮೇಲೆ ಮಲಗಿ.
ಈಗ ದೈಹಿಕ ತೂಕವನ್ನು  (body weight ಮೊಣಕಾಲುಗಳು ಮತ್ತು ಅಂಗೈಗಳ ಮೇಲೆ ಹಾಕಿ ವಿಶ್ರಾಂತಿ ಪಡೆಯಿರಿ.
ನಂತರ ನಿಧಾನವಾಗಿ  ಬಲಗಾಲನ್ನು ಎದೆಯ ಕೆಳಗೆ ಇರಿಸಿ, ಅದನ್ನು ಮುಂದೆ ತನ್ನಿ.

610

ಬಲ ಮೊಣಕಾಲು ಬಲ ಹಿಮ್ಮಡಿಯ ಮೇಲೆ ಬರಬೇಕು.
ಅದೇ ಸಮಯದಲ್ಲಿ ಅಂಗೈ ಮತ್ತು ಬಲ ಪಂಜ ಎರಡೂ ಒಂದು ಸಾಲಿನಲ್ಲಿ ಬರಬೇಕು.
ಈಗ ಸೊಂಟದ ಸ್ನಾಯುಗಳಲ್ಲಿ ಹಿಗ್ಗುವಿಕೆಯನ್ನು ಅನುಭವಿಸುವಾಗ ಆಳವಾದ ಉಸಿರನ್ನು (Deep Breathing) ತೆಗೆದುಕೊಳ್ಳಿ ಮತ್ತು 5 ಬಾರಿ ಉಸಿರನ್ನು ಹೊರಬಿಡಿ.
ನಂತರ ಈ ವಿಧಾನವನ್ನು ಎಡಪಾದದಿಂದ ಪುನರಾವರ್ತಿಸಿ.

710

ಪವನಮುಕ್ತ ಆಸನ (pavanamuktasana)
ಈ ಯೋಗಾಸನವು  ಸೊಂಟದಿಂದ ಎಲ್ಲಾ ಬಿಗಿತವನ್ನು ನಿವಾರಿಸುತ್ತದೆ.

ಸೊಂಟವನ್ನು ಕೆಳಗೆ ಇಳಿಸಿ ಹಾಸಿಗೆಯ ಮೇಲೆ ಮಲಗಿ. (Lay Down).
ಈಗ ಎರಡೂ ಮೊಣಕಾಲುಗಳನ್ನು ಬಾಗಿಸಿ ಎದೆಗೆ ಸರಿಸಿ.

810

ಎರಡೂ ಕೈಗಳಿಂದ ಕಾಲುಗಳನ್ನು ಮುಂದಕ್ಕೆ ಹಿಡಿದು ಕೊಳ್ಳಿ ಮತ್ತು ಭುಜಗಳನ್ನು ವಿಶ್ರಾಂತಿ ಪಡೆಯಿರಿ.
ಈಗ ಈ ಭಂಗಿಯಲ್ಲಿ ಆಳವಾದ ಮತ್ತು ಆರಾಮದಾಯಕ ಉಸಿರನ್ನು ತೆಗೆದುಕೊಳ್ಳಿ ಮತ್ತು ಸೊಂಟದ ಹಿಗ್ಗುವಿಕೆಯನ್ನು ಅನುಭವಿಸಿ.
ಹೀಗೆ ಮಾಡುತ್ತಿದ್ದರೆ ರಾತ್ರಿ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತದೆ. 

910

ಬಾಲಾಸನ (Balasana)
ಹಾಸಿಗೆಯ ಮೇಲೆ ಮೊಣಕಾಲುಗಳ ಮೇಲೆ ಕುಳಿತುಕೊಳ್ಳಬೇಕು.
ಈಗ ಎರಡೂ ಮೊಣಕಾಲುಗಳನ್ನು ಸೊಂಟಕ್ಕಿಂತ ಹೆಚ್ಚು ಅಗಲಗೊಳಿಸಬೇಕು.
ನಂತರ ತಲೆಯನ್ನು ಮುಂದೆ ಹಾಸಿಗೆಯ ಮೇಲೆ ವಿಶ್ರಾಂತಿ (rest) ಪಡೆಯಲು ಪ್ರಯತ್ನಿಸಿ.

1010

ಎರಡೂ ಕೈಗಳನ್ನು ತಲೆಯ ಮುಂಭಾಗದಲ್ಲಿ ಸಂಪೂರ್ಣವಾಗಿ ಚಾಚಿ.
ಅದೇ ಭಂಗಿಯಲ್ಲಿ ಆಳವಾದ ಮತ್ತು ಆರಾಮದಾಯಕವಾಗಿ ಉಸಿರಾಡುತ್ತಾ ಇರಿ. 
ಇದು ಸೊಂಟ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 
ಇದರಿಂದ ಚೆನ್ನಾಗಿ ನಿದ್ರೆ ಮಾಡಲು ಸಹ ಸಹಕಾರಿಯಾಗಿದೆ. 

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved