Sleep Paralysis : ನಿದ್ರೆಯಲ್ಲಿ ಸತ್ತ ಅನುಭವ ನಿಮಗೂ ಆಗಿದ್ಯಾ?
ನಿದ್ರಾ ಪಾರ್ಶ್ವವಾಯು ಅನ್ನೋದು ಒಂದು ವಿಚಿತ್ರವಾದ ಕಾಯಿಲೆಯಾಗಿದೆ. ಆ ರೀತಿ ಆದರೆ ಮೈ ಜುಂ ಎನಿಸುವ ಅನುಭವ ಉಂಟಾಗುತ್ತೆ. ಹಾಗಿದ್ರೆ ನಿದ್ರೆಯ ಪಾರ್ಶ್ವವಾಯು ಎಂದರೇನು ಮತ್ತು ಅದನ್ನು ಹೇಗೆ ನಿಭಾಯಿಸುವುದು ಅನ್ನೋದನ್ನು ನೀವು ತಿಳಿಯಬೇಕು. ಜೊತೆಗೆ ನಿದ್ರಾ ಪಾರ್ಶ್ವವಾಯುವನ್ನು ನಿರ್ವಹಿಸಲು ಕೆಲವು ಸುಲಭ ಸಲಹೆಗಳನ್ನು ಅಳವಡಿಸಿಕೊಳ್ಳಬಹುದು.
ನಿದ್ರೆಯ ಪಾರ್ಶ್ವವಾಯು (sleep paralysis) ಹೆಚ್ಚಿನ ಜನರಿಗೆ ತಿಳಿದಿರದ ಸ್ಥಿತಿಯಾಗಿದೆ. ನಿದ್ರೆಯ ಪಾರ್ಶ್ವವಾಯುವಿನ ಸಮಸ್ಯೆ ಇದ್ದಾಗ, ವ್ಯಕ್ತಿ ಎದ್ದ ನಂತರವೂ ತನ್ನ ದೇಹದೊಂದಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಾನೆ. ನಿದ್ರೆಯಿಂದ ಎದ್ದ ನಂತರವೂ, ಆತನಿಗೆ ನೋಡಲು ಸಾಧ್ಯವಾಗುತ್ತದೆ, ಆದರೆ ವ್ಯಕ್ತಿಗೆ ಎದ್ದೇಳುವುದು ಅಥವಾ ಚಲಿಸುವುದು ಅಸಾಧ್ಯವಾಗುತ್ತದೆ. ಜನರು ಈ ಪರಿಸ್ಥಿತಿಯನ್ನು ತುಂಬಾ ಗಂಭೀರವಾಗಿ ಪರಿಗಣಿಸುವುದಿಲ್ಲ. ವಾಸ್ತವವಾಗಿ ಈ ಸ್ಥಿತಿಯು ಸಾಕಷ್ಟು ಅಪಾಯಕಾರಿಯಾಗಿರಬಹುದು. ನೀವು ನಿಮ್ಮನ್ನು ಚಲಿಸಲು ಸಾಧ್ಯವಾಗದಿದ್ದಾಗ, ಕೆಲವೊಮ್ಮೆ ವ್ಯಕ್ತಿಗೆ ಉಸಿರುಗಟ್ಟಿದ ಅನುಭವ ಉಂಟಾಗುತ್ತೆ. ಇಂತಹ ಸಮಸ್ಯೆ ಬಂದಾಗ ಅದನ್ನು ಹೇಗೆ ನಿರ್ವಹಿಸೋದು ಅನ್ನೋದರ ಬಗ್ಗೆ ತಿಳಿಯೋಣ.
ನಿದ್ರಾ ಪಾರ್ಶ್ವವಾಯು ಎಂದರೇನು?
ನಿದ್ರಾ ಪಾರ್ಶ್ವವಾಯುವು ವ್ಯಕ್ತಿಯ ದೇಹವು ಸ್ವಲ್ಪ ಸಮಯದವರೆಗೆ ನಿಶ್ಚಲವಾಗಿರುವ ಸ್ಥಿತಿಯಾಗಿದೆ. ಸಾಮಾನ್ಯವಾಗಿ ಈ ಸ್ಥಿತಿಯು ಒಬ್ಬ ವ್ಯಕ್ತಿಯು ನಿದ್ರೆ ಮಾಡಲು ಹೋದಾಗ ಅಥವಾ ಎಚ್ಚರಗೊಳ್ಳಲು ಹೊರಟಾಗ ಸಂಭವಿಸುತ್ತದೆ. ಈ ಪರಿಸ್ಥಿತಿಯಲ್ಲಿ, ವ್ಯಕ್ತಿಯು ಬಯಸಿದರೂ ಸಹ ತನ್ನ ಕೈಕಾಲುಗಳನ್ನು ಚಲಿಸಲು ಸಾಧ್ಯವಾಗುವುದಿಲ್ಲ. ಈ ಸ್ಥಿತಿಯು ಸ್ವಲ್ಪ ಸಮಯದವರೆಗೆ ಸಂಭವಿಸುತ್ತದೆ, ನಂತರ ವ್ಯಕ್ತಿ ಸಾಮಾನ್ಯ ಸ್ಥಿತಿಗೆ ಬರುತ್ತಾನೆ..
ನಿದ್ರೆಯ ಪಾರ್ಶ್ವವಾಯು ಯಾವಾಗ ಸಂಭವಿಸುತ್ತದೆ?
ನಿದ್ರೆಯ ಪಾರ್ಶ್ವವಾಯು ಸಾಮಾನ್ಯವಾಗಿ ಎರಡು ಬಾರಿ ಸಂಭವಿಸುತ್ತದೆ. ನೀವು ನಿದ್ರಿಸುವಾಗ ಇದು ಸಂಭವಿಸಿದರೆ, ಅದನ್ನು ಪ್ರಿಡೋಮಿಟಲ್ ಸ್ಲೀಪ್ ಪ್ಯಾರಲೈಸ್ ಎಂದು ಕರೆಯಲಾಗುತ್ತದೆ. ನೀವು ಎಚ್ಚರವಾಗಿರುವಾಗ ಇದು ಸಂಭವಿಸಿದರೆ, ಅದನ್ನು ಪೋಸ್ಟ್ಡೊಮಿಟಲ್ ಸ್ಲೀಪ್ ಪ್ಯಾರಲೈಸ್ ಎಂದು ಕರೆಯಲಾಗುತ್ತದೆ.
ನಿದ್ರೆಯ ಪಾರ್ಶ್ವವಾಯುವಿಗೆ ಕಾರಣಗಳು
ನಿದ್ರೆಯ ಪಾರ್ಶ್ವವಾಯುವಿನ ಹಿಂದೆ ಹಲವಾರು ಕಾರಣಗಳಿವೆ. ಉದಾಹರಣೆಗೆ, ನಿದ್ರೆಯ ಕೊರತೆಯಿಂದ (less sleep) ಹಿಡಿದು ಕೆಲವು ಔಷಧಿಗಳನ್ನು ಸೇವಿಸುವುದು, ಒತ್ತಡ ಮತ್ತು ಆತಂಕ, ಆಲ್ಕೋಹಾಲ್ ಸೇವನೆ ಅಥವಾ ನಿದ್ರೆಯ ಪಾರ್ಶ್ವವಾಯುವಿನ ಕುಟುಂಬದ ಇತಿಹಾಸ, ಇತ್ಯಾದಿಗಳು ನಿದ್ರೆಯ ಪಾರ್ಶ್ವವಾಯುವಿನ ಸಮಸ್ಯೆಗೆ ಕಾರಣವಾಗುವ ಅಥವಾ ಅದನ್ನು ಇನ್ನಷ್ಟು ಹದಗೆಡಿಸುವ ಕೆಲವು ಕಾರಣಗಳಾಗಿವೆ.
ನಿದ್ರೆಯ ಪಾರ್ಶ್ವವಾಯುವಿನ ಲಕ್ಷಣಗಳೇನು?
ನಿದ್ರೆಯ ಪಾರ್ಶ್ವವಾಯುವಿದ್ದಾಗ ವ್ಯಕ್ತಿಯಲ್ಲಿ ಕೆಲವು ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ಉದಾಹರಣೆಗೆ-
ಎಚ್ಚರವಾದ ನಂತರವೂ ನಿಮ್ಮ ಸ್ನಾಯುಗಳನ್ನು ಚಲಿಸಲು ಅಸಮರ್ಥರಾಗುವುದು. ಈ ಪರಿಸ್ಥಿತಿಯಲ್ಲಿ, ವ್ಯಕ್ತಿಯು ತಾನು ಎಚ್ಚರವಾಗಿದ್ದೇನೆಂದು ತಿಳಿದಿದ್ದಾನೆ, ಆದರೆ ಅವನಿಗೆ ತನ್ನ ದೇಹವನ್ನು ಚಲಿಸಲು ಸಾಧ್ಯವಾಗೋದಿಲ್ಲ.
ನಿದ್ರೆಯ ಪಾರ್ಶ್ವವಾಯುವಿದ್ದಾಗ, ದೇಹವು ನಿಶ್ಚಲವಾಗಿರುವುದಲ್ಲದೆ, ವ್ಯಕ್ತಿಯು ಮಾತನಾಡಲು ಅಸಮರ್ಥನಾಗುತ್ತಾನೆ. ವ್ಯಕ್ತಿಯು ಬಯಸಿದರೂ ಏನನ್ನೂ ಹೇಳಲು ಸಾಧ್ಯವಾಗೋದಿಲ್ಲ (cant talk). ಇಂತಹ ಪರಿಸ್ಥಿತಿಯಲ್ಲಿ ಯಾರು ನಮ್ಮ ಮೇಲೆ ಬಂದು, ನಮ್ಮನ್ನು ನಿಯಂತ್ರಿಸುವಂತಹ ಅನುಭವ ಕೂಡ ಉಂಟಾಗುತ್ತದೆ.
ನಿದ್ರೆಯ ಪಾರ್ಶ್ವವಾಯುವಿದ್ದಾಗ ವ್ಯಕ್ತಿಯು ಉಸಿರಾಟದ ತೊಂದರೆ ಎದುರಿಸಬಹುದು.
ಒಬ್ಬ ವ್ಯಕ್ತಿಯು ನಿದ್ರೆಯ ಪಾರ್ಶ್ವವಾಯುವಿಗೆ ಒಳಗಾದಾಗ ವಿಚಿತ್ರ ಭಯ ಅನುಭವಿಸುತ್ತಾನೆ. ಕೋಣೆಯಲ್ಲಿ ಯಾರೋ ಇದ್ದಾರೆ ಅಥವಾ ಯಾರಾದರೂ ತನ್ನ ಹತ್ತಿರ ಬರುತ್ತಿದ್ದಾರೆ ಎಂದು ಅವನು ಭಾವಿಸುತ್ತಾನೆ, ಇದು ಅವನಿಗೆ ಉಸಿರುಗಟ್ಟುವಂತೆ ಮಾಡುತ್ತದೆ.
ನಿದ್ರೆಯ ಪಾರ್ಶ್ವವಾಯುವನ್ನು ಹೇಗೆ ನಿಭಾಯಿಸುವುದು?
ನೀವು ನಿದ್ರೆಯ ಪಾರ್ಶ್ವವಾಯು ಸಮಸ್ಯೆ ಹೊಂದಿದ್ದರೆ, ಅದನ್ನು ತಡೆಗಟ್ಟಲು ಕೆಲವು ಸುಲಭ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು-
ನಿಯಮಿತವಾಗಿ ವ್ಯಾಯಾಮ (daily exercise) ಮಾಡಿ.
ಬೆನ್ನಿನ ಮೇಲೆ ಮಲಗುವುದನ್ನು ತಪ್ಪಿಸಿ.
ನಿದ್ರಾಹೀನತೆ, ನಾರ್ಕೊಲೆಪ್ಸಿ ಅಥವಾ ಬೈಪೋಲಾರ್ ಅಸ್ವಸ್ಥತೆಯ ಇದ್ದರೆ, ಸಾಧ್ಯವಾದಷ್ಟು ಬೇಗ ಚಿಕಿತ್ಸೆ ಪಡೆಯಿರಿ.
ನಿಮ್ಮ ನಿದ್ರೆಯ ಮಾದರಿಯನ್ನು ಸುಧಾರಿಸಿಕೊಳ್ಳಿ. ಪ್ರತಿದಿನ ಸಾಕಷ್ಟು ನಿದ್ರೆ ಮಾಡಿ ಮತ್ತು ಪ್ರತಿದಿನ ಒಂದೇ ಸಮಯದಲ್ಲಿ ಮಲಗುವುದನ್ನು ಅಭ್ಯಾಸ ಮಾಡಿ.
ನೀವು ಯಾವುದೇ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ ಮತ್ತು ಅದರ ನಂತರ ನಿಮಗೆ ಈ ಸಮಸ್ಯೆ ಇದ್ದರೆ, ನಿಮ್ಮ ವೈದ್ಯರೊಂದಿಗೆ ಒಮ್ಮೆ ಮಾತನಾಡಿ. ಪರಿಹಾರ ಕಂಡುಕೊಳ್ಳೋದು ಉತ್ತಮ.
ಯೋಗ, ಧ್ಯಾನ ತಪ್ಪಿಸಬೇಡಿ..!
ನಿಯಮಿತವಾಗಿ ಯೋಗ ಮತ್ತು ಧ್ಯಾನ (meditation) ಮಾಡುವುದರಿಂದ ನೀವು ಪ್ರಯೋಜನ ಪಡೆಯಬಹುದು.
ಈ ಕ್ರಮಗಳನ್ನು ಅಳವಡಿಸಿಕೊಂಡ ನಂತರವೂ ನಿಮಗೆ ಪರಿಹಾರ ಸಿಗದಿದ್ದರೆ, ನೀವು ಒಮ್ಮೆ ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು. ನಿದ್ರಾ ಪಾರ್ಶ್ವವಾಯು ಸಮಸ್ಯೆ ಹೆಚ್ಚು ಹೆಚ್ಚು ಕಂಡು ಬಂದರೆ, ಅದನ್ನು ಇಗ್ನೋರ್ ಮಾಡಲೇಬೇಡಿ. ಶೀಘ್ರವೇ ವೈದ್ಯರನ್ನು ಕಂಡು ಸರಿಯಾದ ಚಿಕಿತ್ಸೆ ಪಡೆಯೋದು ಮುಖ್ಯ.