ಪಿನ್ ವರ್ಮ್: ಈ ಕರುಳಿನ ಸೋಂಕಿಗೆ ಚಿಕಿತ್ಸೆ ನೀಡಲು ಸುಲಭ ಮನೆಮದ್ದು ಇಲ್ಲಿದೆ

First Published Feb 6, 2021, 4:52 PM IST

ಪಿನ್ ವರ್ಮ್ ಕರುಳಿನ ಮೇಲೆ ಪರಿಣಾಮ ಬೀರುವ ಸಾಮಾನ್ಯ ವರ್ಮ್ ಸೋಂಕು. ಈ ಹುಳುಗಳು ಸುಲಭವಾಗಿ ದೇಹವನ್ನು ಸೇರುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯ ಮೂಲಕ ಎಲ್ಲೆಡೆ ಪ್ರಯಾಣಿಸುತ್ತವೆ. ಅವುಗಳ ಮೊಟ್ಟೆಗಳನ್ನು ಗುದದ್ವಾರದ ಬಳಿ ಚರ್ಮದ ಮಡಿಕೆಗಳಲ್ಲಿ ಇಡುತ್ತವೆ. ಇದು ಹೆಚ್ಚು ಸಾಂಕ್ರಾಮಿಕ ಮತ್ತು ಕೈ ತೊಳೆಯದೇ ಪರಸ್ಪರ ಸ್ಪರ್ಶಿಸುವಾಗ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಯು ಗುದ ಪ್ರದೇಶವನ್ನು ಮುಟ್ಟಿದಾಗ, ಮೊಟ್ಟೆಗಳು ಬೆರಳುಗಳ ಮೇಲೆ ಅಂಟಬಹುದು ಮತ್ತು ಅವುಗಳ ಸುತ್ತಲಿನ ಸ್ಥಳಗಳನ್ನು ಕಲುಷಿತಗೊಳಿಸಬಹುದು.