ಕ್ರಿಸ್ಮಸ್- ನ್ಯೂ ಇಯರ್ ಪಾರ್ಟಿಗಳಲ್ಲಿ ಮೈ ಮರೆತ್ರೆ ಹೃದಯಕ್ಕೆ ತೊಂದ್ರೆ ಎಚ್ಚರ!
ಪಾರ್ಟಿಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ಆಲ್ಕೋಹಾಲ್, ಜಂಕ್ ಫುಡ್ ಸೇವಿಸುತ್ತಾ ನಾವು ಎಂಜಾಯ್ ಮಾಡ್ತೀವಿ ಅಲ್ವಾ? ಆದ್ರೆ ನಿಮಗೆ ಗೊತ್ತಾ? ಹೀಗೆ ಮಾಡೋದು ಅಪಾಯವನ್ನು ಆಹ್ವಾನಿಸಿದ ಹಾಗೆ. ಹೌದು. ಪಾರ್ಟಿಯಲ್ಲಿ ಮೈಮರೆತ ನಮಗೆ ಹಾಲಿಡೇ ಹಾರ್ಟ್ ಸಿಂಡ್ರೋಮ್ನ ರೋಗಲಕ್ಷಣಗಳು ಕಂಡುಬರೋದೆ ಗೊತ್ತಾಗಲ್ಲ. ಈ ಅಸ್ವಸ್ಥತೆಯು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಸಹ ಹೆಚ್ಚಿಸುತ್ತದೆ
ಹಾಲಿಡೇ ಹಾರ್ಟ್ ಸಿಂಡ್ರೋಮ್ (holiday heart syndrome) ಬಗ್ಗೆ ಕೇಳಿದ್ದೀರಾ? ಇಲ್ಲಾ ಅಲ್ವಾ? ಏನಿದ್ದು ವಿಚಿತ್ರ ಹೆಸರು ಅಂತ ಯೋಚನೆ ಮಾಡ್ಬೇಡಿ. ಇದು ಅತಿಯಾದ ಆಲ್ಕೋಹಾಲ್ ಸೇವನೆಗೆ ಸಂಬಂಧಿಸಿದೆ. ವೈದ್ಯಕೀಯ ಇತಿಹಾಸವಿಲ್ಲದ ಜನರಲ್ಲೂ ಈ ಸಿಂಡ್ರೋಮ್ ಕಂಡು ಬರಬಹುದು. ಜನರ ರಜಾದಿನಗಳು ಮತ್ತು ಪಾರ್ಟಿಗಳಲ್ಲಿ ಆಲ್ಕೋಹಾಲ್ ಒಂದು ಪ್ರಮುಖ ಭಾಗವಾಗಿದೆ. ಅದರಲ್ಲೂ ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆಯಲ್ಲಿ ಆಲ್ಕೋಹಾಲ್ ಹೆಚ್ಚಾಗಿ ಬಳಸಲಾಗುತ್ತೆ. ಪಾರ್ಟಿಗಳ ಕ್ರೇಜ್ ಹೆಚ್ಚಿಸುವ ಈ ಆಲ್ಕೋಹಾಲ್ ಗಳು ಯಾವ ಸಂದರ್ಭದಲ್ಲೂ ಜೀವಕ್ಕೆ ಹಾನಿಯನ್ನುಂಟು ಮಾಡಬಹುದು ಗೊತ್ತಾ?
ಎನ್ಸಿಬಿಐ ಪ್ರಕಾರ, ಹಾಲಿಡೇ ಹಾರ್ಟ್ ಸಿಂಡ್ರೋಮ್ ಅನ್ನು ಆಲ್ಕೋಹಾಲ್-ಪ್ರೇರಿತ ಏಟ್ರಿಯಲ್ ಇಕೊನೊಮಿಯಾ ಎಂದೂ ಕರೆಯಲಾಗುತ್ತದೆ. ಆಲ್ಕೋಹಾಲ್ ಸೇವನೆಯಿಂದ (consuming alcohol) ದೇಹದಲ್ಲಿ ಎಥೆನಾಲ್ ಮಟ್ಟವು ಹೆಚ್ಚಾಗಿರುವುದು ಇದಕ್ಕೆ ಕಾರಣ. ಇದರಿಂದಲೇ ಹೃದಯದ ಸಮಸ್ಯೆ ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತೆ.
ಹಾಲಿಡೇ ಹಾರ್ಟ್ ಸಿಂಡ್ರೋಮ್ ಗೆ ಈ ಹೆಸರು ಏಕೆ ಬಂತು?: ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ರಜಾದಿನಗಳಲ್ಲಿ ಈ ಹೃದಯ ಅಸ್ವಸ್ಥತೆಯ ಪ್ರಕರಣಗಳು ಹೆಚ್ಚು ಸಾಮಾನ್ಯವಾಗಿರುತ್ತವೆ, ಆದ್ದರಿಂದ ಇದನ್ನು ಹಾಲಿಡೇ ಹಾರ್ಟ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಈ ಹೃದಯ ಸಂಬಂಧಿ ತೊಂದರೆಯು ಉಪ್ಪಿನ ಆಹಾರ ಮತ್ತು ಆಲ್ಕೋಹಾಲ್ ನ ಅತಿಯಾದ ಸೇವನೆಗೆ ಸಂಬಂಧಿಸಿದೆ.
ಹಾಲಿಡೇ ಹಾರ್ಟ್ ಸಿಂಡ್ರೋಮ್ ಹೆಚ್ಚಾಗಿ ಪಾರ್ಟಿಗಳು-ರಜಾದಿನಗಳಲ್ಲಿ ಕಂಡುಬರುತ್ತದೆ. ಇದು ಅತಿಯಾಗಿ ಡ್ರಿಂಕ್ಸ್ ಮಾಡೋದ್ರ ಅಪಾಯಕಾರಿ ಅಡ್ಡಪರಿಣಾಮವಾಗಿದೆ. ತಕ್ಷಣವೇ ನಿಮ್ಮ ಸ್ಥಿತಿಯು ಮಾರಣಾಂತಿಕವಾಗದಿದ್ದರೂ ಸಹ, ದೀರ್ಘಾವಧಿಯಲ್ಲಿ ಅದು ಹೃದಯ ವೈಫಲ್ಯ (heart failure) ಮತ್ತು ಪಾರ್ಶ್ವವಾಯು ಸೇರಿದಂತೆ ಗಂಭೀರ ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಹಾಲಿಡೇ ಹಾರ್ಟ್ ಸಿಂಡ್ರೋಮ್ ನ ಲಕ್ಷಣಗಳು ಯಾವುವು ನೋಡೋಣ...
ಹೃದಯ ಬಡಿತ
ಹೆಚ್ಚು ದಣಿದಿರುವಂತೆ ಭಾಸವಾಗುತ್ತಿದೆ
ತಲೆತಿರುಗುವಿಕೆ ಅಥವಾ ಮೂರ್ಛೆ ಹೋಗುವುದು
ಎದೆ ನೋವು, ಒತ್ತಡ ಅಥವಾ ಅಸ್ವಸ್ಥತೆ
ವಿಶ್ರಾಂತಿ ಪಡೆಯುವಾಗಲೂ ಉಸಿರಾಡಲು ಕಷ್ಟವಾಗುವುದು
ಹಾಲಿಡೇ ಹಾರ್ಟ್ ಸಿಂಡ್ರೋಮ್ ಅನ್ನು ಗುಣಪಡಿಸಬಹುದು. ಆದರೆ ಇದು ಅನೇಕ ಮಾರಣಾಂತಿಕ ವೈದ್ಯಕೀಯ ಪರಿಸ್ಥಿತಿಗಳಿಗೆ ಸಂಬಂಧಿಸಿದೆ. ಚಿಕಿತ್ಸೆ ನೀಡದಿದ್ದರೆ, ಪ್ರಸ್ತುತ ಪರಿಸ್ಥಿತಿ ವೇಗವಾಗಿ ಹದಗೆಡಬಹುದು. ಇದು ಆರ್ಟೆಮಿಯಾ ಮತ್ತು ನ್ಯುಮೋನಿಯಾಕ್ಕೆ ಕಾರಣವಾಗಬಹುದು. ಅಲ್ಲದೆ ಈ ಸಮಸ್ಯೆಯು ಥ್ರಂಬೋಎಂಬೋಲಿಸಮ್ ಗೆ ಕಾರಣವಾಗಬಹುದು, ಇದು ರಕ್ತ ಹೆಪ್ಪುಗಟ್ಟುವಿಕೆಯಿಂದ ರಕ್ತ ನಾಳದಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ.
ಕ್ರಿಸ್ ಮಸ್ - ಹೊಸ ವರ್ಷವು ಈ ಸಿಂಡ್ರೋಮ್ ನ ಅಪಾಯವನ್ನು 15% ರಷ್ಟು ಹೆಚ್ಚಿಸುತ್ತದೆ
ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ನ ಅಪಾಯದ ಬಗ್ಗೆ ಸ್ವೀಡಿಷ್ ಅಧ್ಯಯನವು 16 ವರ್ಷಗಳ ದತ್ತಾಂಶದೊಂದಿಗೆ ಅದರ ಅಪಾಯವು ಹೆಚ್ಚಾಗಿ ಕ್ರಿಸ್ಮಸ್ ಮತ್ತು ಹೊಸ ವರ್ಷದ ರಜಾದಿನಗಳಲ್ಲಿ (Christmas nad Newyear holiday) ಹೆಚ್ಚಾಗುತ್ತದೆ ಎಂದು ಕಂಡುಕೊಂಡಿದೆ. 75 ವರ್ಷಕ್ಕಿಂತ ಮೇಲ್ಪಟ್ಟವರು, ಮಧುಮೇಹ ಮತ್ತು ಪರಿಧಮನಿಯ ಅಪಧಮನಿ ಕಾಯಿಲೆ ಹೊಂದಿರುವ ರೋಗಿಗಳಿಗೆ ಹೆಚ್ಚಿನ ರಕ್ಷಣೆಯ ಅಗತ್ಯವಿದೆ ಎಂದು ತಿಳಿದು ಬಂದಿದೆ.
ರಕ್ಷಿಸುವುದು ಹೇಗೆ?: ರಜಾದಿನಗಳಲ್ಲಿ ಮೋಜು ಮಾಡುವುದು ಮುಖ್ಯವಾದರೂ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸಹ ಮುಖ್ಯವಾಗಿದೆ. ರಜಾದಿನಗಳಲ್ಲಿ ಮುಕ್ತವಾಗಿರುವುದು ಮುಖ್ಯವಾಗಿದ್ದರೂ, ನೀವು ನಿಮ್ಮ ಆರೋಗ್ಯಕರ ಆಹಾರ ಪದ್ಧತಿಯನ್ನು ಬದಲಾಯಿಸಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಇದರೊಂದಿಗೆ, ಸಂಸ್ಕರಿಸಿದ, ಪ್ಯಾಕ್ ಮಾಡಿದ ಆಹಾರ, ಆಲ್ಕೋಹಾಲ್ ನ ಅತಿಯಾದ ಸೇವನೆಯನ್ನು ತಪ್ಪಿಸಿ. ಈ ಸಮಯದಲ್ಲಿ ನಿಮ್ಮ ವ್ಯಾಯಾಮವನ್ನು ಬಿಟ್ಟುಬಿಡಬೇಡಿ. ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ, ಯಾವುದೇ ಔಷಧಿಗಳು ತೆಗೆದುಕೊಳ್ಳುತ್ತಿದ್ದರೆ, ಅದನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವಂತಹ ಮುನ್ನೆಚ್ಚರಿಕೆಗಳು ಅಗತ್ಯ.