ಬಳಕುವ ಬಳ್ಳಿಯಂತಾಗಲು ಡಯಟಿಂಗ್ ಮಾಡೋ ಮುನ್ನ ಇದನ್ನೊಮ್ಮೆ ಓದಿಕೊಳ್ಳಿ

First Published Mar 17, 2021, 4:37 PM IST

ಇಂದಿನ ಯುವಜನಾಂಗ ಸ್ಲಿಮ್ ದೇಹವನ್ನು ಇಷ್ಟಪಡುತ್ತದೆ. ಯುವಕ-ಯುವತಿಯರು ಜಿಮ್‌ಗಳಲ್ಲಿ ಗಂಟೆಗಟ್ಟಲೆ ವ್ಯಾಯಾಮ ಮಾಡುವ ಜೊತೆಗೆ ಡಯಟ್ ಮಾಡುವ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ಡಯಟ್ ಮಾಡುವುದು ಅಗತ್ಯ, ಆದರೆ ಡಯಟ್ ಹೆಸರಿನಲ್ಲಿ ಎಲ್ಲವನ್ನೂ ತಪ್ಪಿಸುವುದು ಬೇಡ. ಡಯಟ್ ದೇಹವನ್ನು ತುಂಬಾ ದುರ್ಬಲವಾಗಿಸುತ್ತದೆ, ಇದರಿಂದ ದೇಹಕ್ಕೆ ಅಗತ್ಯ ಅಂಶಗಳು ಸಿಗುವುದಿಲ್ಲ. ಇದರಿಂದ ಜೀರ್ಣಾಂಗ ಸಮಸ್ಯೆ ಉದ್ಭವಿಸುತ್ತವೆ. ಸಾಕಷ್ಟು ಪ್ರಮಾಣದ ಆಹಾರ ಸೇವಿಸದೇ ಇದ್ದಾಗ ದೇಹದ ಚಯಾಪಚಯ ಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ. ದೇಹವು ಹೇಗೆ ಡಯಟಿಂಗ್ನ ಅಡ್ಡ ಪರಿಣಾಮಗಳನ್ನು ಸೂಚಿಸುತ್ತದೆ ಎಂಬುದನ್ನು ತಿಳಿಯೋಣ.