ಪಟಾ ಪಟ್ ತೂಕ ಇಳಿಸಿಕೊಳ್ಳಲು ಈ ಜ್ಯೂಸ್ ಕುಡೀರಿ!
First Published Dec 24, 2020, 3:00 PM IST
ತೂಕ ಇಳಿಸಿಕೊಳ್ಳಬೇಕು ಅನ್ನೋದು ಪ್ರತಿಯೊಬ್ಬರಿಗೂ ಇರುವ ಕನಸು. ಅದಕ್ಕಾಗಿ ಏನೇನೋ ಕಸರತ್ತುಗಳನ್ನು ಸಹ ಮಾಡುತ್ತಾರೆ. ಆದರೆ ತೂಕ ಇಳಿಸಿಕೊಳ್ಳುವಲ್ಲಿ ಎಡವುತ್ತಾರೆ. ಅದಕ್ಕಾಗಿಯೇ ಮನೆಯಲ್ಲಿಯೇ ಆರೋಗ್ಯಯುತವಾಗಿ ತೂಕ ಇಳಿಸುವುದು ಹೇಗೆ ಅನ್ನೋದನ್ನು ತಿಳಿಸುತ್ತೇವೆ. ಹಣ್ಣು ಮತ್ತು ತರಕಾರಿಗಳ ಜ್ಯೂಸ್ ಸೇವಿಸುವ ಮೂಲಕ ಸುಲಭವಾಗಿ ತೂಕ ಇಳಿಸಿ..

ಚಳಿಗಾಲದಲ್ಲಿ ಕಿತ್ತಳೆ ಹಣ್ಣು ತಿನ್ನಲು ಹೆಚ್ಚು ಇಷ್ಟವಾಗುತ್ತದೆ. ಹೆಚ್ಚಿನವರು ಕಿತ್ತಳೆ ಹಣ್ಣುಗಳನ್ನು ಸೇವಿಸಿ ಆರೋಗ್ಯವಾಗಿರಲು ಪ್ರಯತ್ನಿಸುತ್ತಾರೆ. ಕಿತ್ತಳೆ ಹಣ್ಣು ನಿಮ್ಮ ಸಂಪೂರ್ಣ ಆರೋಗ್ಯಕ್ಕೆ ಒಳ್ಳೆಯದು ಮತ್ತು ವಿಟಮಿನ್ ಸಿಯಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ.

ಕಿತ್ತಳೆಹಣ್ಣು ಗಳಲ್ಲಿ ಅತಿ ಕಡಿಮೆ ಕ್ಯಾಲೊರಿ ಇದೆ, ಆದ್ದರಿಂದ ಇದು ತೂಕವನ್ನು ಶೀಘ್ರವಾಗಿ ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ನೀವು ಕೂಡ ತೂಕವನ್ನು ಶೀಘ್ರವಾಗಿ ಕಡಿಮೆ ಮಾಡಲು ಬಯಸಿದರೆ, ನೀವು ಪ್ರತಿದಿನ ಕಿತ್ತಳೆ ಜ್ಯೂಸ್ ಅನ್ನು ಕುಡಿಯಬೇಕು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?