ವಸಡುಗಳಲ್ಲಿ ರಕ್ತಸ್ರಾವ ವಿಟಮಿನ್ ಸಿ ಕೊರತೆಯ ಸಂಕೇತ, ಎಚ್ಚರವಿರಲಿ!

First Published Feb 8, 2021, 2:59 PM IST

ವಸಡುಗಳಲ್ಲಿ ರಕ್ತಸ್ರಾವವನ್ನು ಸಾಮಾನ್ಯವಾಗಿ ಹಲ್ಲಿನ ಸಮಸ್ಯೆ ಅಥವಾ ಜಿಂಗೈವಿಟಿಸ್‌ನ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಇದು ಕಾಯಿಲೆಯ ಆರಂಭಿಕ ಹಂತ ವಸಡುಗಳು ರಕ್ತ ಸ್ರಾವವಾಗಿದ್ದರೆ, ದಂತವೈದ್ಯರು ದಿನಕ್ಕೆ ಎರಡು ಬಾರಿ ಹಲ್ಲುಜ್ಜುವ ಸಲಹೆ ನೀಡಬಹುದು. ಆದರೆ ಹೊಸ ಅಧ್ಯಯನದ ಪ್ರಕಾರ ವಸಡುಗಳಲ್ಲಿ ರಕ್ತಸ್ರಾವವಾಗುವುದು ವಿಟಮಿನ್ ಸಿ ಕೊರತೆಯ ಸಂಕೇತವೂ ಆಗಿರಬಹುದು. ನ್ಯೂಟ್ರಿಷನ್ ವಿಮರ್ಶೆಗಳಲ್ಲಿ ಪ್ರಕಟವಾದ,  ಈ ಅಧ್ಯಯನ ವರದಿ ದೈನಂದಿನ ವಿಟಮಿನ್ ಸಿ ಸೇವನೆ ಹೆಚ್ಚಿಸುವುದರಿಂದ ಸಮಸ್ಯೆ ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ.