ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಇನ್ನೂ ವಿಕೋಪಕ್ಕೆ ಹೋಗಿದ್ದು, ಸೋಮವಾರ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) 978ಕ್ಕೆ ತಲುಪಿದೆ. ಹೀಗಾಗಿ ದೆಹಲಿಯಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯೂ ಮಲಿನ ಗಾಳಿಯನ್ನು ಉಸಿರಾಡುವ ಮೂಲಕ ದಿನಕ್ಕೆ 49 ಸಿಗರೆಟ್‌ ಸೇವಿಸಿದಷ್ಟು ಹಾನಿಯನ್ನು ಶ್ವಾಸಕೋಶಕ್ಕೆ ಅನುಭವಿಸುತ್ತಿದ್ದಾರೆ.

ನವದೆಹಲಿ (ನ.19): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಇನ್ನೂ ವಿಕೋಪಕ್ಕೆ ಹೋಗಿದ್ದು, ಸೋಮವಾರ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) 978ಕ್ಕೆ ತಲುಪಿದೆ. ಹೀಗಾಗಿ ದೆಹಲಿಯಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯೂ ಮಲಿನ ಗಾಳಿಯನ್ನು ಉಸಿರಾಡುವ ಮೂಲಕ ದಿನಕ್ಕೆ 49 ಸಿಗರೆಟ್‌ ಸೇವಿಸಿದಷ್ಟು ಹಾನಿಯನ್ನು ಶ್ವಾಸಕೋಶಕ್ಕೆ ಅನುಭವಿಸುತ್ತಿದ್ದಾರೆ.

ದೆಹಲಿಯಷ್ಟೇ ಅಲ್ಲ, ಅಕ್ಕಪಕ್ಕದ ರಾಜ್ಯಗಳಾದ ಹರ್ಯಾಣ, ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲೂ ವಾಯುಮಾಲಿನ್ಯ ತೀವ್ರಗೊಂಡಿದೆ. ಹರ್ಯಾಣದಲ್ಲಿ ಸೋಮವಾರ 631 ಎಕ್ಯುಐ, ಉತ್ತರ ಪ್ರದೇಶದಲ್ಲಿ 273 ಎಕ್ಯುಐ, ಪಂಜಾಬ್‌ನಲ್ಲಿ 233 ಎಕ್ಯುಐ ದಾಖಲಾಗಿದೆ.

ದೆಹಲಿಯಲ್ಲಿ ಐಐಟಿಎಫ್ ಮೇಳ: ಖುದ್ದು‌ ಮಳಿಗೆಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿರುವ ಎಂ.ಬಿ.ಪಾಟೀಲ್ ಪತ್ನಿ!

15 ವಿಮಾನ ವಿಳಂಬ:

ಸೋಮವಾರ ವಾಯುಮಾಲಿನ್ಯದ ಕಾರಣ ಗೋಚರತೆ ಕಡಿಮೆ ಆಗಿ ದಿಲ್ಲಿಯಲ್ಲಿ 14 ವಿಮಾನಗಳನ್ನು ಬೇರೆಡೆ ತಿರುಗಿಸಲಾಗಿದೆ. 100 ವಿಮಾನ ಹಾರಾಟ ವಿಳಂಬವಾಗಿವೆ.
ಅಕ್ಟೋಬರ್‌ ಕೊನೆಯಿಂದ ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟ ದಿನೇದಿನೇ ಏರಿಕೆಯಾಗುತ್ತಿದೆ. ಚಳಿಗಾಲ, ನೆರೆ ರಾಜ್ಯಗಳಲ್ಲಿ ಭತ್ತದ ಹುಲ್ಲು ಸುಡುವುದು ಮುಂತಾದ ಸಂಗತಿಗಳು ಕಾರ್ಖಾನೆ ಹಾಗೂ ವಾಹನ ಮಾಲಿನ್ಯದ ಜೊತೆ ಸೇರಿ ಪ್ರತಿ ವರ್ಷ ಈ ಸಮಯದಲ್ಲಿ ರಾಷ್ಟ್ರ ರಾಜಧಾನಿಯ ವಾಯುಮಾಲಿನ್ಯ ಮಟ್ಟ ತೀವ್ರಗೊಳ್ಳುತ್ತದೆ.