- Home
- Life
- Health
- Best Hair Oil: ನಿಮ್ಮ ಕೂದಲಿಗೆ ಬೆಸ್ಟ್ ಎಣ್ಣೆ ಯಾವುದು ತಿಳಿಯಲು ಮನೆಯಲ್ಲಿ ಮಾಡಿ ನೋಡಿ ‘5 Second Water Test’
Best Hair Oil: ನಿಮ್ಮ ಕೂದಲಿಗೆ ಬೆಸ್ಟ್ ಎಣ್ಣೆ ಯಾವುದು ತಿಳಿಯಲು ಮನೆಯಲ್ಲಿ ಮಾಡಿ ನೋಡಿ ‘5 Second Water Test’
5 Second Water Test: ಎಲ್ಲಾ ಎಣ್ಣೆಗಳು ಎಲ್ಲಾ ಕೂದಲಿಗೆ ಸೂಕ್ತವಾಗಿರೋದಿಲ್ಲ. ಹಾಗಿದ್ರೆ ನಿಮ್ಮ ಕೂದಲು ದಟ್ಟವಾಗಿ ಬೆಳಿಯಬೇಕು ಅಂದ್ರೆ, ನಿಮ್ಮ ಕೂದಲಿಗೆ ಸೂಕ್ತ ಎಣ್ಣೆ ಯಾವುದು ಎಂದು ತಿಳಿದುಕೊಳ್ಳೋದು ಹೇಗೆ? ಈ ಒಂದು ಸಿಂಪಲ್ ಟ್ರಿಕ್ಸ್ ಮೂಲಕ ಅದನ್ನ ತಿಳ್ಕೊಳಿ.

ದಟ್ಟವಾದ ಕೂದಲು
ಪ್ರತಿಯೊಬ್ಬ ಮನುಷ್ಯ ಅದು ಹೆಣ್ಣಾಗಲಿ ಗಂಡಾಗಲಿ ಎಲ್ಲರ ಆಸೆ ಏನೆಂದರೆ ತಲೆ ತುಂಬಾ ದಟ್ಟವಾದ ಕೂದಲು ಇರಬೇಕು ಅನ್ನೋದು ಅದಕ್ಕಾಗಿ ಅವರು ವಿವಿಧ ರೀತಿಯ ಎಣ್ಣೆಗಳನ್ನು ಬಳಕೆ ಮಾಡುತ್ತಾರೆ. ಆದರೆ ಕೊನೆಗೆ ನನ್ನ ಕೂದಲಿಗೆ ಯಾವ ರೀತಿಯ ಎಣ್ಣೆ ಹಾಕಿದ್ರೂ ಅದು ಬೆಳೆಯೋದಿಲ್ಲ ಎಂದು ದೂರುತ್ತಾರೆ.
ಎಲ್ಲಾ ಎಣ್ಣೆ ನಿಮ್ಮ ಕೂದಲಿಗೆ ಸೂಕ್ತ ಅಲ್ಲ
ನೀವು ಬಳಕೆ ಮಾಡುವ ಎಲ್ಲಾ ಎಣ್ಣೆ ನಿಮ್ಮ ಕೂದಲಿಗೆ ಸೂಕ್ತ ಅಲ್ಲ. ಯಾಕಂದ್ರೆ ಒಂದೊಂದು ರೀತಿಯ ಕೂದಲಿಗೆ ಒಂದೊಂದು ರೀತಿಯ ಎಣ್ನೆ ಸೂಕ್ತವಾಗಿರುತ್ತೆ. ಹಾಗಿದ್ರೆ ನಿಮ್ಮ ಕೂದಲಿಗೆ ಸರಿಯಾದ ಎಣ್ಣೆ ಯಾವುದು ಕಂಡು ಹಿಡಿಯೋದು ಹೇಗೆ.
ನಿಮ್ಮ ಕೂದಲಿನ ಪೊರೊಸಿಟಿ ತಿಳಿಯಿರಿ
ಕೂದಲಿನ ಯಾವ ಎಣ್ಣೆ ಸೂಕ್ತ ಎಂದು ತಿಳಿಯಲಿ ಕೂದಲಿನ ಸಾರಾಂಧ್ರತೆ ಅಂದ್ರೆ ಪೊರೊಸಿಟಿ (Porosity) ಕಂಡು ಹಿಡಿಯಬೇಕು. ಅದಕ್ಕಾಗಿ ಇಲ್ಲಿದೆ ಐದು ಸೆಕೆಂಡ್ ವಾಟರ್ ಟೆಸ್ಟ್. ಈ ಪರೀಕ್ಷೆಯ ಮೂಲಕ ನಿಮ್ಮ ಕೂದಲಿಗೆ ಸೂಕ್ತವಾದ ಎಣ್ಣೆ ಯಾವುವು ತಿಳಿಯಿರಿ.
ಏನು ಮಾಡಬೇಕು?
ನೀವು ಒಂದು ಗಾಜಿನ ಲೋಟದಲ್ಲಿ ನೀರು ತೆಗೆದುಕೊಂಡು, ಅದರಲ್ಲಿ ಒಂದೆರಡು ಕೂದಲನ್ನು ಹಾಕಿ. ಸ್ವಲ್ಪ ಸಮಯ ಬಿಟ್ಟು ನಿಮ್ಮ ಕೂದಲು ನೀರಿನ ಮೇಲಿದೆಯೇ? ಮಧ್ಯದಲ್ಲಿದೆಯೇ? ಅಥವಾ ನೀರಿನಲ್ಲಿ ಮುಳುಗಿದೆಯೇ ಅನ್ನೋದನ್ನು ತಿಳಿಯಿರಿ.
ಕೂದಲು ತೇಲುತ್ತಿದ್ದರೆ
ಒಂದು ವೇಳೆ ನಿಮ್ಮ ಕೂದಲು ತೇಲುತ್ತಿದ್ದರೆ ಅದು ಕಡಿಮೆ ಪೊರೊಸಿಟಿಯನ್ನು ಹೊಂದಿದ್ದು, ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಕಷ್ಟಪಡುತ್ತೆ. ಇಂತಹ ಸಂದರ್ಭದಲ್ಲಿ ನೀವು ಬೇವಿನ ಎಣ್ಣೆ ಅಥವಾ ರೋಸ್ ಮೆರಿ ಎಣ್ಣೆಯನ್ನು ಬಳಕೆ ಮಾಡಬಹುದು.
ಕೂದಲು ಮಧ್ಯಭಾಗದಲ್ಲಿದ್ದರೆ
ನಿಮ್ಮ ಕೂದಲು ಲೋಟದ ಮಧ್ಯಭಾಗದಲ್ಲಿದ್ದರೆ ಕೂದಲು ಮಧ್ಯಮ ಪೊರೊಸಿಟಿ ಹೊಂದಿದೆ ಎಂದರ್ಥ. ಅಂದ್ರೆ ನಿಮ್ಮ ಕೂದಲು ತೇವಾಂಶವನ್ನು ಚೆನ್ನಾಗಿ ಸಮತೋಲನಗೊಳಿಸುತ್ತೆ. ಇಂತಹ ಸಂದರ್ಭದಲ್ಲಿ ಜೊಜೋಬಾ ಎಣ್ಣೆ ಅಥವಾ ಬಾದಾಮಿ ಎಣ್ಣೆ ಬಳಕೆ ಮಾಡಬಹುದು.
ಕೂದಲು ಮುಳುಗಿದರೆ
ಕೂದಲು ನೀರಿನಲ್ಲಿ ಮುಳುಗಿದರೆ ನಿಮ್ಮ ಕೂದಲು ಹೆಚ್ಚಿನ ಪ್ರಮಾಣದ ಪೊರೊಸಿಟಿಯನ್ನು ಹೊಂದಿದೆ ಎಂದರ್ಥ, ಹೀಗಿರೋವಾಗ ನಿಮ್ಮ ಕೂದಲು ಸುಲಭವಾಗಿ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ತೆಂಗಿನ ಎಣ್ಣೆ ಅಥವಾ ಹರಳೆಣ್ಣೆ ಬಳಕೆ ಮಾಡಬಹುದು.