ಬಿಳಿ ಕೂದಲು ಈಗ ದೊಡ್ಡ ಸಮಸ್ಯೆ. ಅದನ್ನು ಕಪ್ಪು ಮಾಡೋದು ಹೇಗೆ ಎಂಬ ಸಮಸ್ಯೆ ಎಲ್ಲರನ್ನು ಕಾಡ್ತಿದೆ. ಮಾರ್ಕೆಟ್ ಹೇರ್ ಡೈ ಬಿಟ್ಟು ಮನೆ ಮದ್ದು ಬಳಸ್ಬೇಕು ಅನ್ನೋರಿಗೆ ಇಲ್ಲಿದೆ ಟಿಪ್ಸ್.
ವಯಸ್ಸಲ್ಲದ ವಯಸ್ಸಿನಲ್ಲಿ ಕೂದಲು (hair) ಬೆಳ್ಳಗಾಗ್ತಿದೆ. ಚಿಕ್ಕ ಮಕ್ಕಳ ತಲೆಯಲ್ಲಿ ಬಿಳಿ ಕೂದಲು (white hair) ಕಾಣಿಸ್ತಿದೆ. ಜನ್ರು ತಮ್ಮ ಕೂದಲ ಬಣ್ಣ ಕಪ್ಪಾಗ್ಬೇಕು, ಶೈನಿಯಾಗಿ ಕಾಣ್ಬೇಕು ಅಂತ ಕೂದಲಿಗೆ ಕಲರ್ ಹಚ್ಚಿಕೊಳ್ತಾರೆ. ಮಾರ್ಕೆಟ್ ನಲ್ಲಿ ವೆರೈಟಿ ಕಲರ್ಸ್ ಲಭ್ಯ ಇದೆ. ವಯಸ್ಸು 40 ದಾಟಿದೋರು ತಮ್ಮ ತಲೆ ಕೂದಲನ್ನು ಕಪ್ಪಗೆ ಮಾಡಲು ಖಾಯಂ ಬಣ್ಣ ಹಚ್ತಾರೆ. ಮಾರುಕಟ್ಟೆಯಲ್ಲಿ ಸಿಗಿವ ನಾನಾ ಕಂಪನಿ ಕಲರ್ಸ್ ಗಳನ್ನು ಹಚ್ಚಿಕೊಳ್ಳುದು ಸುಲಭ. ಶಾಂಪೂವಿನಂತೆ ಕೆಲ ಬಣ್ಣಗಳನ್ನು ಹಚ್ಚಿ, ವಾಶ್ ಮಾಡಿದ್ರೆ ಆಯ್ತು. ಆದ್ರೆ ಇವು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದ್ರಲ್ಲಿರುವ ಅಮೋನಿಯಾ ಹಾಗೂ ಹಾನಿಕಾರಕ ರಾಸಾಯನಿಕ ವಸ್ತುಗಳು,ಬರೀ ಕೂದಲು ಉದುರೋದು, ಹೊಟ್ಟು ಸೇರಿದಂತೆ ಕೂದಲಿನ ಸಮಸ್ಯೆ ಮಾತ್ರವಲ್ಲ ಚರ್ಮರೋಗ, ಕ್ಯಾನ್ಸರ್ ನಂತಹ ಅಪಾಯಕಾರಿ ಖಾಯಿಲೆಗೆ ಕಾರಣವಾಗ್ತಿದೆ. ಹೇರ್ ಡೈಗಳನ್ನು ಬಳಸ್ಬೇಡಿ ಅಂತ ತಜ್ಞರು ಸಲಹೆ ನೀಡ್ತಾನೆ ಇರ್ತಾರೆ. ಬಿಳಿ ಕೂದಲು ಸೌಂದರ್ಯ ಹಾಳು ಮಾಡುತ್ತೆ ಅನ್ನೋ ಕಾರಣಕ್ಕೆ ಬಹುತೇಕರು ಹೇರ್ ಡೈ ಬಳಕೆ ಮಾಡ್ತಿದ್ದಾರೆ. ನೀವು ಮನೆಯಲ್ಲೇ ಅತಿ ಕಡಿಮೆ ವಸ್ತುಗಳನ್ನು ಬಳಸಿ ಹೇರ್ ಡೈ ತಯಾರಿಸ್ಬಹುದು. ಇದ್ರಿಂದ ಯಾವ್ದೆ ಸೈಡ್ ಎಫೆಕ್ಟ್ ಇಲ್ಲ. ನಿಮ್ಮ ಕೂದಲಿನ ಬಣ್ಣ ಕೂಡ ಕಪ್ಪಾಗುತ್ತೆ.
ಮನೆಯಲ್ಲೇ ತಯಾರಿಸಿ ಹೇರ್ ಡೈ :
ನೀವು ಪ್ರತಿ ದಿನ ಕುಡಿಯುವ ಟೀ ನಿಮ್ಮ ಸೌಂದರ್ಯ ವರ್ದಕವೂ ಹೌದು. ನೀವು ಟೀ ಪುಡಿಯಿಂದ ನಿಮ್ಮ ಕೂದಲಿನ ಬಣ್ಣ ಬದಲಿಸಬಹುದು. ನಿಯಮಿತವಾಗಿ ಈ ಮನೆ ಮದ್ದನ್ನು ಬಳಸೋದ್ರಿಂದ ಬೆಳ್ಳಗಿರುವ ಕೂದಲು ಕಪ್ಪಾಗೋದಲ್ದೆ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ.
ತಲೆಹೊಟ್ಟು ನಿವಾರಣೆಗೆ ಈ 5 ಮನೆಮದ್ದನ್ನ ಬಳಸಿ, ನೆತ್ತಿ ಫುಲ್ ಕ್ಲೀನ್ ಆಗುತ್ತೆ
ಟೀ ಪುಡಿಯಿಂದ ಹೇರ್ ಡೈ :
4 -5 ಚಮಚ ಟೀ ಪುಡಿ. 1 -2 ದಾಲ್ಚಿನಿ, 4 -5 ಲವಂಗ ಇದಕ್ಕೆ ಅಗತ್ಯವಿರುವ ಪದಾರ್ಥಗಳು. ಇದನ್ನು ಮಾಡೋದು ಬಹಳ ಸುಲಭ.
• ನೀವು ಮೊದಲು ಒಂದು ಪಾತ್ರೆಗೆ ಎರಡು ಕಪ್ ನೀರನ್ನು ತೆಗೆದುಕೊಂಡು ಅದನ್ನು ಕುದಿಯಲು ಇಡಿ. ನೀರಿಗೆ ಟೀ ಪುಡಿಯನ್ನು ಸೇರಿಸಿ. ನೀರು ದಪ್ಪ ಹಾಗೂ ಗಾಢ ಬಣ್ಣಕ್ಕೆ ಬರುವವರೆಗೆ ಕುದಿಸಿ.
• ಇದಕ್ಕೆ ದಾಲ್ಚಿನಿಯನ್ನು ಸೇರಿಸಿ ಕುದಿಸಿ.
• ನೀವು ಇದೇ ಟೀ ಮಿಶ್ರಣಕ್ಕೆ ಲವಂಗ ಕೂಡ ಹಾಕಿ ಚೆನ್ನಾಗಿ ಕುದಿಸಿ.
• ಚೆನ್ನಾಗಿ ಕುದ್ದ ಮೇಲೆ ಗ್ಯಾಸ್ ಬಂದ್ ಮಾಡಿ. ಈ ಟೀ ಮಿಶ್ರಣವನ್ನು ಸ್ವಲ್ಪ ಸಮಯ ತಣ್ಣಗಾಗಲು ಬಿಡಿ. ನಂತ್ರ ಅದನ್ನು ಸೋಸಬೇಕು.
• ಸೋಸಿದ ಈ ಮಿಶ್ರಣವನ್ನು ಸ್ಪ್ರೇ ಬಾಟಲಿಗೆ ಹಾಕಿ. ನಿಮ್ಮ ತಲೆ ಕೂದಲನ್ನು ಸ್ವಲ್ಪ ತೇವಗೊಳಿಸಿ. ಕೂದಲಿನ ಬುಡಕ್ಕೆ ಹಾಗೂ ಎಲ್ಲ ಕಡೆ ಸರಿಯಾಗಿ ಸ್ಪ್ರೇ ಮಾಡಿ. ನೀವು ಹತ್ತಿ ಉಂಡೆ ಮಾಡಿ ಕೂಡ ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಳ್ಳಬಹುದು.
• ತಲೆ ಕೂದಲಿಗೆ ಈ ಮಿಶ್ರಣವನ್ನು ಹಚ್ಚಿದ ಮೇಲೆ ಶವರ್ ಕ್ಯಾಪ್ ಹಾಕಿ. 30- 40 ನಿಮಿಷ ಹಾಗೆಯೇ ಬಿಡಿ.
ಮಲಗೋ ಮುನ್ನ ಈ ಪಾನೀಯ ಕುಡಿಯಿರಿ, ಮುಖ ಚಂದ್ರನಂತೆ ಹೊಳೆಯುವುದಲ್ಲದೆ ಜೀರ್ಣಕ್ರಿಯೆ ಚೆನ್ನಾಗಿರುತ್ತೆ
• ನಂತ್ರ ನಿಮ್ಮ ತಲೆ ಕೂದಲನ್ನು ಶಾಂಪೂ ಇಲ್ಲದೆ ಕ್ಲೀನ್ ಮಾಡಿ. ಶಾಂಪೂ ಬಣ್ಣವನ್ನು ಬೇಗ ತೆಗೆಯುತ್ತದೆ.
ಗಾಢ ಬಣ್ಣ ಬರಲು ಹೀಗೆ ಮಾಡಿ? : ನೀವು ವಾರದಲ್ಲಿ ಎರಡರಿಂದ ಮೂರು ಬಾರಿ ಈ ಬಣ್ಣವನ್ನು ನೀವು ಬಳಸಬೇಕು. ಹೀಗೆ ಮಾಡಿದ್ರೆ ನಿಮ್ಮ ಕೂದಲು ಬೇಗ ನೈಸರ್ಗಿಕ ಕಲರ್ ಗೆ ಮರಳುತ್ತದೆ. ಇನ್ನಷ್ಟು ಗಾಢ ಬಣ್ಣ ಬೇಕೆಂದ್ರೆ ನೀವು ನಿಮ್ಮ ಮಿಶ್ರಣಕ್ಕೆ ಸ್ವಲ್ಪ ಕಾಫಿ ಪುಡಿಯನ್ನು ಸೇರಿಸಿ.
