MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಅಪರಿಚಿತರನ್ನ ನೋಡಿದ ಕೂಡ್ಲೆ ಕೆಲವು ಮಕ್ಕಳು ಅಳೋದ್ಯಾಕೆ?

ಅಪರಿಚಿತರನ್ನ ನೋಡಿದ ಕೂಡ್ಲೆ ಕೆಲವು ಮಕ್ಕಳು ಅಳೋದ್ಯಾಕೆ?

ಕೆಲವು ಮಕ್ಕಳನ್ನು ನೀವೆ ಗಮನಿಸಿ, ಅವರು ಚೆನ್ನಾಗಿ ಆಟವಾಡಿಕೊಂಡು ನಗುತ್ತಾ ಇರುತ್ತಾರೆ. ಆದರೆ ಅಪರಿಚಿತ ವ್ಯಕ್ತಿಗಳನ್ನು ನೋಡಲು ಹೆದರುತ್ತಾರೆ. ಈ ಭಯದ ಹಿಂದಿನ ಕಾರಣವೇನು ಎಂದು ತಿಳಿದುಕೊಳ್ಳೋಣ. ಅಲ್ಲದೆ, ಅದರ ಇತರ ರೋಗಲಕ್ಷಣ ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.

2 Min read
Suvarna News
Published : Feb 21 2023, 03:25 PM IST
Share this Photo Gallery
  • FB
  • TW
  • Linkdin
  • Whatsapp
112

ಮಕ್ಕಳು(Children) ಇತರ ಜನರೊಂದಿಗೆ ತಮ್ಮ ಹೆತ್ತವರ ಸುತ್ತಲೂ ಇರುವಷ್ಟೇ ಸುರಕ್ಷಿತವೆಂದು ಭಾವಿಸುತ್ತಾರೆ. ಮಕ್ಕಳ ಈ ಪ್ರತಿಕ್ರಿಯೆ ಸಾಮಾನ್ಯ. ಯಾಕೆಂದರೆ ಅವರಿಗೆ ಯಾರು ತನ್ನವರು, ಯಾರು ಬೇರೆಯವರು ಅನ್ನೋದು ಸಣ್ಣ ವಯಸಿನಲ್ಲಿಯೇ ತಿಳಿದಿರೋದಿಲ್ಲ. ಆದರೆ ಕೆಲವು ಮಕ್ಕಳು ತಮ್ಮ ಹೆತ್ತವರನ್ನು ಹೊರತುಪಡಿಸಿ, ಬೇರೆ ವ್ಯಕ್ತಿಯ ಕೈಗೆ ಹೋಗೋದಿಲ್ಲ. ಅವರು ಇನ್ನೊಬ್ಬ ವ್ಯಕ್ತಿಯನ್ನು ನೋಡಲು ಸಹ ಹೆದರುತ್ತಾರೆ. ಇದಕ್ಕೆ ಕಾರಣ ಏನಿರಬಹುದು?

212

ಕೆಲವು ಮಕ್ಕಳು ಪೋಷಕರನ್ನು(Parents) ಹೊರತುಪಡಿಸಿ ಇತರರ ಕೈಗೆ ಹೋದ ಕೂಡಲೇ ಅಳಲು ಪ್ರಾರಂಭಿಸುತ್ತಾರೆ. ನಿಮ್ಮ ಮಗು ಅದೇ ರೀತಿ ವರ್ತಿಸುತ್ತಿದ್ಯಾ?  ಹಾಗಿದ್ದರೆ, ಅದರ ಹಿಂದಿನ ಕಾರಣವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.ಇಲ್ಲಿದೆ ಆ ಬಗ್ಗೆ ನಿಮಗಾಗಿ ಒಂದಿಷ್ಟು ಮಾಹಿತಿ. 

312

ಚಿಕ್ಕ ಮಕ್ಕಳು ಅಂದರೆ 18 ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಈ ರೀತಿ ವರ್ತಿಸಿದ್ರೆ, ಅದು ಸಾಮಾನ್ಯವಾಗಿರುತ್ತೆ, ಆದರೆ 18 ತಿಂಗಳಿಗಿಂತ ಮೇಲ್ಪಟ್ಟ ಮಕ್ಕಳು ಈ ರೀತಿ ವರ್ತಿಸಿದ್ರೆ, ಅದು ಕಾಳಜಿಯ ವಿಷಯ. ನಿಮ್ಮ ಮಗು 18 ತಿಂಗಳ ನಂತರವೂ ಹೆದರುತ್ತಿದ್ದರೆ, ಅಳುತ್ತಿದ್ದರೆ ಅಥವಾ ಇತರರೊಂದಿಗೆ ಮಾತನಾಡದಿದ್ದರೆ, ಈ ಸ್ಥಿತಿಯು ಸ್ಟ್ರೇಂಜರ್ ಆಂಕ್ಸೈಟಿ (Stranger anxiety)ಆಗಿರಬಹುದು. 

412

ಇಲ್ಲಿ ಸ್ಟ್ರೇಂಜರ್ ಆಂಕ್ಸೈಟಿ  ಬಗ್ಗೆ ವಿವರವಾಗಿ ತಿಳಿಯೋಣ. ಸ್ಟ್ರೇಂಜರ್ ಆಂಕ್ಸೈಟಿ ಎಂದರೇನು, ಅದರ ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳು ಯಾವುವು ಎಂದು ತಿಳಿಯೋಣ

512

ಸ್ಟ್ರೇಂಜರ್ ಆಂಕ್ಸೈಟಿ ಎಂದರೇನು?
ಸ್ಟ್ರೇಂಜರ್ ಆಂಕ್ಸೈಟಿ, ಮಕ್ಕಳು ಅಪರಿಚಿತರೊಂದಿಗೆ ಸಂಪರ್ಕಕ್ಕೆ ಬಂದಾಗ ಅನುಭವಿಸುವ ಒಂದು ರೀತಿಯ ಸಂಕಟವಾಗಿದೆ. ಸಾಮಾನ್ಯವಾಗಿ ಹೇಳೋದಾದ್ರೆ, 8 ತಿಂಗಳಿನಿಂದ 2 ವರ್ಷದವರೆಗಿನ ಮಕ್ಕಳು ಅಪರಿಚಿತರೊಂದಿಗೆ ಬೆರೆಯಲು ತುಂಬಾ ಅನಾನುಕೂಲ ಅನುಭವಿಸುತ್ತಾರೆ. ಅವರು ಈ ವಯಸ್ಸಿನಲ್ಲಿ ಅಪರಿಚಿತರನ್ನು ನೋಡಿ ಅಸುರಕ್ಷಿತರಾಗುತ್ತಾರೆ(Unsafe) ಮತ್ತು ತಮ್ಮ ತಾಯಿಯನ್ನು ಹುಡುಕಲು ಪ್ರಾರಂಭಿಸುತ್ತಾರೆ. 

612

ಆದರೆ ಕೆಲವು ಸಂದರ್ಭಗಳಲ್ಲಿ, 2 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಸಹ ಈ ರೀತಿಯ ಭಾವನೆಯನ್ನು ಹೊಂದಿರುತ್ತಾರೆ. ಅವರು ತಮ್ಮ ಸುತ್ತಲಿನ ಜನರೊಂದಿಗೆ ಬೆರೆಯುತ್ತಾರೆ, ಆದರೆ ಅಪರಿಚಿತರೊಂದಿಗೆ ಮಾತನಾಡಲು ಅಥವಾ ಅವರ ಸುತ್ತಲೂ ಇರಲು ತುಂಬಾ ಅಸುರಕ್ಷಿತ ಭಾವನೆ ಹೊಂದಿರುತ್ತಾರೆ. ಈ ಸ್ಥಿತಿಯನ್ನು ಸ್ಟ್ರೇಂಜರ್ ಆಂಕ್ಸೈಟಿ ಎಂದು ಕರೆಯಲಾಗುತ್ತೆ. 

712

ಸ್ಟ್ರೇಂಜರ್ ಆಂಕ್ಸೈಟಿ ಲಕ್ಷಣಗಳು ಯಾವುವು?  
ಸ್ಟ್ರೇಂಜರ್ ಆಂಕ್ಸೈಟಿ ಅನೇಕ ರೋಗಲಕ್ಷಣಗಳನ್ನು ಚಿಕ್ಕ ಮಕ್ಕಳಲ್ಲಿ ಕಾಣಬಹುದು. ನೀವು ಈ ರೋಗಲಕ್ಷಣಗಳನ್ನು ಗಮನಿಸಿದ್ರೆ , ಮಕ್ಕಳನ್ನು ಸುಲಭವಾಗಿ ಒತ್ತಡ(Stress) ಅಥವಾ ಆತಂಕದಿಂದ ಹೊರತರಬಹುದು. ಕೆಲವು ಸಾಮಾನ್ಯ ರೋಗಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ-

812

ಮಗು ಅಪರಿಚಿತ ಜನರ(Stranger) ಬಳಿಗೆ ಹೋದ ತಕ್ಷಣ ಅಳುವುದು ಅಥವಾ ತಾಯಿಯನ್ನು ಹುಡುಕಲು ಪ್ರಾರಂಭಿಸೋದು.
ಅಪರಿಚಿತರೊಂದಿಗೆ ಹೊರಗೆ ಹೋಗಲು ಭಯ
ಅಪರಿಚಿತ ವ್ಯಕ್ತಿಯೊಂದಿಗೆ ಏಕಾಂಗಿಯಾಗಿ ಕೋಣೆಗೆ ಹೋಗಲು ಹೆದರೋದು. ಅಡಗುವುದು.
ಅಪರಿಚಿತ ವ್ಯಕ್ತಿಯೊಂದಿಗೆ ಮಾತನಾಡದಿರುವುದು ಅಥವಾ ಅವನಿಂದ ದೂರ ಸರಿಯುವುದು
ಅನೇಕ ಬಾರಿ ವಿಚಿತ್ರ ಆತಂಕದಿಂದಾಗಿ, ಮಕ್ಕಳು ತಮ್ಮ ಉಸಿರಾಟವನ್ನು ಮರೆಯಲು ಪ್ರಾರಂಭಿಸೋದು.  

912

ಒತ್ತಡ (Stress) ಅಥವಾ ಆತಂಕದ ಕಾರಣಗಳು 
ಸ್ಟ್ರೇಂಜರ್ ಆಂಕ್ಸೈಟಿಯ ಕಾರಣದಿಂದ ಇತರರೊಂದಿಗೆ ಮಕ್ಕಳು ಮಾತನಾಡೋದು ಕಡಿಮೆಯಾಗಬಹುದು.ಉದಾಹರಣೆಗೆ, ಆರಂಭದಲ್ಲಿ ಕೇವಲ 1 ರಿಂದ 2 ಜನರ ಬಳಿಗೆ ಹೋಗುವ ಮಕ್ಕಳು, ನಂತರ ಕೆಲವೇ ಜನರೊಂದಿಗೆ (ಕುಟುಂಬ) ಬೆರೆಯಲು ಇಷ್ಟಪಡುತ್ತಾರೆ. 

1012

ಮಗು ಇತರರ ಬಳಿಗೆ ಹೋಗಲು ಅಥವಾ ಮಾತನಾಡಲು ಸಹ ಹೆದರುತ್ತಾರೆ. ಇದಲ್ಲದೆ, ಸ್ಟ್ರೇಂಜರ್ ಆಂಕ್ಸೈಟಿಯ ಕಾರಣವು ಆನುವಂಶಿಕವೂ ಆಗಿರಬಹುದು. ತಜ್ಞರ ಪ್ರಕಾರ, 18 ತಿಂಗಳಿಗಿಂತ ಮೇಲ್ಪಟ್ಟ ಮಕ್ಕಳಲ್ಲಿ ಅಂತಹ ನಡವಳಿಕೆಯನ್ನು ನೋಡಿದರೆ, ಅವರನ್ನು ತಕ್ಷಣ ಕನ್ಸಲ್ಟೆಂಟ್(Consultant) ಬಳಿಗೆ ಕರೆದೊಯ್ಯಬೇಕು. 

1112

ಒತ್ತಡದ ಆತಂಕವನ್ನು ತಡೆಗಟ್ಟುವುದು ಹೇಗೆ ?
ಮಕ್ಕಳಲ್ಲಿ ಒತ್ತಡದ ಆತಂಕವನ್ನು ಕಡಿಮೆ ಮಾಡಲು, ಪೋಷಕರು ಮೊದಲು ತಮ್ಮ ಮಕ್ಕಳ ನಡವಳಿಕೆಯ ಬಗ್ಗೆ ಗಮನ ಹರಿಸಬೇಕು. ನಿಮ್ಮ ಮಗು ಅಪರಿಚಿತ ವ್ಯಕ್ತಿಗಳನ್ನು ಭೇಟಿಯಾಗಲು ಹೆದರುತ್ತಿದ್ದರೆ, ಈ ಪರಿಸ್ಥಿತಿಯಲ್ಲಿ ನೀವು ಅವರೊಳಗಿನ ಭಯವನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು, ಇದರಿಂದ ಅವರು ಮತ್ತಷ್ಟು ಭಯಪಡೋದನ್ನು ತಪ್ಪಿಸಬಹುದು. ಇದರೊಂದಿಗೆ, ಮಕ್ಕಳನ್ನು ಪೋಷಕರಲ್ಲದೆ ಇತರ ಜನರಿಗೆ ಪರಿಚಯಿಸಲು ಪ್ರಯತ್ನಿಸಿ. ಇದರಿಂದ ಅವರು ಇತರರನ್ನು ಭೇಟಿಯಾಗಬಹುದು. 

1212

ಮಕ್ಕಳಲ್ಲಿ ಭಯದ ಭಾವನೆ ಬೆಳೆಯಲು ಬಿಡಬಾರದು ಎಂಬುದನ್ನು ನೆನಪಿನಲ್ಲಿಡಿ, ಅಂತಹ ಭಾವನೆ ಭವಿಷ್ಯದಲ್ಲಿ(future) ಅವರಿಗೆ ಮಾರಕವಾಗಬಹುದು. ಅಲ್ಲದೆ, ಅವರ ಆತ್ಮವಿಶ್ವಾಸದ ಮಟ್ಟವೂ ಹದಗೆಡಬಹುದು. ಆದ್ದರಿಂದ ಅವರೊಳಗಿನ ಭಯವನ್ನು ಕಡಿಮೆ ಮಾಡಲು ಪ್ರಯತ್ನಿಸಿ. 

About the Author

SN
Suvarna News
ಮಕ್ಕಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved