ಸ್ನಾನ ಮಾಡುವಾಗ ಎಂದಿಗೂ ಈ ತಪ್ಪು ಮಾಡಬೇಡಿ, ದೊಡ್ಡ ನಷ್ಟವಾಗಬಹುದು!

First Published Jun 5, 2021, 7:05 PM IST

ನೀವು ಹೊರಗಿನಿಂದ ಬಂದರೆ ಅಥವಾ ಸಾಕಷ್ಟು ದಣಿದಿದ್ದರೆ, ರಿಫ್ರೆಶ್ ಆಗಲು ಮನಸ್ಸಿನಲ್ಲಿ ಸ್ನಾನ ಮಾಡಲು ಯೋಚಿಸುವುದು ಅಗತ್ಯ. ಸ್ನಾನ ಮಾಡುವುದರಿಂದ ಮನಸ್ಸು ಹಗುರಾಗುತ್ತದೆ. ಇದು ಧೂಳು, ಕೀಟಾಣುಗಳು, ಕೊಳಕು ಇತ್ಯಾದಿಗಳನ್ನು ತೊಡೆದು ಹಾಕುವ ಮೂಲಕ ಸ್ವಚ್ಛ ಮತ್ತು ಆರಾಮದಾಯಕ ಭಾವನೆಯನ್ನು ಅನುಭವಿಸಲು ಸಹಾಯ ಮಾಡುತ್ತದೆ. ಸ್ನಾನ ಮಾಡುವುದರಿಂದ ದೇಹದ ಮೇಲಿನ ಬೆವರು ಮತ್ತು ಬ್ಯಾಕ್ಟೀರಿಯಾಗಳು ನಿವಾರಣೆಗೊಳ್ಳುತ್ತವೆ, ಇದನ್ನು ಸ್ವಚ್ಛಗೊಳಿಸದಿದ್ದರೆ ಚರ್ಮದ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ.