ಕಾರಣವಿಲ್ಲ ಯೋನಿ ರಕ್ತಸ್ರಾವ ಆಗ್ತಿದೆಯೇ? ಹಾಗಿದ್ರೆ ಈ ಗಂಭೀರ ಸಮಸ್ಯೆ ಇರಬಹುದು
ಯೋನಿ ರಕ್ತಸ್ರಾವಕ್ಕೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಪಿರಿಯಡ್ಸ್ ಅಲ್ಲದೇ ಬೇರೆ ಯಾವ ಕಾರಣಕ್ಕೆ ರಕ್ತಸ್ರಾವ ಆಗುತ್ತದೆ. ಇದರಿಂದ ನಿಮಗೆ ಏನೆಲ್ಲಾ ಸಮಸ್ಯೆ ಉಂಟಾಗಬಹುದು ನೋಡೋಣ.
ಯೋನಿ ರಕ್ತಸ್ರಾವ (vaginal bleeding) ಅನೇಕ ಸಂದರ್ಭಗಳಲ್ಲಿ ಸಂಪೂರ್ಣ ಸಾಮಾನ್ಯ, ಆದರೆ ಕೆಲವೊಮ್ಮೆ ಇದು ಅಸಹಜವಾಗಿ ಕಾಣಿಸಿಕೊಳ್ಳಬಹುದು, ಪಿರಿಯಡ್ಸ್ ಅಲ್ಲದ ರಕ್ತಸ್ರಾವ ಗಂಭೀರ ಸಮಸ್ಯೆಗಳ ಸಂಕೇತವಾಗಿರಬಹುದು. ಈ ರೀತಿಯಾಗಿ ಅಸಹಜ ಯೋನಿ ರಕ್ತಸ್ರಾವ ಉಂಟಾದರೆ ಅದನ್ನು ನಿರ್ಲಕ್ಷಿಸಬಾರದು, ಏಕೆಂದರೆ ಅವುಗಳ ಬಗ್ಗೆ ನಿರ್ಲಕ್ಷ್ಯವು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು.
ಇಂದು ನಾವು ಯೋನಿ ರಕ್ತಸ್ರಾವಕ್ಕೆ ಸಂಬಂಧಿಸಿದ ಕೆಲವು ಗಂಭೀರ ವಿಷಯಗಳ ಬಗ್ಗೆ ಹೇಳುತ್ತೇವೆ. ಅದು ಸಾಮಾನ್ಯಕ್ಕಿಂತ ಭಿನ್ನವಾಗಿದೆ ಮತ್ತು ಇದರಿಂದ ನೀವು ದೊಡ್ಡ ಸಮಸ್ಯೆಗೆ ಸಿಲುಕುವ ಸಾಧ್ಯತೆಯೂ ಹೆಚ್ಚಿದೆ. ಯಾವ ಕಾರಣಗಳಿಂದ ಯೋನಿ ರಕ್ತಸ್ರಾವ ಉಂಟಾಗುತ್ತದೆ ನೋಡೋಣ.
ಯೋನಿ ರಕ್ತಸ್ರಾವವು ಯಾವ ಪರಿಸ್ಥಿತಿಗಳಲ್ಲಿ ಉಂಟಾಗುತ್ತದೆ?
ಆರಂಭಿಕ ಪಿರಿಯಡ್ಸ್ ಮತ್ತು ಕೊನೆಯ ಪಿರಿಯಡ್ಸ್
ನಿಮ್ಮ ಋತುಚಕ್ರ (menstrual periods)ಮುಗಿದ 21 ದಿನಗಳ ಒಳಗೆ ಮತ್ತೆ ರಕ್ತಸ್ರಾವವಾಗದಿದ್ದರೆ ಅಥವಾ ಮುಟ್ಟಿನ ಅವಧಿಯಲ್ಲಿ 35 ದಿನಗಳವರೆಗೆ ರಕ್ತಸ್ರಾವವಾಗದಿದ್ದರೆ, ಇದರ ಬಗ್ಗೆ ಗಮನ ಹರಿಸಲೇಬೇಕು. ಯಾಕೆಂದರೆ ಇದು ಸಾಮಾನ್ಯವಲ್ಲ, ಇದು ಅನೇಕ ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಹಾರ್ಮೋನುಗಳ ಅಸಮತೋಲನ, ಎಂಡೊಮೆಟ್ರಿಯೋಸಿಸ್, ಔಷಧಿಗಳು, ಇತರ ರೀತಿಯ ಸೋಂಕುಗಳು ಮತ್ತು ಗರ್ಭನಿರೋಧಕ ಮಾತ್ರೆಗಳ (Contraceptive Pills) ಸೇವನೆಗಳು ಸಹ ಇದಕ್ಕೆ ಕಾರಣವಾಗಿರಬಹುದು. ನಿಮಗೆ ಈ ರೀತಿಯಾದರೆ ಈ ಸಮಸ್ಯೆಗಳಿಗೆ ಸ್ವಯಂ ಚಿಕಿತ್ಸೆ ನೀಡಲು ಪ್ರಯತ್ನಿಸಬೇಡಿ, ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ ತಕ್ಷಣದ ಸಲಹೆ ಪಡೆಯಿರಿ.
ಋತುಚಕ್ರದ ನಡುವೆ ರಕ್ತಸ್ರಾವ
ನಿಮ್ಮಲ್ಲಿ ಯಾರಿಗಾದರೂ ಎರಡು ಋತುಚಕ್ರದ ನಡುವೆ ರಕ್ತಸ್ರಾವವಾಗಲು(bleeding) ಪ್ರಾರಂಭಿಸಿದರೆ, ಅದು ಒಳ್ಳೆಯ ಸಂಕೇತವಲ್ಲ. ಅನೇಕ ಪರಿಸ್ಥಿತಿಗಳು ಇದಕ್ಕೆ ಕಾರಣವಾಗಬಹುದು, ವಿಶೇಷವಾಗಿ ಅಂಡಾಶಯದ ಕ್ಯಾನ್ಸರ್ (Cervical Cancer) ಇದ್ದರೆ, ಆ ಸಮಯದಲ್ಲಿ ಈ ಲಕ್ಷಣ ಕಾಣಿಸಿಕೊಳ್ಳುತ್ತದೆ. ಇದಲ್ಲದೆ, ಇದು ಮೂತ್ರಕೋಶದ ಸೋಂಕನ್ನು ಸಹ ಸೂಚಿಸುತ್ತದೆ. ಆದ್ದರಿಂದ ಈ ಸ್ಥಿತಿಯನ್ನು ಎಂದಿಗೂ ನಿರ್ಲಕ್ಷಿಸಬೇಡಿ.
ಸಂಭೋಗದ ಸಮಯದಲ್ಲಿ ರಕ್ತಸ್ರಾವ
ಸಂಭೋಗದ(sex) ಸಮಯದಲ್ಲಿ ನಿಮ್ಮಲ್ಲಿ ಯಾರಿಗಾದರೂ ರಕ್ತಸ್ರಾವವಾಗಲು ಪ್ರಾರಂಭಿಸಿದರೆ, ನೀವು ಅದನ್ನು ನಿರ್ಲಕ್ಷಿಸಬಾರದು. ಇದು ಸಾಮಾನ್ಯವೇನಲ್ಲ. ಮಹಿಳೆಯರಲ್ಲಿ ಇಂತಹ ಸಮಸ್ಯೆಯನ್ನು ಗಂಭೀರ ಪರಿಸ್ಥಿತಿ ಎಂದು ಉಲ್ಲೇಖಿಸಲಾಗುತ್ತದೆ. ಸಂಭೋಗವು ನೈಸರ್ಗಿಕ ಪ್ರಕ್ರಿಯೆ. ನಿಮ್ಮ ಯೋನಿಯನ್ನು ಅದಕ್ಕೆ ಸರಿಯಾಗಿ ವಿನ್ಯಾಸಗೊಳಿಸಲಾಗಿದೆ, ಆದ್ದರಿಂದ ರಕ್ತಸ್ರಾವ ಪ್ರಾರಂಭವಾದಾಗ, ಅದು ಗಂಭೀರ ಚಿಹ್ನೆ ಅನ್ನೋದು ನೆನಪಿರಲಿ. ಇದು ಎಸ್ ಟಿಐ ಸಮಸ್ಯೆಯಿಂದ ಸಹ ಉಂಟಾಗಬಹುದು.
ಋತುಬಂಧದ ನಂತರ ರಕ್ತಸ್ರಾವ
ಋತುಬಂಧದ (Menopause)ಅವಧಿಯ ನಂತರವೂ ನಿಮಗೆ ರಕ್ತಸ್ರಾವವಾಗುತ್ತಿದ್ದರೆ, ಇದು ಒಳ್ಳೆಯ ಸಂಕೇತವಲ್ಲ. ಅದನ್ನು ನಿರ್ಲಕ್ಷಿಸಬಾರದು. ಋತುಬಂಧದಲ್ಲಿ ಕೆಲವೊಮ್ಮೆ ರಕ್ತಸ್ರಾವ ಆಗುತ್ತೆ ನಿಜಾ. ಆದರೆ ಋತುಬಂಧವು ಸಂಪೂರ್ಣವಾಗಿ ಪ್ರಾರಂಭವಾದಾಗ ಮತ್ತು ಸುಮಾರು ಒಂದು ವರ್ಷದ ನಂತರವೂ, ನೀವು ಇನ್ನೂ ಯೋನಿ ರಕ್ತಸ್ರಾವವನ್ನು ಹೊಂದಿದ್ದರೆ, ಅದು ಗಂಭೀರ ಸಮಸ್ಯೆಯ ಸಂಕೇತವಾಗಿರಬಹುದು. ಈ ಬಗ್ಗೆ ಜಾಗರೂಕರಾಗಿರಿ ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಗರ್ಭಾವಸ್ಥೆಯಲ್ಲಿ ರಕ್ತಸ್ರಾವ
ಗರ್ಭಾವಸ್ಥೆಯಲ್ಲಿ ರಕ್ತಸ್ರಾವವಾಗೋದು (pregnancy bleeding) ಸಹ ಗಂಭೀರ ಸಮಸ್ಯೆಯ ಲಕ್ಷಣ. ಆದಾಗ್ಯೂ, ಗರ್ಭಧರಿಸಿದ ತಕ್ಷಣ ಇಂಪ್ಲಾಂಟೇಶನ್ ರಕ್ತಸ್ರಾವ ಸಂಭವಿಸುತ್ತದೆ. ಅದರ ನಂತರ, ನೀವು ಯಾವುದೇ ರೀತಿಯ ರಕ್ತಸ್ರಾವವನ್ನು ಹೊಂದಿದ್ದರೆ, ಅದು ಸಾಮಾನ್ಯವಲ್ಲ.ಇದು ಗಂಭೀರ ಸಮಸ್ಯೆಯ ಸಂಕೇತವಾಗಿರಬಹುದು. ಗರ್ಭಧಾರಣೆ ಯೋನಿ ರಕ್ತಸ್ರಾವವು ಅಟೋಪಿಕ್ ಗರ್ಭಧಾರಣೆ, ಮೊಲಾರ್ ಗರ್ಭಧಾರಣೆ, ಗರ್ಭಕಂಠದ ಬದಲಾವಣೆಗಳು, ಸೋಂಕುಗಳು ಮತ್ತು ಗರ್ಭಪಾತದಂತಹ ಗಂಭೀರ ಸಮಸ್ಯೆಯ ಸೂಚನೆಯಾಗಿದೆ. ಈ ರೀತಿಯಾದ ತಕ್ಷಣ ವೈದ್ಯರನ್ನು ಭೇಟಿ ಮಾಡಿ.