ಆಟಕ್ಕೆ ಅಂತ ಒತ್ತೋ ಬಬಲ್ ರ‍್ಯಾಪರ್ ಒತ್ತಡವನ್ನೂ ನಿವಾರಿಸುತ್ತಂತೆ!
ಯಾವುದಾದರೂ ಪಾರ್ಸೆಲ್‌ಗೆ ಬಂದ ಬಬಲ್ ವ್ರ್ಯಾಪರ್ ಒಡೆಯೋದು ಮನಸ್ಸಿಗೆ ಖುಷಿ ಅನ್ಸುತ್ತೆ ಸುಮ್ಮನೆ ಆಟಕ್ಕಾಗಿ ಮಾಡೋ ಈ ಆ್ಯಕ್ಟಿವಿಟಿ ಮನಸ್ಸಿನ ಆರೋಗ್ಯಕ್ಕೆ ನಿಜವಾಗಲೂ ಒಳ್ಳೇಯದಂತೆ. ಒತ್ತಡ ಕಿಡಮೆ ಮಾಡುತ್ತಂತೆ. ಹೇಗೆ?
ಬಬಲ್ ರ‍್ಯಾಪರ್
ಆನ್‌ಲೈನ್‌ನಲ್ಲಿ ನಾವು ಏನಾದ್ರು ಆರ್ಡರ್ ಮಾಡಿದ್ರೆ, ಅದನ್ನ ಬಬಲ್ ರ‍್ಯಾಪರ್‌ನಲ್ಲಿ ಸುತ್ತಿ ಕೊರಿಯರ್ ಮಾಡ್ತಾರೆ. ಆ ಬಬಲ್ ರ‍್ಯಾಪರ್ ನೋಡಿದ್ರೆ ಬಬಲ್ಸ್ ಒಡೆಯಬೇಕು ಅನ್ಸುತ್ತೆ. ಒಡೆಯೋದು ಒಳ್ಳೇದು ಅಂತ ಕೆಲವರು, ಒಳ್ಳೇದಲ್ಲ ಅಂತ ಕೆಲವರು ಹೇಳ್ತಾರೆ. ನಿಜವಾಗ್ಲೂ, ಬಬಲ್ಸ್ ಒಡೆಯೋದ್ರಿಂದ ನಮ್ ಮನಸ್ಥಿತಿ ಹೇಗೆ ಗೊತ್ತಾಗುತ್ತಾ? ಇದು ಒಳ್ಳೆಯದಾ?
ಬಬಲ್ಸ್ ಒಡೆಯೋದಕ್ಕೆ ಜನರು ಖುಷಿ ಪಡ್ತಾರೆ. ಆದ್ರೆ ಇದ್ರಿಂದ ತುಂಬಾ ಲಾಭ ಇದೆ ಅಂತ ತಜ್ಞರು ಹೇಳ್ತಾರೆ. ಮುಖ್ಯವಾಗಿ ಮಾನಸಿಕ ಸಮಸ್ಯೆಗಳಿಗೆ ಬೆಸ್ಟ್ ಪರಿಹಾರ ಅಂತಾರೆ. ಬಬಲ್ಸ್ ಒಡೆಯೋದ್ರಿಂದ ಮಾನಸಿಕ ಖುಷಿ ಸಿಗುತ್ತೆ ಅಂತ ಸಂಶೋಧನೆಗಳಿಂದ ಗೊತ್ತಾಗಿದೆ. ಒಡೆದಾಗ ಮೆದುಳಿಂದ ಖುಷಿ ಹಾರ್ಮೋನ್ ರಿಲೀಸ್ ಆಗುತ್ತೆ. ಹೀಗಾಗಿ ಖುಷಿ ಸಿಗುತ್ತೆ.
ಇತ್ತೀಚಿನ ದಿನಗಳಲ್ಲಿ, ಜನರು ಒತ್ತಡಕ್ಕೆ ಒಳಗಾಗ್ತಾರೆ. ಬಬಲ್ಸ್ ಒಡೆಯೋದ್ರಿಂದ ಒತ್ತಡ ಕಡಿಮೆಯಾಗುತ್ತೆ. ಮನಸ್ಸಿಗೆ ಖುಷಿಯಾಗುತ್ತೆ. ಅದಕ್ಕೆ ಒಡೆಯೋದು ಒಳ್ಳೇದು.
ಟಿವಿ ನೋಡುವಾಗ, ಹಾಡು ಕೇಳುವಾಗ ಮನಸ್ಸು ಎಷ್ಟು ಏಕಾಗ್ರತೆಯಿಂದ ಇರುತ್ತೋ, ಬಬಲ್ಸ್ ಒಡೆಯುವಾಗಲೂ ಏಕಾಗ್ರತೆ ಹೆಚ್ಚಾಗುತ್ತೆ. ಒಡೆಯೋದು ಒಳ್ಳೇದು. ಮಾನಸಿಕ ತೃಪ್ತಿ ಕೂಡ ಸಿಗುತ್ತೆ. ಲೈಂಗಿಕ ಕ್ರಿಯೆಯಲ್ಲಿ ಸಿಗುವ ತೃಪ್ತಿ ಇದ್ರಲ್ಲೂ ಸಿಗುತ್ತಂತೆ.
ಏನಾದ್ರು ಕೆಲಸ ಮಾಡುವಾಗ ಏಕಾಗ್ರತೆ ಇಲ್ಲ ಅಂದ್ರೆ, ಬಬಲ್ಸ್ ಒಡೆದ್ರೆ ಸಾಕು. ಏಕಾಗ್ರತೆ ಹೆಚ್ಚಾಗುತ್ತೆ.ನೋಡಿ ನಾವು ಮಾಡುವ ಕೆಲವು ಕೆಲಸಗಳು ಮನಸ್ಸಿಗೆ ಖುಷಿ ಕೊಡೋ ಜೊತೆ, ಮಾನಸಿಕ ಒತ್ತಡವನ್ನೂ ನಿವಾರಿಸುತ್ತೆ.