ತರಹೇವಾರಿ ರೋಗಕ್ಕೆ ಮೂಲಂಗಿ ಎಂಬ ತರಕಾರಿಯ ಮದ್ದು

First Published Apr 4, 2021, 1:57 PM IST

ಸಸ್ಯಹಾರಿಗಳು ಹೆಚ್ಚಾಗಿ ಬಳಸುವ ತರಕಾರಿಗಳಲ್ಲಿ ಮೂಲಂಗಿಯೂ ಒಂದು. ಮೂಲಂಗಿಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಅಂಶವಿದೆ. ಮೂಲಂಗಿ ಕೇವಲ ರುಚಿಯೊಂದೇ ಅಲ್ಲ, ಅದರಲ್ಲಿ ರೋಗ ನಿರೋಧಕ ಶಕ್ತಿಯೂ ಅಧಿಕವಾಗಿದೆ. ಮೂಲಂಗಿ ಸೇವನೆಯಿಂದ ಕೆಮ್ಮು, ಶೀತದಿಂದ ಹಿಡಿದು ಕ್ಯಾನ್ಸರ್, ಕಾಮಾಲೆ ರೋಗವೂ ನಿವಾರಣೆಯಾಗುತ್ತದೆ. ಇದಲ್ಲದೇ ಇಂತಹ ಇನ್ನು ಹತ್ತು ಹಲವು ರೋಗಗಳನ್ನು ನಿವಾರಿಸುವಲ್ಲಿ ದಮೂಲಂಗಿ ಸಹಾಯ ಮಾಡುತ್ತದೆ.