ಹುಣಸೆ ಮಾತ್ರವಲ್ಲ, ಅದರ ಬೀಜ, ಸೊಪ್ಪಲ್ಲೂ ಇವೆ ನೂರಾರು ಪ್ರಯೋಜನ!

First Published Apr 5, 2021, 6:19 PM IST

ಹುಣಸೆ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುತ್ತದೆ. ಶಾಲಾ ದಿನಗಳಲ್ಲಿ ಬಾಲ್ಯದಲ್ಲಿ ಹೆಚ್ಚಿನವರ ಆಯ್ಕೆ ಇದಾಗಿರುತ್ತಿತ್ತು. ಮನೆಯವರ ಕಣ್ಣು ತಪ್ಪಿಸಿ, ಅದೆಷ್ಟು ಬಾರಿ ಕದ್ದು ತಿಂದಿದೆಯೋ ಕಾಣೆ, ಆದರೆ ಹುಣಸೆಹಣ್ಣು ತಿನ್ನುವುದನ್ನು ತಡೆಯುವುದು ಅಷ್ಟು ಸುಲಭವಲ್ಲ. ಚಟ್ನಿ ಅಥವಾ ರಸಂ ಅಥವಾ ಸಾಂಬಾರ್ ಇರಲಿ, ವಿವಿಧ ಬಗೆಯ ಖಾದ್ಯಗಳಲ್ಲಿ ಇದು ವಿಶೇಷ ಪಾತ್ರ ವಹಿಸುತ್ತದೆ. ಆದರೆ ರುಚಿ ಮಾತ್ರವಲ್ಲ, ಆರೋಗ್ಯ ರಕ್ಷಣೆಯಲ್ಲೂ ಹುಣಸೆ ಹಣ್ಣು ವಿಶೇಷ ಪಾತ್ರ ವಹಿಸುತ್ತದೆ ಎಂಬುದು ಗೊತ್ತೇ?