ತ್ವಚೆ ಸಮಸ್ಯೆ ನಿವಾರಣೆಗೆ ಮೂಸಂಬಿ ಹಣ್ಣನ್ನು ಹೀಗೆ ಬಳಸಿ...
ಮೂಸಂಬಿ ಹಣ್ಣು ಹೆಚ್ಚಿನ ಜನಕ್ಕೆ ಇಷ್ಟ ಆಗೋದಿಲ್ಲ. ಆದರೆ ಇದರ ಜ್ಯೂಸನ್ನು ಇಷ್ಟಪಟ್ಟು ಸೇವಿಸುತ್ತಾರೆ. ಇದು ಆರೋಗ್ಯಕ್ಕೆ ಉತ್ತಮವೂ ಹೌದು. ಮೂಸಂಬಿ ಹಣ್ಣು ಹೆಚ್ಚು ಪೋಷಕ ಸತ್ವಗಳನ್ನು ಹೊಂದಿರುವ ಸಿಟ್ರಸ್ ಹಣ್ಣು. ಇದನ್ನು ಡಯಟ್‌ನಲ್ಲಿ ಬಳಸಿದರೆ ಅರೋಗ್ಯ ಉತ್ತಮವಾಗುತ್ತದೆ. ಅಷ್ಟೇ ಅಲ್ಲ ಚರ್ಮದ ಸಮಸ್ಯೆಗಳನ್ನೂ ನಿವಾರಿಸುತ್ತದೆ. ಹೌದು ಮೂಸಂಬಿ ಹಣ್ಣನ್ನು ಸಹ ಮುಖಕ್ಕೆ ಬಳಕೆ ಮಾಡಿ ಚರ್ಮದ ಸಮಸ್ಯೆಯನ್ನು ಸುಲಭವಾಗಿ ದೂರ ಮಾಡಬಹುದು.
ಮೂಸಂಬಿಯಲ್ಲಿ ವಿಟಮಿನ್ ಸಿ ಯಥೇಚ್ಛವಾಗಿರುತ್ತದೆ. ಇದರಲ್ಲಿರುವ ಸಿಟ್ರಿಕ್ ಜ್ಯೂಸ್ ಸ್ಕಿನ್ ಕ್ಲೀನ್ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿ ಮೂಸಂಬಿಯನ್ನು ಮಧ್ಯದಿಂದ ಕತ್ತರಿಸಿ ಎರಡು ಭಾಗ ಮಾಡಿ ಅದರಿಂದ ಮುಖವನ್ನು 7-8 ನಿಮಿಷ ಮಸಾಜ್ ಮಾಡಿ.
ಟ್ಯಾನಿಂಗ್ ಸಮಸ್ಯೆಯಿಂದ ಬಳಲುತ್ತಿದ್ದರೆ, ಮೂಸಂಬಿ ಫೇಸ್ ಪ್ಯಾಕ್ ಸಹಾಯ ಮಾಡುತ್ತದೆ. ಇದು ಮುಖದ ಕಲೆಗಳನ್ನು ನಿವಾರಿಸುತ್ತದೆ.
ಮೂಸಂಬಿಯನ್ನು ಪೇಸ್ಟ್ ಮಾಡಿ ಅದಕ್ಕೆ ಅರಿಶಿನ ಮತ್ತು 1 ಚಮಚ ಜೇನು ಬೆರೆಸಿ. ಈಗ ಈ ಪೇಸ್ಟನ್ನು ಮುಖದ ಮೇಲೆ ಹಚ್ಚಿ. 5-10 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಇದನ್ನು ಟ್ರೈ ಮಾಡಿ.
ಡಾರ್ಕ್ ಸರ್ಕಲ್ ಹೆಚ್ಚಿನ ಜನರಿಗೆ ಕಾಡುವ ಸಾಮಾನ್ಯ ಸಮಸ್ಯೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಮೂಸಂಬಿ ನೆರವಾಗುತ್ತದೆ.
ಮೂಸಂಬಿ ರಸಕ್ಕೆ ಒಂದು ಚಮಚ ಬಾಳೆಹಣ್ಣಿನ ಪೇಸ್ಟ್, ಸೌತೆಕಾಯಿ ರಸ ಮತ್ತು ವಿಟಮಿನ್ ಈ ಜೆಲ್ ಬೆರೆಸಿ ಕಣ್ಣಿನ ಸುತ್ತಲೂ ಮತ್ತು ಮುಖಕ್ಕೆ ಮಸಾಜ್ ಮಾಡಿ. ಐದು ನಿಮಿಷದ ನಂತರ ತಂಪಾದ ನೀರಿನಲ್ಲಿ ಮುಖ ತೊಳೆಯಿರಿ. ಡಾರ್ಕ್ ಸರ್ಕಲ್ ಮಾಯವಾಗುತ್ತದೆ.
ಮೊಸಂಬಿ ರಸವನ್ನು ದಿನಕ್ಕೆ 2-3 ಬಾರಿ ತುಟಿಗಳಿಗೆ ಉಜ್ಜಿದರೆ ತುಟಿಗಳ ಡಾರ್ಕ್ ಬಣ್ಣ ಕಡಿಮೆ ಮಾಡಬಹುದು ಮತ್ತು ಮಚ್ಚೆ ಇರುವ ತುಟಿಗಳನ್ನು ಉಪಚರಿಸುತ್ತದೆ.
ಮೊಸಂಬಿ ರಸ ಬೆರೆಸಿದ ನೀರಿನಿಂದ ಸ್ನಾನ ಮಾಡುವುದರಿಂದ, ದೇಹದ ದುರ್ಗಂಧ ಮತ್ತು ಬೆವರಿನ ಸಮಸ್ಯೆ ನಿವಾರಣೆಯಾಗಿ ಉತ್ತಮ ಫೀಲ್ ಕೊಡುತ್ತದೆ.
ಮೊಸಂಬಿ ಜ್ಯೂಸ್ ವಿವಿಧ ವರ್ಣದ್ರವ್ಯಗಳ ಸಮಸ್ಯೆಗಳನ್ನು, ಅಂದರೆ ಕಲೆಗಳು, ಮೊಡವೆಗಳು ಮತ್ತು ಕಲೆಗಳನ್ನು ಗುಣಪಡಿಸಲು ಉಪಯೋಗಿಸಲಾಗುತ್ತದೆ. ಇದಕ್ಕಾಗಿ ರಾತ್ರಿ ಮಲಗುವ ಸಮಯದಲ್ಲಿ ಬಾಧಿತ ಪ್ರದೇಶಕ್ಕೆ ತಾಜಾ ಮೊಸಂಬಿ ರಸವನ್ನು ಹಚ್ಚಿ ಮರುದಿನ ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಮೊಸಂಬಿ ರಸದಲ್ಲಿ ತಾಮ್ರವಿದೆ. ಈ ಖನಿಜವು ಮೆಲನಿನ್ ಎಂಬ ವರ್ಣದ್ರವ್ಯದ ರಚನೆಯಲ್ಲಿ ತೊಡಗಿರುತ್ತದೆ, ಇದು ಕೂದಲಿಗೆ ಬಣ್ಣವನ್ನು ನೀಡಲು ಕಾರಣವಾಗಿದೆ.
ಶಾಂಪೂ ಮತ್ತು ಕಂಡೀಷನರ್ ಬಳಸಿದ ನಂತರ ಮೊಸಂಬಿ ರಸವನ್ನು ಕೊನೆಯ ಬಾರಿ ಬಳಸಿ, ಇದರಿಂದ ನಿಮಗೆ ಮೃದುವಾದ ಮತ್ತು ಹೊಳೆಯುವ ಕೂದಲು ದೊರಕುವುದು.