ಗೋಧಿ ಹಿಟ್ಟಿನ ಚಪಾತಿ ಮಾಡುವಾಗ ಈ ತಪ್ಪು ಮಾಡೋಲ್ಲ ಅಲ್ವಾ?
ನಾವು ಸಾಮಾನ್ಯವಾಗಿ ಗೋಧಿ ಹಿಟ್ಟನ್ನು (wheat flour) ಮನೆಗೆ ತಂದಾಗ ಏನು ಮಾಡುತ್ತೇವೆ? ಖಂಡಿತವಾಗಿ ಮಿಸ್ ಮಾಡದೆ ಅದನ್ನು ಜರಡಿ ಹಿಡಿದು, ಹೊಟ್ಟನ್ನು ಬೇರ್ಪಡಿಸಿ ನಂತರ ಚಪಾತಿ ಮಾಡುತ್ತೇವೆ. ಆದರೆ ನಿಮಗೆ ಗೊತ್ತಾ? ಹೊಟ್ಟನ್ನು ಬೇರ್ಪಡಿಸದೆ ಬ್ರೆಡ್ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ, ಅದರ ಬಗ್ಗೆ ತಿಳಿದ್ರೆ ನಿಮಗೆ ಆಶ್ಚರ್ಯವಾಗಬಹುದು ಖಂಡಿತಾ...
ಜನರು ಹೆಚ್ಚಾಗಿ ಗೋಧಿ ಹೊಟ್ಟನ್ನು ಫಿಲ್ಟರ್ ಮಾಡಿ ಹೊರಗೆ ಎಸೆಯುತ್ತಾರೆ. ಹೀಗೆ ಮಾಡೊದರಿಂದ ಚಪಾತಿ ತುಂಬಾ ಸ್ಮೂತ್ ಆಗಿ ಬರುತ್ತದೆ ಅನ್ನೋದೇನೋ ನಿಜ. ಆದರೆ ನಿಮಗೆ ಗೊತ್ತಾ? ಈ ಹೊಟ್ಟು ಇರೋ ಗೋಧಿ ಹಿಟ್ಟು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಸಿಪ್ಪೆ ಸೇರಿದಂತೆ ಸಂಪೂರ್ಣ ಗೋಧಿ ಹಿಟ್ಟು ಆರೋಗ್ಯಕ್ಕೆ ಪ್ರಯೋಜನಕಾರಿ.
ಗೋಧಿ (Wheat) ಮತ್ತು ಅದರ ಹೊಟ್ಟು, ನಾರಿನಂಶ (Fibre), ಜೀವಸತ್ವಗಳು (Proteins) ಮತ್ತು ಸಿಪ್ಪೆಗಳಿಂದ ಸಮೃದ್ಧವಾಗಿರುವ ಖನಿಜಗಳು ಸೇರಿದಂತೆ ಹಲವಾರು ಪೌಷ್ಟಿಕ ಅಂಶಗಳಿಂದ ಸಮೃದ್ಧವಾಗಿದೆ. ಅದಕ್ಕಾಗಿಯೇ ತಜ್ಞರು ಅದರ ಸೇವನೆ ಮಾಡಿ ಎನ್ನುತ್ತಾರೆ. ಇದರ ಸೇವನೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು (health benefits)ಹೊಂದಿದೆ. ಹೊಟ್ಟು ಹಿಟ್ಟನ್ನು ಬಳಸುವುದರಿಂದ ಉಂಟಾಗುವ ಆರೋಗ್ಯ ಪ್ರಯೋಜನಗಳು ಯಾವುವು? ತಿಳಿದುಕೊಳ್ಳೋಣ -
ಹೊಟ್ಟು ಹೊಂದಿರುವ ಹಿಟ್ಟಿನಲ್ಲಿ ನಾರಿನಂಶವು (fiber)ಸಮೃದ್ಧವಾಗಿದೆ, ಇದು ಹೊಟ್ಟೆಯ ಸಮಸ್ಯೆಗಳು ಬಾರದಂತೆ ತಡೆಗಟ್ಟುತ್ತದೆ. ಅಂದರೆ ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸಿ, ಸುಲಭವಾಗಿ ಜೀರ್ಣಕ್ರಿಯೆ ಆಗುವಂತೆ ನೋಡಿಕೊಳ್ಳುತ್ತದೆ. ಅದಕ್ಕಾಗಿ ಹೊಟ್ಟು ಬಳಸಿಯೇ ತಯಾರಿಸಿದ ಚಪಾತಿ ಸೇವಿಸಿ.
ಹೊಟ್ಟು ಹೊಂದಿರುವ ಚಪಾತಿ ಹಿಟ್ಟನ್ನು ಸೇವಿಸುವುದರಿಂದ ಹೃದಯ-ಮನಸ್ಸು ಆರೋಗ್ಯಕರವಾಗಿರುತ್ತದೆ, ಏಕೆಂದರೆ ಹೊಟ್ಟು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ. ಇದರಿಂದ ಹೃದಯದ ಆರೋಗ್ಯವೂ (heart health)ಉತ್ತಮವಾಗಿರುತ್ತದೆ. ಜೊತೆಗೆ ಮನಸು ಸಹ ಉತ್ತಮವಾಗಿರುತ್ತದೆ.
ಸಂಶೋಧಕರ ಪ್ರಕಾರ, ಗೋಧಿ ಹೊಟ್ಟು ರಕ್ತದಲ್ಲಿನ ಇಮ್ಯುನೊಗ್ಲೋಬ್ಯುಲಿನ್ಗಳ ಪ್ರಮಾಣವನ್ನು ಹೆಚ್ಚಿಸುತ್ತದೆ, ಇದು ದೇಹದ ರೋಗನಿರೋಧಕ ಶಕ್ತಿಯನ್ನು (Immunity Power) ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತಪರಿಚಲನೆ ಕೂಡ ಚೆನ್ನಾಗಿರುತ್ತದೆ. ಇದರಿಂದ ಹೃದಯದ ಆರೋಗ್ಯ (health) ಸಹ ಉತ್ತಮವಾಗಿರುತ್ತದೆ.
ಇದು ಹೆಮೊರಾಯ್ಡ್‌ಗಳು, ಅಪೆಂಡಿಸೈಟಿಸ್, ದೊಡ್ಡ ಕರುಳು ಮತ್ತು ಗುದನಾಳದ ಕ್ಯಾನ್ಸರ್ನಿಂದ ರಕ್ಷಿಸುತ್ತದೆ. ಪ್ರತಿದಿನ ನಿಯಮಿತವಾಗಿ ಗೋಧಿ ಹೊಟ್ಟು ಇರುವ ಹಿಟ್ಟನ್ನು ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಲವು ಸಮಸ್ಯೆಗಳನ್ನು ನಿವಾರಣೆ ಮಾಡಲು ಇದು ಪ್ರಯೋಜನಕಾರಿ.
ಜೀರ್ಣಕಾರಿ ಸಮಸ್ಯೆಗಳನ್ನು (digestion problem) ತೆಗೆದುಹಾಕುವ ಮೂಲಕ ಮಲಬದ್ಧತೆಯ ಸಮಸ್ಯೆಗೆ ಹೊಟ್ಟು ಹಿಟ್ಟಿನ ಬಳಕೆಯು ಉತ್ತಮ ಆಹಾರವಾಗಿದೆ. ಹೊಟ್ಟು ಹಿಟ್ಟಿನ ಬಳಕೆಯು ಬೊಜ್ಜು ಮತ್ತು ಹೃದ್ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ಇದನ್ನು ನೀವು ನಿಯಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ.
ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸುವಲ್ಲಿ ಇದು ಪರಿಣಾಮಕಾರಿಯಾಗಿದೆ. ಹೌದು ಸರ್ಪ್ರೈಸ್ ಆಯ್ತಾ? ಹೊಟ್ಟು ಇರುವ ಗೋಧಿಯ ಹಿಟ್ಟನ್ನು ನಿಯಮಿತವಾಗಿ ಬಳಸುವ ಮೂಲಕ ನೀವು ಸುಲಭವಾಗಿ ತೂಕ ಇಳಿಸಬಹುದು. ಹೊಟ್ಟು ತಿನ್ನುವುದು ದೇಹದಲ್ಲಿ ರಕ್ತದ ಕೊರತೆಯನ್ನು ಸರಿದೂಗಿಸಲು ಸಹಾಯ ಮಾಡುತ್ತದೆ.