ಕೆಲಸ ಕಳೆದುಕೊಂಡ ಮಹಿಳೆ… ಸ್ಕಿಪ್ಪಿಂಗ್ ಮಾಡಿಯೇ ಲಕ್ಷಾಂತರ ರೂಪಾಯಿ ಗಳಿಸ್ತಾರೆ!
ಹೆಚ್ಚಿನ ಜನರು ಕೆಲಸವಿಲ್ಲದೇ ಏನೇನೋ ಕೆಲಸ ಮಾಡ್ಕೊಂಡು ಜೀವನ ಸಾಗಿಸ್ತಾರೆ, ಆದ್ರೆ ಹೆಚ್ಚಿನ ಹಣ ಗಳಿಸೋಕೆ ಸಾಧ್ಯವಾಗೋದಿಲ್ಲ. ಆದ್ರೆ ಇಲ್ಲೊಬ್ಬಳು ಮಹಿಳೆ ಮಹಿಳೆ ಕೆಲಸ ಕಳೆದುಕೊಂಡ ಬಳಿಕ ಸದ್ಯ ಸ್ಕಿಪ್ಪಿಂಗ್ ಮಾಡ್ಕೊಂಡೆ ಹಣ ಮಾಡ್ತಿದ್ದಾರೆ.
ಕೆಲಸ ಇಲ್ಲದೇ ಒದ್ದಾಡೋ ಎಷ್ಟೋ ಜನರಿದ್ದಾರೆ. ಅಥವಾ ಕೆಲಸ ಕಳೆದುಕೊಂಡು ಕೆಲಸಕ್ಕಾಗಿ ಅಲೆದಾಡುವವರು ಹಲವರಿದ್ದಾರೆ. ಆದರೆ ಎಲ್ಲೂ ಕೆಲಸ ಸಿಗದೇ ಕಂಗಾಲಾಗಿ, ಬದುಕನ್ನ ಕೊನೆಗೊಳಿಸುವವರನ್ನೂ ನೀವು ನೋಡಿರಬಹುದು. ಆದರೆ ಈ ಮಹಿಳೆಯ ಕಥೆಯೇ ಬೇರೆ.
32 ವರ್ಷದ ಈ ಮಹಿಳೆಯರ ಹೆಸರು ಲಾರೆನ್ ಫೈಮನ್, ಆದರೆ ಇಂಟರ್ನೆಟ್ ನಲ್ಲಿ ಈಕೆ ಫೇಮಸ್ ಆಗಿರೋದು ಲಾರೆನ್ ಜಂಪ್ಸ್ (Lauren Jumps) ಎನ್ನೋ ಹೆಸರಿನಿಂದ. ಯಾರೀ ಮಹಿಳೆ, ಯಾಕೆ ಈಕೆ ಫೇಮಸ್ ಆದಳು ಗೊತ್ತಾ? ಅದರ ಹಿಂದಿದೆ ಇಂಟ್ರೆಸ್ಟಿಂಗ್ ಮಾಹಿತಿ.
ಲಾರೆನ್ ಮೊದಲ ಸೇಲ್ಸ್ ಕಂಪನಿಯೊಂದರಲ್ಲಿ (sales Company) ಕೆಲಸ ಮಾಡುತ್ತಿದ್ದಳು, ಆದ್ರೆ ಆಕೆಗೆ ಆ ಕೆಲಸ ಇಷ್ಟಾನೆ ಆಗಿರಲಿಲ್ಲವಂತೆ. ಆದ್ರೂ ಕೆಲಸ ಮಾಡುತ್ತಿದ್ದರೆ. ಆದರೆ 2020ರ ವೇಳೆ ಪ್ರಪಂಚದಾದ್ಯಂತ ಕೊರೋನಾ ಲಗ್ಗೆ ಇಟ್ಟ ಸಮಯದಲ್ಲಿ ಲಾಕ್ ಡೌನ್ ಆಗಿದ್ದಾಗ ಇವರನ್ನ ಕೆಲಸದಿಂದಲೇ ತೆಗೆದು ಹಾಕಿದ್ದರು.
ಕೆಲಸ ಕಳೆದುಕೊಂಡು ಮನೆಯಲ್ಲಿ ಸುಮ್ಮನೆ ಇರೋದು ಯಾಕೆ ಎಂದು ಮನೆಯಲ್ಲಿಯೇ ಜಿಮ್ ಮಾಡೋದಕ್ಕೆ ಆರಂಭಿಸಿದ್ರು ಲಾರೆನ್. ಜೊತೆಗೆ ರೋಪ್ ಹಿಡಿದು ಸ್ಕಿಪ್ಪಿಂಗ್ ಮಾಡೊದಕ್ಕೂ ಆರಂಭಿಸಿದ್ರು. ಸಮಯ ಕಳೆದಂತೆ ಈಕೆ ಸ್ಕಿಪ್ಪಿಂಗ್ (Skipping) ಮಾಡೊದ್ರಲ್ಲಿ ಎಷ್ಟೊಂದು ಎಕ್ಸ್ ಪರ್ಟ್ ಆದ್ರೂ ಅಂದ್ರೆ, ಬೇರೆ ಬೇರೆ ರೀತಿಯ ಸ್ಕಿಪ್ಪಿಂಗ್ ಕೂಡ ಕರಗತ ಮಾಡಿಕೊಂಡರು.
ನಂತರ ಇವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ಅಕೌಂಟ್ ಗಳನ್ನ ತೆರೆದು, ಅದರಲ್ಲಿ ತಮ್ಮ ಸ್ಕಿಪ್ಪಿಂಗ್ ವಿಡೀಯೋ ಅಪ್ ಲೋಡ್ ಮಾಡೋದಕ್ಕೆ ಆರಂಭಿಸಿದ್ರು. ಇವರ ವಿಡೀಯೋಗಳು ಎಷ್ಟೊಂದು ಫೇಮಸ್ ಆದವು ಅಂದ್ರೆ ಹಲವಾರು ಬ್ರ್ಯಾಂಡ್ ಗಳು ಇವರ ಜೊತೆ ಕೊಲಾಬರೇಟ್ ಮಾಡೋಕೆ ಆರಂಭಿಸಿದವು.
ಪ್ರಖ್ಯಾತ ಕಂಪನಿಯಾದ ಅಡಿಡಾಸ್ ಕೂಡ ಇವರೊಂದಿಗೆ ಟೈ ಅಪ್ ಮಾಡಿಕೊಂಡಿತ್ತು, ಪರಿಣಾಮ ಲಕ್ಷಾಂತರ ರೂಪಾಯಿ ಗಳಿಸೋಕೆ ಆರಂಭಿಸಿದರು ಲಾರೆನ್. ಮೊದಲು 9-5 ಗಂಟೆಯ ಉದ್ಯೋಗ ಮಾಡ್ತಿದ್ರು, ಈಗ 6-6 ಗಂಟೆಗಳ ಕಾಲ ಸ್ಕಿಪ್ಪಿಂಗ್ ಮಾಡ್ಕೊಂಡೆ ದುಡ್ಡು ಗಳಿಸ್ತಾರೆ.
ಕೆಲಸ ಕೈಕೊಟ್ಟಾಗ ಸುಮ್ಮನಿರೋದು ಬಿಟ್ಟು ಈ ರೀತಿ ಹಣ ಗಳಿಸಿದ್ರೆ ಜೀವನ ಖಂಡಿತಾ ಸಕ್ಕತಾಗಿರುತ್ತೆ. ನೀವು ಸಹ ಕೆಲಸ ಇಲ್ಲ ಎಂದು ಸುಮ್ಮನೆ ಕೈ ಕಟ್ಟಿ ಕೂರ್ಬೇಡಿ. ಎಲ್ಲರಿಗಿಂತ ವಿಭಿನ್ನವಾದುದನ್ನು ಏನಾದ್ರೂ ಮಾಡೋ ಮೂಲಕ ಜೀವನದಲ್ಲಿ ಪ್ರಗತಿ ಸಾಧಿಸಿ.