ಈ ಹಣ್ಣು ತಿಂದ್ರೆ ವೈದ್ಯರಿಂದ ದೂರ ಉಳೀಬಹುದು, ಬೀಜ ತಿಂದ್ರೆ ಹೊಗೆ ಅಷ್ಟೇ!
ಸೇಬು ಹಣ್ಣು ತಿನ್ನೋದು ಆರೋಗ್ಯಕ್ಕೆ ತುಂಬಾನೆ ಒಳ್ಳೆದು. ಆದರೆ ಸೇಬಿನ ಬೀಜಗಳನ್ನು ತಿನ್ನುವುದು ಅಪಾಯಕಾರಿ ಅನ್ನೋದು ನಿಮಗೆ ಗೊತ್ತಾ? ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಕೆಲವು ಹಣ್ಣುಗಳ ಬೀಜಗಳು ಅಪಾಯಕಾರಿ ವಿಷವನ್ನು ಹೊಂದಿದೆ. ಅವುಗಳನ್ನ ತಿನ್ನಲೇಬಾರದು.
ಪ್ರತಿದಿನ ಹಣ್ಣುಗಳನ್ನು ತಿನ್ನುವುದು ರೋಗನಿರೋಧಕ ಶಕ್ತಿಯನ್ನು (immunity power) ಹೆಚ್ಚಿಸುತ್ತದೆ. ಹಣ್ಣುಗಳಲ್ಲಿ ಫೈಬರ್ ಅಂಶ ಇದ್ದು, ಅವು ಜೀರ್ಣಕ್ರಿಯೆಯನ್ನು (Digestive System) ಹೆಚ್ಚಿಸುತ್ತದೆ.ಅಷ್ಟೇ ಅಲ್ಲದೇ ದೇಹಕ್ಕೆ ಹೆಚ್ಚಿನ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತವೆ. ಅವುಗಳನ್ನು ತಿನ್ನುವ ಮೂಲಕ ಶಕ್ತಿಯ ಕೊರತೆಯನ್ನು ನಿವಾರಿಸಬಹುದು. ಆದರೆ ಹಣ್ಣಿನ ಬೀಜವನ್ನು ತಿನ್ನೋದು ಮಾತ್ರ ತುಂಬಾ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ? ಹೌದು ನೀವು ಇಷ್ಟಪಟ್ಟು ತಿನ್ನೋ ಹಣ್ಣುಗಳ ಬೀಜದಲ್ಲಿವೆ ಮಾರಕ ವಿಷ. ಇದರಿಂದ ಸಾವು ಬರಬಹುದು ಜೋಪಾನ.
ನಿಮಗೆ ಗೊತ್ತಾ? ಕೆಲವು ಹಣ್ಣಿನ ಬೀಜಗಳಲ್ಲಿ ಸೈನೈಡ್ (cyanide) ಎಂಬ ವಿಷಕಾರಕ ಅಂಶ ಇದೆ. ಇದನ್ನು ವಿಶ್ವದ ಅತ್ಯಂತ ಅಪಾಯಕಾರಿ ವಿಷವೆಂದು ಪರಿಗಣಿಸಲಾಗಿದೆ. ಇದು ದೇಹಕ್ಕೆ ಹೋದ ಕೆಲವೇ ಕ್ಷಣಗಳಲ್ಲಿ ಅಪಾಯಕಾರಿ ಪರಿಣಾಮಗಳನ್ನ ತೋರಿಸಲು ಪ್ರಾರಂಭಿಸುತ್ತದೆ. ಸಿಡಿಸಿ ಪ್ರಕಾರ, ಇದು ನಿಮ್ಮ ಹೃದಯ ಮತ್ತು ಮನಸ್ಸನ್ನು ಹಾಳು ಮಾಡುತ್ತದೆ.
ಹಣ್ಣಿನ ಬೀಜ ಜಗಿಯುವುದರಿಂದ ವಿಷ ಬಿಡುಗಡೆಯಾಗುತ್ತದೆ
ಸಿಡಿಸಿ ಪ್ರಕಾರ, ಕೆಲವು ಹಣ್ಣಿನ ಬೀಜಗಳು (seeds of fruits) ಸೈನೈಡ್ ತರಹದ ಪರಿಣಾಮಗಳನ್ನು ಹೊಂದಿದೆ. ಅವುಗಳ ಒಳಗೆ ಅಮಿಗ್ಡಾಲಿನ್ ಎಂಬ ಸಂಯುಕ್ತವಿದೆ. ನೀವು ಈ ಬೀಜಗಳನ್ನು ಜಗಿಯುವಾಗ, ಅಮಿಗ್ಡಾಲಿನ್ ದೇಹದಲ್ಲಿ ಹರಡುತ್ತದೆ. ಇದು ಸೈನೈಡ್ ಆಗಿ ಕಾರ್ಯನಿರ್ವಹಿಸುವುದರಿಂದ ಇದನ್ನು ಸೈನೊಗ್ಲೈಕೋಸೈಡ್ ಎಂದೂ ಕರೆಯುತ್ತಾರೆ.
ಯಾವ ಹಣ್ಣಿನ ಬೀಜಗಳನ್ನ ತಿನ್ನಬಾರದು ಗೊತ್ತಾ? ಇವುಗಳಲ್ಲಿ ನೀವು ಪ್ರತಿದಿನ ತಿನ್ನುವ ಅಥವಾ ನೀವು ಇಷ್ಟಪಟ್ಟು ತಿನ್ನುವ ಕೆಲವೊಂದು ಹಣ್ಣುಗಳು ಸಹ ಇವೆ. ಅವುಗಳೆಂದರೆ…
ಸೇಬು (apple)
ಏಪ್ರಿಕಾಟ್
ಪೀಚ್ ಹಣ್ಣು
ಪರ್ಷಿಯನ್ ಪ್ಲಮ್
ಚೆರ್ರಿ
ಈ ಹಣ್ಣುಗಳ ಬೀಜ ತಿಂದ್ರೆ ಏನಾಗುತ್ತೆ?
ಈ ವಿಷಕಾರಿ ಬೀಜಗಳನ್ನು (poisonous seeds) ತಿನ್ನೋದ್ರಿಂದ ಅಡ್ಡಪರಿಣಾಮಗಳು ಉಂಟಾಗಬಹುದು. ನಿರ್ಲಕ್ಷಿಸಿದರೆ, ಅದು ಅಪಾಯಕಾರಿಯಾಗಲೂಬಹುದು. ಆದ್ದರಿಂದ, ಈ ರೋಗಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬಾರದು. ದೇಹದಲ್ಲಿ ಸೈನೈಡ್ ಹರಡಿದ್ರೆ ಉಸಿರಾಟದ ತೊಂದರೆ ಮತ್ತು ಸೆಳೆತಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಅಲ್ಲದೇ ಇದು ಮೂರ್ಛೆಗೂ ಕಾರಣವಾಗಬಹುದು.
ಮಕ್ಕಳಿಗೂ ಈ ಮಾಹಿತಿ ನೀಡೋದನ್ನ ಮರಿಬೇಡಿ
ಈ ಹಣ್ಣುಗಳ ಬೀಜಗಳು ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿರುತ್ತವೆ, ಇದು ತುಂಬಾ ಹಾನಿಯನ್ನು ಉಂಟುಮಾಡುತ್ತದೆ ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಹೇಳುತ್ತದೆ. ಆದ್ದರಿಂದ, ನೀವು ಈ ಬೀಜಗಳನ್ನು ತಪ್ಪಾಗಿಯೂ ಸೇವಿಸಬಾರದು. ಇದನ್ನು ಮಕ್ಕಳಿಗೂ ತಿಳಿಸಿ, ಯಾಕಂದ್ರೆ ಮಕ್ಕಳು ಗೊತ್ತಿಲ್ಲದೇ ಈ ಬೀಜಗಳನ್ನು ತಿನ್ನುತ್ತಾರೆ, ಹಾಗಾಗಿ ಇವತ್ತೆ ಮಕ್ಕಳಿಗೆ ಇದನ್ನ ತಿಳಿಸಿ, ಆರೋಗ್ಯ ಅಪಾಯವಾಗೋದನ್ನ ತಪ್ಪಿಸಿ.
ಎಷ್ಟು ಬೀಜ ತಿಂದ್ರೆ ಹಾನಿಯಾಗುತ್ತೆ ಗೊತ್ತ?
ಈ ಬೀಜಗಳು ಕಡಿಮೆ ಪ್ರಮಾಣದ ಸೈನೈಡ್ ರೂಪಿಸುವ ಸಂಯುಕ್ತಗಳನ್ನು ಹೊಂದಿರುತ್ತವೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ, ನೀವು ಆಕಸ್ಮಿಕವಾಗಿ ಒಂದು ಅಥವಾ ಎರಡು ಬೀಜಗಳನ್ನು ತಿಂದರೆ ಅದ್ರಿಂದ ತೊಂದ್ರೆ ಏನಿಲ್ಲ. ಆದರೆ ಹೆಚ್ಚಿನ ಪ್ರಮಾಣದ ಬೀಜಗಳನ್ನು ಒಟ್ಟಿಗೆ ತಿಂದ್ರೆ ಅದು ವಿಷವಾಗಿ ಪರಿಣಮಿಸುತ್ತೆ. ಯಾವುದೇ ಸಮಸ್ಯೆ ಆಗಬಾರದು ಅಂದ್ರೆ ಬೀಜ ತಿನ್ನೋದನ್ನ ಅವಾಯ್ಡ್ ಮಾಡಿ.