ಜಪಾನಿಯರ ಫಿಟ್ನೆಸ್ ರಹಸ್ಯ! ಆರೋಗ್ಯಕರ ದೇಹವನ್ನು ಹೇಗೆ ಉಳಿಸಿಕೊಳ್ಳುತ್ತಾರೆ?
ಜಪಾನಿಯರು ಆರೋಗ್ಯಕರ ಆಹಾರ ಪದ್ಧತಿ, ನಿಯಂತ್ರಣ ಮತ್ತು ಚುರುಕಾದ ಜೀವನಶೈಲಿಯ ಮೂಲಕ ತಮ್ಮ ದೇಹಾರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ.

ಮೆಲಿತಾದ ದೇಹ ಮತ್ತು ದೀರ್ಘಾಯುಷ್ಯಕ್ಕೆ ಜಪಾನಿಯರು ಹೆಸರುವಾಸಿ. ಆರೋಗ್ಯಕರ ಆಹಾರ, ನಿಯಂತ್ರಣ ಮತ್ತು ಚುರುಕಾದ ಜೀವನಶೈಲಿಯಿಂದ ಜಪಾನಿಯರು ದೇಹಾರೋಗ್ಯ ಕಾಪಾಡಿಕೊಳ್ಳುತ್ತಾರೆ. ಆದರೆ ಜಪಾನಿಯರು ಯಾಕೆ ತೂಕ ಹೆಚ್ಚಿಸಿಕೊಳ್ಳುವುದಿಲ್ಲ ಗೊತ್ತಾ?
ಮನೆಯಲ್ಲಿ ತಯಾರಿಸಿದ ಆಹಾರ, ಮೀನು, ಅಕ್ಕಿ, ತರಕಾರಿ ಮತ್ತು ಹುದುಗುಬರಿಸಿದ ಪದಾರ್ಥಗಳಂಥ ಋತುಮಾನದ ಆಹಾರಗಳ ಮೇಲೆ ಗಮನಹರಿಸುತ್ತಾರೆ. ಮೀನಿನಿಂದ ಒಮೆಗಾ-3 ಕೊಬ್ಬಿನಾಮ್ಲಗಳು ಸಿಗುತ್ತವೆ, ಕಡಿಮೆ ಸಂಸ್ಕರಿತ ಆಹಾರ ಸೇವನೆಯಿಂದ ಆರೋಗ್ಯ ಮತ್ತು ತೂಕ ನಿಯಂತ್ರಣಕ್ಕೆ ಸಹಾಯವಾಗುತ್ತದೆ.
ಪಾಶ್ಚಾತ್ಯ ಸಂಸ್ಕೃತಿಗೆ ಹೋಲಿಸಿದರೆ ಜಪಾನ್‌ನಲ್ಲಿ ಆಹಾರದ ಪ್ರಮಾಣ ಕಡಿಮೆ. ಆದರೆ ಜಪಾನಿನ ಆಹಾರದಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ತರಕಾರಿಗಳ ಸಮತೋಲನ ಇರುತ್ತದೆ. ಈ ವಿಧಾನವು ಮಿತವಾದ ಆಹಾರ ಸೇವನೆಯನ್ನು ಉತ್ತೇಜಿಸುತ್ತದೆ ಮತ್ತು ಜನರು ವಿವಿಧ ರುಚಿಗಳನ್ನು ಆನಂದಿಸಲು ಅವಕಾಶ ನೀಡುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಕಡಿಮೆ ಆಹಾರ ಸೇವಿಸುವುದರಿಂದ ಜಪಾನಿಯರು ಕಡಿಮೆ ಕ್ಯಾಲೊರಿಗಳನ್ನು ಸೇವಿಸುತ್ತಾರೆ.
ಜಪಾನಿನ ಆಹಾರ ಪದ್ಧತಿ ತಾಜಾ, ಕಡಿಮೆ ಸಂಸ್ಕರಿತ ಪದಾರ್ಥಗಳನ್ನು ಅವಲಂಬಿಸಿದೆ. ಪ್ಯಾಕ್ ಮಾಡಿದ ಆಹಾರ ಅಥವಾ ಫಾಸ್ಟ್ ಫುಡ್ ಬದಲಿಗೆ ಸ್ಥಳೀಯ ಮತ್ತು ಋತುಮಾನದ ಉತ್ಪನ್ನಗಳಿಂದ ತಾಜಾ ಆಹಾರ ತಯಾರಿಸುತ್ತಾರೆ. ಇದರಿಂದ ಅನಾರೋಗ್ಯಕರ ಕೊಬ್ಬು, ಸಕ್ಕರೆ ಮತ್ತು ಸಂಸ್ಕರಿತ ಆಹಾರಗಳಲ್ಲಿರುವ ರಾಸಾಯನಿಕಗಳ ಸೇವನೆ ಕಡಿಮೆಯಾಗುತ್ತದೆ, ಇದು ಆರೋಗ್ಯ ಮತ್ತು ತೂಕ ನಿಯಂತ್ರಣಕ್ಕೆ ಸಹಾಯಕ.
ಜಪಾನ್‌ನಲ್ಲಿ ಆಹಾರ ಸೇವನೆ ಅವಸರದ ಕೆಲಸ ಅಲ್ಲ. ನಿಧಾನವಾಗಿ ತಿನ್ನುವ ಪದ್ಧತಿ ಅವರದು. ಹೊಟ್ಟೆ ತುಂಬಿದಾಗ ದೇಹ ಸೂಚನೆ ಕೊಡಲು ಸಮಯ ಸಿಗುತ್ತದೆ. ಆಹಾರವನ್ನು ಆನಂದಿಸಿ ತಿನ್ನುವುದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ, ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಸುಲಭವಾಗಿಸುತ್ತದೆ.
ಜಪಾನ್‌ನಲ್ಲಿ ದೈಹಿಕ ಚಟುವಟಿಕೆ ದಿನನಿತ್ಯದ ಭಾಗ. ನಡಿಗೆ, ಸೈಕಲ್ ಸವಾರಿ ಮತ್ತು ಸಾರ್ವಜನಿಕ ಸಾರಿಗೆ ಬಳಕೆ ಸಾಮಾನ್ಯ. ಹೀಗಾಗಿ ಅವರು ಸ್ವಾಭಾವಿಕವಾಗಿಯೇ ದೈಹಿಕವಾಗಿ ಸಕ್ರಿಯರಾಗಿರುತ್ತಾರೆ. ಅನೇಕ ಜಪಾನಿಯರು ಟ್ರೆಕ್ಕಿಂಗ್ ಮತ್ತು ತೋಟಗಾರಿಕೆಯಂತಹ ಹೊರಾಂಗಣ ಚಟುವಟಿಕೆಗಳನ್ನು ಆನಂದಿಸುತ್ತಾರೆ. ನಿಯಮಿತ ವ್ಯಾಯಾಮ ಕ್ಯಾಲೊರಿಗಳನ್ನು ಸುಡಲು ಮತ್ತು ಆರೋಗ್ಯಕರ ಚಯಾಪಚಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಗ್ರೀನ್ ಟೀ ಜಪಾನ್‌ನಲ್ಲಿ ಜನಪ್ರಿಯ ಪಾನೀಯ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ಕ್ಯಾಟೆಚಿನ್‌ಗಳು ಚಯಾಪಚಯವನ್ನು ಹೆಚ್ಚಿಸುತ್ತವೆ ಮತ್ತು ಕೊಬ್ಬನ್ನು ಸುಡಲು ಸಹಾಯ ಮಾಡುತ್ತವೆ. ಸಕ್ಕರೆ ಪಾನೀಯಗಳಿಗಿಂತ ಭಿನ್ನವಾಗಿ, ಗ್ರೀನ್ ಟೀ ಅನಗತ್ಯ ಕ್ಯಾಲೊರಿಗಳಿಲ್ಲದೆ ದೇಹಕ್ಕೆ ನೀರು ಒದಗಿಸುತ್ತದೆ.