ಸೋಯಾಬಿನ್ ತಿನ್ನೋದ್ರಿಂದ ನಪುಂಸಕರಾಗ್ತಾರ ಗಂಡಸರು…? ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?
ಪುರುಷರಲ್ಲಿ ನಪುಂಸಕತ್ವಕ್ಕೆ ಅನೇಕ ಕಾರಣಗಳಿರಬಹುದು. ಆದರೆ ಸೋಯಾಬೀನ್ ಇದಕ್ಕೆ ಕಾರಣ ಎನ್ನುವ ಸುದ್ದಿ ಕೇಳಿದಾಗ ಒಂದಿಷ್ಟು ಅನುಮಾನಗಳು ಬರುತ್ತವೆ. ಯೂಟ್ಯೂಬ್ ವೀಡಿಯೊವೊಂದು ಇದೇ ರೀತಿಯ ಹೇಳಿಕೆ ನೀಡಿದ್ದು, ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ನಪುಂಸಕತ್ವ (infertility) ಅನ್ನೋದು ಯಾವುದೇ ಮನುಷ್ಯನಿಗೆ ಬಹು ದೊಡ್ಡ ಶಾಖ್ ಆಹಬಹುದು. ಈ ಸಮಸ್ಯೆಯನ್ನು ಹೆಚ್ಚಾಗಿ ಜನ ನಿರ್ಲಕ್ಷಿಸುತ್ತಾರೆ. ಈ ಸಮಸ್ಯೆಗೆ ಮುಖ್ಯ ಕಾರಣ ನಾವು ಸೇವಿಸುವ ಆಹಾರವಾಗಿದೆ. ಅದರ ಬಗ್ಗೆ ಯೋಚಿಸುವುದು ಅಗತ್ಯವಾಗುತ್ತದೆ. ಇತ್ತೀಚೆಗೆ ಸೋಯಾಬೀನ್ ಸೇವಿಸೋದರಿಂದ ನಪುಂಸಕತ್ವ ಉಂಟಾಗಬಹುದು ಎಂಬ ವಿಡೀಯೋ ವೈರಲ್ ಆಗ್ತಿದೆ. ಇದು ಎಷ್ಟು ನಿಜ ನೋಡೋಣ.
ಯೂಟ್ಯೂಬ್ ವೀಡಿಯೊದಲ್ಲಿ, ಪುರುಷರಿಗೆ ಸೋಯಾಬೀನ್ ತಿನ್ನದಂತೆ ಸೂಚಿಸಲಾಗಿದೆ. ಸೋಯಾಬೀನ್ ಮಹಿಳೆಯರಲ್ಲಿ ಕಂಡುಬರುವ ಈಸ್ಟ್ರೊಜೆನ್ ಅನ್ನು ಹೊಂದಿರುತ್ತದೆ ಎಂದು ಅದು ಹೇಳುತ್ತದೆ. ಹಾಗಾಗಿ ಪುರುಷರು ಸೋಯಾವನ್ನು ಅತಿಯಾಗಿ ಸೇವಿಸಿದರೆ, ಅವರ ದೇಹದಲ್ಲಿರುವ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟವು ಕಡಿಮೆಯಾಗುತ್ತದೆ ಅನ್ನೋದನ್ನ ಆ ವಿಡೀಯೋ ತಿಳಿಸಿದೆ.
ಆಯಾಸ ಮತ್ತು ಖಿನ್ನತೆ
ವೀಡಿಯೊದ ಪ್ರಕಾರ, ಟೆಸ್ಟೋಸ್ಟೆರಾನ್ ಹಾರ್ಮೋನ್ (testesteron hormones) ಮಟ್ಟವು ಕಡಿಮೆಯಾದರೆ, ಅದು ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇದರೊಂದಿಗೆ ನೀವು ಆಯಾಸ ಮತ್ತು ಖಿನ್ನತೆಯನ್ನು ಸಹ ಅನುಭವಿಸುತ್ತೀರಿ. ನಂತರ ಅದಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳು ಕೂಡ ಬರಬಹುದು.
ಸೋಯಾ ತಿನ್ನೋದರಿಂದ ಯಾವುದೇ ಸಮಸ್ಯೆ ಇಲ್ಲ
ತಜ್ಞರು ಹೇಳುವಂತೆ ಸೋಯಾಬೀನ್ಗಳು ಫೈಟೊ ಈಸ್ಟ್ರೋಜೆನ್ಗಳನ್ನು ಹೊಂದಿರುತ್ತವೆ. ಆದರೆ ಅವು ಬಹಳ ಕಡಿಮೆ ಪ್ರಮಾಣದಲ್ಲಿರುತ್ತವೆ. ಆದ್ದರಿಂದ, ಅವು ಪುರುಷರ ಫಲವತ್ತತೆಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಸೋಯಾ ತಿನ್ನುವುದು ನಪುಂಸಕತೆಗೆ ಕಾರಣವಾಗುತ್ತದೆ ಎಂಬ ಸಿದ್ಧಾಂತವು ಸಂಪೂರ್ಣವಾಗಿ ಆಧಾರರಹಿತವಾಗಿದೆ. ಆದ್ದರಿಂದ, ಸೋಯಾ ತಿನ್ನುವಾಗ ಭಯ ಪಟ್ಟುಕೊಳ್ಳೋದೇ ಬೇಡ. ಪ್ರೋಟೀನ್ ನ ಅತ್ಯುತ್ತಮ ಮೂಲವಾಗಿರುವ ಸೋಯಾಬೀನ್ ಅನ್ನು ಆಹಾರದಲ್ಲಿ ಸೇರಿಸೋದು ಉತ್ತಮ ಅಂದಿದ್ದಾರೆ ವೈದ್ಯರು.
ಲೈಂಗಿಕ ಸಮಸ್ಯೆ ಇದ್ದರೆ
ಪುರುಷರಿಗೆ ಈಗಾಗಲೇ ಲೈಂಗಿಕ ಸಮಸ್ಯೆಗಳನ್ನು ಹೊಂದಿದ್ದರೆ, ಅಂತ ವ್ಯಕ್ತಿಗಳು ಸೋಯಾ ಸೇವನೆಯ ಬಗ್ಗೆ ಗಮನ ಹರಿಸಬೇಕು. ಏಕೆಂದರೆ ಈಗಾಗಲೇ ಸಮಸ್ಯೆಯನ್ನು ಹೊಂದಿದ್ದರೆ ಅದರಿಂದ ನಿಮ್ಮ ಸಮಸ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ವೈದ್ಯರೊಂದಿಗಿನ ಸಂಭಾಷಣೆಯ ಆಧಾರದ ಮೇಲೆ, ವಿಜಿಲೆನ್ಸ್ ಫ್ಯಾಕ್ಟ್ ಚೆಕ್ ತಂಡವು ಸೋಯಾ ತಿನ್ನೋದರಿಂದ ನಪುಂಸಕತೆ ಉಂಟಾಗುತ್ತದೆ ಎಂದು ಹೇಳುವ ಹೇಳಿಕೆಯನ್ನು ಮಿಥ್ಯೆ ಎಂದು ಪರಿಗಣಿಸಿದೆ. ಹಾಗಾಗಿ ಇನ್ನು ಮುಂದೆ ಆ ಬಗ್ಗೆ ಚಿಂತೆ ಬಿಟ್ಟು ಸೋಯಾ ತಿನ್ನಿ.