ರೈಸ್ ಟೀ ಎಂದರೇನು ಗೊತ್ತಾ? ಇದ್ರಿಂದ ಎಷ್ಟೊಂದು ಪ್ರಯೋಜನಗಳಿವೆ...
ಅಕ್ಕಿ ಚಹಾವು ಉತ್ತಮ ಆರೋಗ್ಯಕರ ಪಾನೀಯ. ಇದನ್ನು ಕೆಂಪು ಅಕ್ಕಿಯಿಂದ ತಯಾರಿಸಲಾಗುತ್ತದೆ. ಮೇಘಾಲಯದಲ್ಲಿ ಇದನ್ನು ಚಾ-ಖೂ ಎಂದು ಕರೆಯಲಾಗುತ್ತದೆ, ಅಲ್ಲಿ ಚಾ ಅಕ್ಷರ ಚಹಾವನ್ನು ಸೂಚಿಸುತ್ತದೆ ಮತ್ತು ಸ್ಥಳೀಯ ಭಾಷೆಯಲ್ಲಿ ಖೂ ಎಂದರೆ ಅಕ್ಕಿಯಾಗಿದೆ. ಜಪಾನ್‌ನಲ್ಲಿ, ಈ ಚಹಾವನ್ನು ಕಂದು ಅಕ್ಕಿಯಿಂದ ತಯಾರಿಸಲಾಗುತ್ತದೆ ಮತ್ತು ಇದನ್ನು 'ಗೆನ್ಮೈಚಾ' ಎಂದು ಕರೆಯಲಾಗುತ್ತದೆ, ಇದು ಹಸಿರು ಚಹಾ ಮತ್ತು ಹುರಿದ ಕಂದು ಅಕ್ಕಿಯ ವಿಶೇಷ ಮಿಶ್ರಣವಾಗಿದೆ.
ಅಕ್ಕಿ ಚಹಾದ ಇತಿಹಾಸ
ಚಹಾ ತಜ್ಞರ ಪ್ರಕಾರ, ಬ್ರಿಟಿಷರು ಚಹಾವನ್ನು ಪರಿಚಯಿಸುವವರೆಗೂ ಶಿಲ್ಲಾಂಗ್‌ನಿಂದ ದಕ್ಷಿಣಕ್ಕೆ 94 ಕಿ.ಮೀ ದೂರದಲ್ಲಿರುವ ಲಾಸ್ಕೀನ್ ಬ್ಲಾಕ್‌ನ ಹಳ್ಳಿಗಳ ಗುಂಪಿನಲ್ಲಿ ಚಾ-ಕೂ ಪ್ರಚಲಿತದಲ್ಲಿತ್ತು. ಮತ್ತು ನಿಧಾನವಾಗಿ, ಜನರ ವಲಸೆಯು ರೈಸ್ ಟೀಯ ಪಾಕವಿಧಾನವನ್ನು ನಗರ ಸ್ಥಳಗಳಿಗೆ ತೆಗೆದುಕೊಂಡು ಹೋದರು, ಅಲ್ಲಿ ಅದು ಜನಪ್ರಿಯವಾಯಿತು. ಈ ತಾಜಾ ಪಾನೀಯವು ಭಾಗಶಃ ಚಹಾದಂತೆ ಮತ್ತು ಭಾಗಶಃ ಬ್ಲ್ಯಾಕ್ ಕಾಫಿಯಂತೆ ರುಚಿಯಾಗಿರುತ್ತದೆ.
ರೈಸ್ ಟೀ ತಯಾರಿಸುವುದು ಹೇಗೆ?
4 ಕಪ್ ಅಕ್ಕಿ ಚಹಾಕ್ಕಾಗಿ, 1 ಚಮಚ ಅಂಟುವ ಕಪ್ಪು ಅಕ್ಕಿ ಅಥವಾ ಅಂಟುವ ಕೆಂಪು ಅಕ್ಕಿಯನ್ನು ಕಡಿಮೆ ಉರಿಯಲ್ಲಿ 2-3 ನಿಮಿಷಗಳ ಕಾಲ ಡ್ರೈ ರೋಸ್ಟ್ ಮಾಡಬೇಕು. ನಂತರ, ಅದನ್ನು 3-5 ನಿಮಿಷಗಳ ಕಾಲ ನೀರಿನಿಂದ ಕುದಿಸಿ, ಸೋಸಿ ಮತ್ತು ಬಿಸಿಯಾಗಿ ಸರ್ವ್ ಮಾಡಿ.
ಜಪಾನ್ ಮತ್ತು ಕೊರಿಯಾದಲ್ಲಿ ಅಕ್ಕಿ ಚಹಾವನ್ನು ಸಾವಯವ ಹಸಿರು ಚಹಾದೊಂದಿಗೆ ಬೆರೆಸುತ್ತಾರೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ನಿರಾಳವಾಗಿಡಲು ಆರೋಗ್ಯಕರ ಪಾನೀಯವಾಗಿ ಆನಂದಿಸುತ್ತಾರೆ. ಅದರಲ್ಲಿಯೂ ಅಕ್ಕಿಯನ್ನು ಹೆಚ್ಚು ಬಳಸುವವರಿಗೆ ಈ ಚಹಾ ಮತ್ತಷ್ಟು ಮುದ ನೀಡುತ್ತದೆ.
ಸಕ್ಕರೆ ಅಂಶವಿಲ್ಲ
ಸಾಂಪ್ರದಾಯಿಕವಾಗಿ, ಅಕ್ಕಿ ಚಹಾದಲ್ಲಿ ಸಕ್ಕರೆ ಇಲ್ಲ, ಆದಾಗ್ಯೂ, ಪಾನೀಯಕ್ಕೆ ಹೆಚ್ಚುವರಿ ಕಿಕ್ ಸೇರಿಸಲು ಕುದಿಯುವ ಪ್ರಕ್ರಿಯೆಯಲ್ಲಿ ಸಕ್ಕರೆಯನ್ನು ಸೇರಿಸುವ ಜನರಿದ್ದಾರೆ. ಸಕ್ಕರೆ ಇಲ್ಲದ ಟೀ ಕುಡಿದರೆ ಸಹಜವಾಗಿಯೇ ಆರೋಗ್ಯಕ್ಕೆ ಒಳಿತು.
ಈ ಚಹಾವನ್ನು ಸಿಹಿ ತಿಂಡಿ ಅಥವಾ ಊಟದ ನಂತರದ ಪಾನೀಯವಾಗಿ ಬಡಿಸಬಹುದು, ಏಕೆಂದರೆ ಇದು ರಿಚ್ ಫುಡ್ ನಂತರ ಜನರಿಗೆ ಹೊಟ್ಟೆ ಭಾರ ಇಳಿಸಲು ಸಹಾಯ ಮಾಡುತ್ತದೆ.
ಅಕ್ಕಿ ಚಹಾದ ಪ್ರಯೋಜನಗಳು
ಈ ಚಹಾದಲ್ಲಿ ಫ್ಲೇವನಾಯ್ಡ್ ಗಳು, ಉತ್ಕರ್ಷಣ ನಿರೋಧಕಗಳು, ಖನಿಜಗಳು ಮತ್ತು ವಿಟಮಿನ್ ಗಳು ಸಮೃದ್ಧವಾಗಿವೆ. ಆರೋಗ್ಯ ತಜ್ಞರ ಪ್ರಕಾರ, ಗ್ರೀನ್ ಟೀ ಸೇರಿಸುವುದರಿಂದ ಅದು ಆರೋಗ್ಯಕರವಾಗಿರುತ್ತದೆ.
ಓಹಿಯೋದ ಕ್ಲೀವ್ ಲ್ಯಾಂಡ್‌ನಲ್ಲಿರುವ ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನಗಳ ಪ್ರಕಾರ, ಹಸಿರು ಚಹಾದಲ್ಲಿರುವ ಪಾಲಿಫಿನಾಲ್‌ಗಳು ಕ್ಯಾನ್ಸರ್ ಜೀವಕೋಶಗಳ ಸಂತಾನೋತ್ಪತ್ತಿಯನ್ನು ನಿಷೇಧಿಸುತ್ತವೆ. ಅಂದರೆ ಕ್ಯಾನ್ಸರ್ ಅಪಾಯವನ್ನು ಕುಗ್ಗಿಸುವುದರಲ್ಲಿ ಅನುಮಾನವೇ ಇಲ್ಲ.
ಇದು ಥೈರಾಯ್ಡ್ ಕಾರ್ಯವನ್ನು ನಿರ್ವಹಿಸಲು ಸಹಾಯ ಮಾಡುವ ಮತ್ತು ಹಾರ್ಮೋನುಗಳು ಮತ್ತು ಚಯಾಪಚಯವನ್ನು ನಿಯಂತ್ರಿಸುವ ಪ್ರಮುಖ ಖನಿಜವಾದ ಸೆಲೆನಿಯಂನಿಂದ ಸಮೃದ್ಧವಾಗಿದೆ. ಹೆಣ್ಣುಮಕ್ಕಳು ನಿಯಮಿತವಾಗಿ ಸೇವಿಸಿದೆರ ಥೈರಾಯ್ಡ್ ಸಮಸ್ಯೆಯನ್ನು ಹೋಗಿಸಬಹುದು.
ಅಕ್ಕಿ ಚರ್ಮಕ್ಕೆ ಒಳ್ಳೆಯದು. ಇದು ಚರ್ಮವನ್ನು ಮೃದುವಾಗಿರಿಸುತ್ತದೆ ಮತ್ತು ರಿಂಕಲ್ ತಡೆಯಲು ಸಹಾಯ ಮಾಡುತ್ತದೆ. ಆ್ಯಂಟಿ ಏಜಿಂಗ್‌ಗೆ ಏನೇನೋ ಕ್ರೀಮ್ ಬಳಸುವ ಬದಲು ಈ ಪಾನೀಯವನ್ನು ದಿನಾಲೂ ಕುಡಿದರೆ ವಯಸ್ಸೇ ಆಗೋಲ್ಲ.
ಸಾಂಪ್ರದಾಯಿಕ ರೀತಿಯಲ್ಲಿ ಮಾಡಿದಾಗ, ಈ ಚಹಾವು ಶೂನ್ಯ ಕೆಫೀನ್ ಅಂಶವನ್ನು ಹೊಂದಿದೆ, ಆದ್ದರಿಂದ ಬೇಕಾದಷ್ಟು ಕಪ್‌ಗಳನ್ನು ಕುಡಿಯಬಹುದು. ನೈಸರ್ಗಿಕ ಅಂಶವೇ ಪ್ರಧಾನವಾದ ಈ ಟೀಯ ಸಹಜವಾಗಿ ದೇಹದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ.