ಹಲ್ಲಿ ಕಾಟ ಸಾಕಾಗಿ ಹೋಗಿದ್ಯಾ? ಹಾಗಿದ್ರೆ ಈ ಗಿಡ ಬೆಳೆಸಿ ಸಾಕು ದೂರ ಓಡುತ್ತೆ
ಪ್ರತಿ ಮನೆಯಲ್ಲೂ ಹಲ್ಲಿಯ ಸಮಸ್ಯೆ ತುಂಬಾ ಹೆಚ್ಚಾಗಿದೆ, ಜನರು ಅದರ ಭಯವನ್ನು ತೊಡೆದುಹಾಕಲು ಏನೇನೋ ಉಪಾಯ ಮಾಡ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ನಾವು ನಿಮಗೆ ಬಹಳ ದೊಡ್ಡ ಟ್ರಿಕ್ ಹೇಳಲಿದ್ದೇವೆ, ಕೆಲವೊಂದು ಗಿಡಗಳನ್ನು ನೆಡುವ ಮೂಲಕ ನೀವು ಹಲ್ಲಿಯ ಸಮಸ್ಯೆ ನಿವಾರಿಸಬಹುದು.

ಮನೆಯನ್ನು ಎಷ್ಟು ಸ್ವಚ್ಛಗೊಳಿಸಿದರೂ, ಹಲ್ಲಿ (Lizard) ತನ್ನ ಯಾವುದೋ ಮೂಲೆಯಲ್ಲಿ ತನ್ನದೊಂದು ಬಿಡಾರ ಮಾಡಿಯೇ ಮಾಡುತ್ತೆ. ಇದನ್ನು ಅಡುಗೆಮನೆ ಮತ್ತು ಸ್ನಾನಗೃಹವನ್ನು ಹೊರತುಪಡಿಸಿ ಬೇರೆ ಯಾವುದೇ ಭಾಗದಲ್ಲಿ ಕಾಣಬಹುದು. ಮನೆಯ ದೊಡ್ಡ ಕೆಲಸವನ್ನು ಕ್ಷಣಾರ್ಧದಲ್ಲಿ ಮಾಡುವ ಮಹಿಳೆಯರು ಈ ಕೀಟಗಳಿಗೆ ತುಂಬಾ ಹೆದರುತ್ತಾರೆ, ಆದ್ದರಿಂದ ಅವುಗಳನ್ನು ಓಡಿಸುವುದು ತುಂಬಾ ಕಷ್ಟ. ಎಲ್ಲಿಯಾದರೂ ಹಲ್ಲಿ ಕಂಡುಬಂದರೆ, ಮನೆಯಲ್ಲಿ ಆರಾಮವಾಗಿ ವಾಸಿಸುವುದು ಕಷ್ಟವಾಗುತ್ತದೆ.
ನೀವು ಸಹ ಹಲ್ಲಿಗಳಿಂದ ತೊಂದರೆಗೀಡಾಗಿದ್ದರೆ, ನಿಮಗಾಗಿ ಪರಿಹಾರ ಇಲ್ಲಿದೆ. ಕೆಲವೊಂದು ಸಸ್ಯಗಳ ಸಹಾಯದಿಂದ ಈ ಸಮಸ್ಯೆಯನ್ನು ಹೇಗೆ ಪರಿಹರಿಸುವುದು ಎಂದು ನಾವು ನಿಮಗೆ ಹೇಳುತ್ತಿದ್ದೇವೆ. ವಾಸ್ತವವಾಗಿ, ಹಲ್ಲಿಯ ವಾಸನೆಯನ್ನು ಇಷ್ಟಪಡದ ಕೆಲವು ಸಸ್ಯಗಳಿವೆ, ಅವುಗಳನ್ನು ಬಳಸಿ ನೀವು ಮನೆಯನ್ನು ಹಸಿರಾಗಿಡಬಹುದು ಮತ್ತು ಹಲ್ಲಿಯ ಭಯವನ್ನು (Lizard at home) ತೊಡೆದುಹಾಕಬಹುದು.
ಪುದೀನಾ (Mint): ಚಟ್ನಿಯ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುವುದರ ಜೊತೆಗೆ, ಪುದೀನಾ ಹಲ್ಲಿಗಳನ್ನು ದೂರವಿರಿಸಲು ಸಹ ಕೆಲಸ ಮಾಡುತ್ತದೆ. ಪುದೀನಾ ಮೆಂಥೋಲ್ ಎಂಬ ರಾಸಾಯನಿಕವನ್ನು ಹೊಂದಿರುತ್ತದೆ, ಇದರಿಂದಾಗಿಯೇ ಪುದೀನಾಕ್ಕೆ ಅದ್ಭುತ ವಾಸನೆ ಇರುತ್ತದೆ. ಹಲ್ಲಿ ಈ ವಾಸನೆಯನ್ನು ಸಹಿಸುವುದಿಲ್ಲ. ಆದ್ದರಿಂದ, ಮನೆಯಲ್ಲಿ ಪುದೀನಾ ಸಸ್ಯವನ್ನು ನೆಡುವ ಮೂಲಕ, ನೀವು ಹಲ್ಲಿಯನ್ನು ಓಡಿಸಬಹುದು.
ನಿಂಬೆ ಹುಲ್ಲು (Lemon Grass): ಹಲ್ಲಿಯನ್ನು ಮನೆಯಿಂದ ಓಡಿಸಲು ನೀವು ನಿಂಬೆ ಹುಲ್ಲಿನ ಸಸ್ಯವನ್ನು ಸಹ ನೆಡಬಹುದು. ಇದು ಹುಳಿ ರುಚಿಯ ಒಂದು ರೀತಿಯ ಹುಲ್ಲು. ಮತ್ತು ಹುಳಿ ವಾಸನೆಯಿಂದಾಗಿ, ಹಲ್ಲಿ ಅದರಿಂದ ದೂರ ಓಡಿಹೋಗುತ್ತದೆ. ಅಲ್ಲದೆ, ನಿಂಬೆ ಹುಲ್ಲು ಸಿಟ್ರೊನಿಲ್ಲಾ ಎಂದು ಕರೆಯಲ್ಪಡುವ ವಿಶೇಷ ರೀತಿಯ ರಾಸಾಯನಿಕವನ್ನು ಹೊಂದಿರುತ್ತದೆ, ಈ ರಾಸಾಯನಿಕವು ಅನೇಕ ಕ್ಲೀನಿಂಗ್ ಮತ್ತು ಕೀಟಾಣು ನಿವಾರಕ ಸ್ಪ್ರೇಗಳಲ್ಲಿಯೂ ಬಳಸಲಾಗುತ್ತದೆ.
ಮಾರಿಗೋಲ್ಡ್ (Marigold): ಹಲ್ಲಿಗಳ ಸಮಸ್ಯೆಯನ್ನು ತೊಡೆದುಹಾಕಲು ಚೆಂಡು ಹೂವಿನ ಸಸ್ಯವನ್ನು ಸಹ ಮನೆಯಲ್ಲಿ ನೆಡಬಹುದು. ಇದರ ಹೂವು ಪೈರೆಥ್ರಿನ್ಗಳು ಮತ್ತು ಟ್ರ್ಯಾಪಿಗಳು ಎಂದು ಕರೆಯಲ್ಪಡುವ ಕೀಟನಾಶಕಗಳನ್ನು ಹೊಂದಿರುತ್ತದೆ. ಅದರ ವಾಸನೆ ಕೂಡ ಹಲ್ಲಿಯನ್ನು ಅನಾರೋಗ್ಯಕ್ಕೆ ದೂಡುತ್ತದೆ. ಹಾಗಾಗಿ ಹಲ್ಲಿ ಈ ಸಸ್ಯದಿಂದ ದೂರವಿರಲು ಇಷ್ಟಪಡುತ್ತದೆ. ಮನೆಯೊಳಗೆ ಈ ಸಸ್ಯ ಇದ್ದರೆ, ಹಲ್ಲಿ ಹೊರಗೆ ಹೋಗೋದು ಖಚಿತ.
ಲ್ಯಾವೆಂಡರ್ (Lavender): ಹಲ್ಲಿಗಳನ್ನು ನಿಮ್ಮ ಮನೆಯಿಂದ ದೂರವಿರಿಸಲು ನೀವು ಲ್ಯಾವೆಂಡರ್ ಸಸ್ಯವನ್ನು ಸಹ ನೆಡಬಹುದು. ಇದು ಲಿನಾಲೂಲ್ ಮತ್ತು ಮೊನೊಟರ್ಪೆನ್ ಗಳಂತಹ ರಾಸಾಯನಿಕ ಸಂಯುಕ್ತಗಳನ್ನು ಹೊಂದಿರುತ್ತದೆ ಮತ್ತು ಇವು ಕೀಟನಾಶಕಗಳಾಗಿವೆ. ಇದರ ವಾಸನೆ ತುಂಬಾ ಸ್ಟ್ರಾಂಗ್ ಆಗಿದೆ, ಹಲ್ಲಿಗೆ ಈ ವಾಸನೆ ಬಂದ ಕೂಡಲೇ ಮನೆಯಿಂದ ಹೊರಹೋಗುವ ಮಾರ್ಗವನ್ನು ಹುಡುಕಲು ಪ್ರಾರಂಭಿಸುತ್ತದೆ.
ರೋಸ್ಮರಿ (Rosemary): ರೋಸ್ಮರಿ ಸಸ್ಯದಿಂದ ಮಾಡಿದಂತಹ ಎಣ್ಣೆ ಕೂದಲಿಗೆ ತುಂಬಾ ಪ್ರಯೋಜನಕಾರಿ ಅನ್ನೋದು ನಿಮಗೆ ಗೊತ್ತಿದೆ. ಜೊತೆಗೆ ಈ ಸಸ್ಯದ ಸುಗಂಧವೇ ಅಮಲೇರಿಸುತ್ತೆ, ಆದರೆ ಹಲ್ಲಿಗಳಿಗೆ ಇವುಗಳ ಪರಿಮಳ ಇಷ್ಟ ಆಗೋದಿಲ್ಲ. ಈ ಪರಿಮಳ ಇದ್ದರೆ, ಹಲ್ಲಿಗಳು ಮನೆಯಲ್ಲಿ ಉಳಿಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಮನೆಯಲ್ಲಿ ರೋಸ್ಮರಿ ಸಸ್ಯವನ್ನು ನೆಡುವ ಮೂಲಕ ನೀವು ಹಲ್ಲಿಗಳನ್ನು ಓಡಿಸಬಹುದು. ನೀವು ಬಯಸಿದರೆ, ಅದರ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ ಮನೆಯಲ್ಲಿ ಸ್ಪ್ರೇ ಮಾಡುವ ಮೂಲಕವೂ ಹಲ್ಲಿಯನ್ನು ಓಡಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.