ಹೃದಯ ಆರೋಗ್ಯಕರವಾಗಿದೆಯೇ ಅಥವಾ ಇಲ್ಲವೇ? ಮನೆಯಿಂದಲೇ ಈ ರೀತಿ ಪರೀಕ್ಷಿಸಿ

First Published May 14, 2021, 5:52 PM IST

ಈ ಸಮಯದಲ್ಲಿ ವಿಶ್ವದಾದ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವೆಂದರೆ ಕೊರೋನಾ ವೈರಸ್. ಆದರೆ ನಾವು ಇತರ ರೋಗಗಳನ್ನು ನಿರ್ಲಕ್ಷಿಸುವಂತಿಲ್ಲ. ವಿಶೇಷವಾಗಿ ಹೃದ್ರೋಗದಂತಹ ಕಾಯಿಲೆ, ಇದರಿಂದಾಗಿ ಪ್ರತಿವರ್ಷ ವಿಶ್ವದಾದ್ಯಂತ ಹೆಚ್ಚಿನ ಜನರು ಸಾಯುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ-ಡಬ್ಲ್ಯುಎಚ್ಒ ಅಂಕಿ ಅಂಶಗಳ ಪ್ರಕಾರ, ಪ್ರತಿವರ್ಷ ಸುಮಾರು 18 ಮಿಲಿಯನ್ ಜನರು ಹೃದ್ರೋಗದಿಂದ ಸಾಯುತ್ತಾರೆ.