ಊಟದ ನಂತರ ನಿಮಗೂ ಹುಳಿ ತೇಗು ಬರುತ್ತಾ? ಹಾಗಿದ್ರೆ ಈ ಮನೆಮದ್ದು ಟ್ರೈ ಮಾಡಿ
ಕೆಲವೊಮ್ಮೆ ಊಟದ ನಂತರ ಹುಳಿ ತೇಗು ಬರುತ್ತೆ ಅಲ್ವಾ? ಇದಕ್ಕೆ ನಾವು ಊಟದ ನಂತರ ಅದನ್ನು ಸರಿಯಾಗಿ ಜೀರ್ಣವಾಗಲು ಬಿಡದಿರೋದೆ ಕಾರಣ. ಒಂದು ವೇಳೆ ನಿಮಗೂ ಹುಳಿ ತೇಗು ಸಮಸ್ಯೆ ಕಂಡು ಬಂದರೆ ನೀವು ಏನು ಮಾಡಬಹುದು ಗೊತ್ತಾ?
ಊಟದ ನಂತರ, ನಮಗೆಲ್ಲರಿಗೂ ಸಾಮಾನ್ಯವಾಗಿ ತೇಗು ಬರುತ್ತೆ. ಆದರೆ ಅನೇಕ ಬಾರಿ ಆಹಾರವನ್ನು ಸೇವಿಸಿದ ನಂತರ ಹುಳಿ ತೇಗು ಬರಲು ಪ್ರಾರಂಭಿಸುತ್ತೇವೆ. ಇದರಿಂದ ನಿಮಗೆ ಖಂಡಿತವಾಗಿಯೂ ಕೆಟ್ಟ ಅನುಭವ ಆಗುತ್ತೆ. ಯಾಕೆ ಈ ಹುಳಿ ತೇಗು ಬರು (acidic burp)ತ್ತೆ? ಅನ್ನೋದು ನಿಮಗೆ ಗೊತ್ತಾ? ಅದಕ್ಕೆ ನಾವು ಹೆಚ್ಚು ಹೆಚ್ಚು ತಿನ್ನುವ ಆಹಾರವೇ ಕಾರಣ.
ವಾಸ್ತವವಾಗಿ, ಅನೇಕ ಬಾರಿ ನಾವು ಹಸಿವಿಗಿಂತ ಹೆಚ್ಚು ಆಹಾರ ತಿನ್ನುತ್ತೇವೆ, ಹೆಚ್ಚು ಎಣ್ಣೆಯುಕ್ತ ಮಸಾಲೆಯುಕ್ತ ಆಹಾರವನ್ನು ತಿನ್ನುತ್ತೇವೆ ಅಥವಾ ಆಹಾರವನ್ನು ಸೇವಿಸಿದ ನಂತರ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುತ್ತೇವೆ, ಇದರಿಂದಾಗಿ ಅಜೀರ್ಣ ಉಂಟಾಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಆಸಿಡ್ ಉತ್ಪತ್ತಿಯಾಗುತ್ತದೆ. ಈ ಆಮ್ಲೀಯ ರಸವು ಮತ್ತೆ ಮತ್ತೆ ಬಾಯಿಗೆ ಬರುತ್ತದೆ. ಇದು ಹುಳಿ ತೇಗು. ಈ ಸಮಸ್ಯೆಯನ್ನು ತೊಡೆದುಹಾಕಲು ನೀವು ಕೆಲವು ಮನೆಮದ್ದುಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಅಡುಗೆಮನೆಯಲ್ಲಿರುವ ಕೆಲವು ವಸ್ತುಗಳ (home remedies) ಸಹಾಯದಿಂದ, ನೀವು ಹುಳಿ ತೇಗು ಸಮಸ್ಯೆ ನಿವಾರಿಸಬಹುದು.
ಸೋಂಪು ಕಾಳುಗಳು (Fennel Seeds): ಹುಳಿ ತೇಗು ಸಮಸ್ಯೆ ತೊಡೆದು ಹಾಕಲು ನೀವು ಸೋಂಪು ಕಾಳಿನ ನೀರನ್ನು ಕುಡಿಯಬಹುದು. ಇದರಲ್ಲಿ ಸಾಕಷ್ಟು ಫೈಬರ್ ಇರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. 1 ಲೋಟ ನೀರಿನಲ್ಲಿ 1 ಟೀಸ್ಪೂನ್ ಸೋಂಪು ಕಾಳು ಹಾಕಿ ಕುದಿಸಿ. ಅದು ತಣ್ಣಗಾದ ನಂತರ, ಫಿಲ್ಟರ್ ಮಾಡಿ ಅದನ್ನು ಸೇವಿಸಿ.
ನಿಂಬೆ ನೀರು ಮತ್ತು ಬ್ಲಾಕ್ ಸಾಲ್ಟ್: ಹುಳಿ ತೇಗನ್ನು ತೆಗೆದುಹಾಕಲು, ನಿಂಬೆ ನೀರಿನೊಂದಿಗೆ ಬೆರೆಸಿದ ಕಪ್ಪು ಉಪ್ಪನ್ನು ಕುಡಿದರೆ, ಬೇಗನೆ ಪರಿಹಾರ ಪಡೆಯುತ್ತೀರಿ ಮತ್ತು ಆರಾಮವಾಗಿರುತ್ತೀರಿ. ನಿಂಬೆಯ ಅಸಿಟಿಕ್ ಗುಣಲಕ್ಷಣಗಳು ಹುಳಿ ತೇಗು ಸಮಸ್ಯೆಯನ್ನು ತೆಗೆದುಹಾಕುತ್ತವೆ. ನಿಂಬೆ ನೀರು ಹೊಟ್ಟೆಯ ಪಿಎಚ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ಬ್ಲ್ಯಾಕ್ ಸಾಲ್ಟ್ ಮತ್ತು ಹುರಿದ ಜೀರಿಗೆ: ಕಪ್ಪು ಉಪ್ಪು ಮತ್ತು ಹುರಿದ ಜೀರಿಗೆ ಪುಡಿ ಕೂಡ ಹುಳಿ ತೇಗನ್ನು ದೂರ ಮಾಡಬಹುದು. ಜೀರಿಗೆ ಮತ್ತು ಉಪ್ಪು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಹೊಟ್ಟೆಯ ಚಲನೆಯನ್ನು ಸರಿಪಡಿಸುತ್ತದೆ. ಒಂದು ಲೋಟ ನೀರಿಗೆ ಅರ್ಧ ಟೀಸ್ಪೂನ್ ಹುರಿದ ಜೀರಿಗೆ ಪುಡಿ ಮತ್ತು ಅರ್ಧ ಟೀಸ್ಪೂನ್ ಕಪ್ಪು ಉಪ್ಪನ್ನು ಸೇರಿಸಿ ಕುಡಿಯಿರಿ.
ಹಿಂಗು (Asafoetida): ಹಿಂಗು ಜೀರ್ಣಕ್ರಿಯೆಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ, ಆದ್ದರಿಂದ ಇದು ಹುಳಿ ತೇಗಿನ ಸಮಸ್ಯೆ ದೂರ ಮಾಡಲು ಸಹ ಪ್ರಯೋಜನಕಾರಿ ಎನ್ನಬಹುದು. ನೀವು ಉಗುರುಬೆಚ್ಚಗಿನ ನೀರಿನೊಂದಿಗೆ ಹಿಂಗನ್ನು ಬೆರೆಸಿ ಕುಡಿಯಬಹುದು. ಒಂದು ಚಿಟಿಕೆ ಹಿಂಗು ತಿಂದ ನಂತರ ಬೆಚ್ಚಗಿನ ನೀರನ್ನು ಕುಡಿಯಿರಿ. ಇದು ಬಹಳ ಬೇಗನೆ ಪರಿಹಾರ ನೀಡುತ್ತದೆ. ಇದಲ್ಲದೇ ಹಿಂಗನ್ನು ನೀರಿನಲ್ಲಿ ಕುದಿಸಿ ಸಹ ಕುಡಿಯಬಹುದು.
ಓಂ ಕಾಳು (Ajwain): ಹುಳಿ ತೇಗಿನ ವಿಷಯಕ್ಕೆ ಬಂದಾಗ ನೀವು ಓಂಕಾಳನ್ನು ಅಥವಾ ಅಜ್ವೈನ್ ಸಹ ತಿನ್ನಬಹುದು. ಇದು ಜೀರ್ಣಕಾರಿ ರಸವನ್ನು ಉತ್ತೇಜಿಸುತ್ತದೆ, ಅಲ್ಲದೇ ಇದು ಆಹಾರವನ್ನು ಸರಿಯಾಗಿ ಜೀರ್ಣವಾಗುವಂತೆ ಮಾಡುತ್ತೆ ಮತ್ತು ಹುಳಿ ತೇಗಿನಿಂದ ನಿಮಗೆ ಪರಿಹಾರ ನೀಡುತ್ತದೆ.