ಕೆಲವರ ಶೂಸ್ ಸ್ಮೆಲ್ ಸಹಿಸೋಕೇ ಆಗೋಲ್ಲ, ಅದಕ್ಕಿಲ್ಲಿದೆ ಮದ್ದು
First Published Dec 1, 2020, 1:08 PM IST
ಕೆಲವರಿಗೆ ವಿಪರೀತ ಬೆವರುವ ಸಮಸ್ಯೆ ಇರುತ್ತದೆ. ಅದೆಷ್ಟು ಬೆವರುತ್ತದೆ ಎಂದರೆ ಕಾಲಿನ ಅಡಿ ಕೂಡ ಬೆವರಿ ಮತ್ತೆ ವಾಸನೆ ಬರಲು ಆರಂಭವಾಗುತ್ತದೆ. ಇಂತಹ ಸಮಸ್ಯೆ ನಿಮಗೂ ಸಹ ಉಂಟಾಗಿ ನೀವು ತೀವ್ರ ಮುಜುಗರಕ್ಕೆ ಒಳಗಾಗಿದ್ದೀರಾ? ಹಾಗಿದ್ರೆ ನೀವು ಟ್ರೈ ಮಾಡಲೇಬೇಕಾದ ಕೆಲವೊಂದಿಷ್ಟು ಟ್ರಿಕ್ಸ್ ಗಳು ಇಲ್ಲಿವೆ. ಇವುಗಳನ್ನು ನೀವು ಪ್ರತಿದಿನ ಪಾಲಿಸುವುದರಿಂದ ಬೆವರಿನ ಮತ್ತು ಪಾದದ ವಾಸನೆ ಸಮಸ್ಯೆ ನಿವಾರಣೆಯಾಗಿ ಸಮಸ್ಯೆ ದೂರವಾಗುತ್ತದೆ.

ಬೆವರು ವಾಸನೆ ಸಮಸ್ಯೆ ನಿವಾರಣೆಗೆ ನೀವು ಏನೆಲ್ಲಾ ಮಾಡಬೇಕು ನೋಡಿ...
ಪ್ರತಿ ನಿತ್ಯ ಕೈ ಮತ್ತು ಕಾಲುಗಳನ್ನು ಸಾಬೂನು ಹಚ್ಚಿ ಬಿಸಿ ನೀರಿನಿಂದ ತೊಳೆಯಬೇಕು. ನಂತರ ಒಣಗಿದ ಬಟ್ಟೆಯಿಂದ ಚೆನ್ನಾಗಿ ಡ್ರೈ ಮಾಡಿ.

ಸಾಕ್ಸ್ ಧರಿಸುವವರು ದಿನ ನಿತ್ಯವೂ ತೊಳೆದ ಸಾಕ್ಸ್ ಗಳನ್ನೇ ಉಪಯೋಗಿಸಬೇಕು. ಬೆವರಿನಿಂದ ಉಂಟಾಗುವ ಕೊಳೆ ಚರ್ಮಕ್ಕೆ ಅಂಟಿಕೊಳ್ಳುವುದರಿಂದ ಕೊಳೆಯಾದ ಸಾಕ್ಸ್ ಹಾಕಿಕೊಳ್ಳಬಾರದು. ಇದರಿಂದ ಅಲರ್ಜಿ ಉಂಟಾಗುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?