MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಎರಡು ವರ್ಷದ ಮಗುವಿಗೆ ಪ್ರತಿದಿನ ಎಷ್ಟು ಹಾಲು ನೀಡಬೇಕು?

ಎರಡು ವರ್ಷದ ಮಗುವಿಗೆ ಪ್ರತಿದಿನ ಎಷ್ಟು ಹಾಲು ನೀಡಬೇಕು?

ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ, ಕೊಬ್ಬು ಮತ್ತು ಪ್ರೋಟೀನ್ ಸಮೃದ್ಧವಾಗಿರೋದರಿಂದ ಅದನ್ನು ಸಾಮಾನ್ಯವಾಗಿ ಸಂಪೂರ್ಣ ಆಹಾರವಾಗಿ ನೋಡಲಾಗುತ್ತೆ. ಬಹುತೇಕ ಪ್ರತಿಯೊಂದು ಮನೆಯಲ್ಲೂ, ಅಂಬೆಗಾಲಿಡುವ ಮಕ್ಕಳಿಗೆ ಬೆಳಿಗ್ಗೆ ಎದ್ದ ತಕ್ಷಣ ಉಪಾಹಾರದಲ್ಲಿ ಮೊದಲು ಹಾಲನ್ನು ನೀಡಲಾಗುತ್ತೆ. ಬೆಳೆಯುತ್ತಿರುವ ಮಕ್ಕಳಿಗೆ ಹಾಲು ಬಹಳ ಮುಖ್ಯ ಮತ್ತು ಇದು ಮಕ್ಕಳ ಮೂಳೆಗಳಿಗೆ ಬಲ ನೀಡುತ್ತೆ. ಮಕ್ಕಳ ಬೆಳವಣಿಗೆಗೆ ಹಾಲು ಅತ್ಯಗತ್ಯ ಎಂದು ಪೋಷಕರಿಗೂ ತಿಳಿದಿದೆ, ಆದರೆ ಅಂಬೆಗಾಲಿಡುವ ಮಕ್ಕಳಿಗೆ ಎಷ್ಟು ಹಾಲು ಕುಡಿಸಬೇಕೆಂದು ಹೆಚ್ಚಿನವರಿಗೆ ತಿಳಿದಿಲ್ಲ.

2 Min read
Author : Suvarna News
Published : Aug 09 2022, 04:28 PM IST
Share this Photo Gallery
  • FB
  • TW
  • Linkdin
  • Whatsapp
17

ಹಾಲಿನಲ್ಲಿರುವ ಪೋಷಕಾಂಶಗಳು ಅಂಬೆಗಾಲಿಡುವ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಮತ್ತು ದೈಹಿಕ ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತೆ. ಆದರೆ, ಲೀನ್ ಮಾಂಸ, ಮೀನು ಮತ್ತು ಟೋಫುಗಳಂತಹ ಹಾಲಿನಂತಹ ಅದೇ ಪೋಷಕಾಂಶಗಳನ್ನು ಹೊಂದಿರುವ ಇತರ ಅನೇಕ ಆಹಾರಗಳಿವೆ.

27

ಸಾಮಾನ್ಯವಾಗಿ, ಮಗು ಹಾಲು ಕುಡಿಯದಿದ್ದರೆ, ಸಮತೋಲಿತ ಆಹಾರದ (balanced food) ಸಹಾಯದಿಂದ, ಮಗುವಿಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡಬಹುದು. ಆದರೆ, ಮಗುವಿನ ಆಹಾರದ ಲಿಸ್ಟ್ ನಿಂದ ಹಾಲನ್ನು ತೆಗೆದುಹಾಕುವ ಮೊದಲು ಪೋಷಕರು ವೈದ್ಯರನ್ನು ಕೇಳಬೇಕು.

37
ಅಂಬೆಗಾಲಿಡುವ ಮಕ್ಕಳು ಎಷ್ಟು ಹಾಲು ಕುಡಿಯಬೇಕು?

ಅಂಬೆಗಾಲಿಡುವ ಮಕ್ಕಳು ಎಷ್ಟು ಹಾಲು ಕುಡಿಯಬೇಕು?

ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಾರ, 12 ತಿಂಗಳ ಆರೋಗ್ಯಕರ ಮಗು ಹಸುವಿನ ಹಾಲನ್ನು ಎದೆಹಾಲು ಅಥವಾ ಫಾರ್ಮುಲಾದೊಂದಿಗೆ ಕುಡಿಸಲು ಪ್ರಾರಂಭಿಸಬಹುದು. ಒಂದರಿಂದ ಎರಡು ವರ್ಷದ ಮಕ್ಕಳಿಗೆ ದಿನಕ್ಕೆ ಎರಡರಿಂದ ಮೂರು ಕಪ್ ಹಾಲು ಮತ್ತು ಎರಡರಿಂದ ಐದು ವರ್ಷದ ಮಕ್ಕಳಿಗೆ 2 ರಿಂದ 2.5 ಕಪ್ ಹಾಲನ್ನು ನೀಡಬೇಕು.

47
ಸ್ತನ್ಯಪಾನ

ಸ್ತನ್ಯಪಾನ

ಮಗುವಿಗೆ ಹಸು ಅಥವಾ ಇನ್ನಾವುದೇ ಪ್ರಾಣಿ ಹಾಲನ್ನು ನೀಡಲು ಪ್ರಾರಂಭಿಸೋದರಿಂದ ನೀವು ಸ್ತನ್ಯಪಾನ ಮಾಡೋದನ್ನು ನಿಲ್ಲಿಸಬೇಕು ಎಂದರ್ಥವಲ್ಲ. ನೀವು ಸ್ತನ್ಯಪಾನ (breast feeding) ಮಾಡುವ ಅಂಬೆಗಾಲಿಡುವ ಮಕ್ಕಳಿಗೂ ಹಾಲುಣಿಸಬಹುದು. ಮಗುವಿಗೆ ಹಸು ಅಥವಾ ಎಮ್ಮೆ ಹಾಲಿನ ಅಲರ್ಜಿ ಇದ್ದರೆ,  ಸೋಯಾ ಹಾಲನ್ನು ಕುಡಿಸಬಹುದು.

57
ಅಂಬೆಗಾಲಿಡುವ ಮಕ್ಕಳಿಗೆ ಹಾಲಿನ ಪ್ರಯೋಜನಗಳು

ಅಂಬೆಗಾಲಿಡುವ ಮಕ್ಕಳಿಗೆ ಹಾಲಿನ ಪ್ರಯೋಜನಗಳು

ಎರಡು ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹಾಲು ಅತ್ಯಗತ್ಯ ಏಕೆಂದರೆ ಅದರಲ್ಲಿ ಕ್ಯಾಲ್ಸಿಯಂ, ಕೊಬ್ಬು ಮತ್ತು ಪ್ರೋಟೀನ್ ಇದೆ. ಈ ಸಮಯದಲ್ಲಿ ಮಕ್ಕಳ ಬೆಳವಣಿಗೆಗಾಗಿ ಈ ಮೂರು ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತೆ ಮತ್ತು ಈ ಮೂರು, ಹಾಲಿನಲ್ಲಿ ಸುಲಭವಾಗಿ ಲಭ್ಯವಿದೆ.

67
ಮಗು ಹೆಚ್ಚು ಹಾಲು ಕುಡಿದರೆ ಏನಾಗುತ್ತೆ?

ಮಗು ಹೆಚ್ಚು ಹಾಲು ಕುಡಿದರೆ ಏನಾಗುತ್ತೆ?

ಅನೇಕ ಬಾರಿ ಪೋಷಕರು ಮಗುವಿಗೆ ಅಗತ್ಯಕ್ಕಿಂತ ಹೆಚ್ಚು ಹಾಲನ್ನು ನೀಡುತ್ತಾರೆ, ಇದರಿಂದಾಗಿ ಈ ಕೆಲವು ಸಮಸ್ಯೆಗಳು ಸಂಭವಿಸಲು ಪ್ರಾರಂಭಿಸುತ್ತವೆ. ಹಸುವಿನ ಹಾಲಿನಲ್ಲಿ ಕೊಬ್ಬು ಇರುತ್ತೆ  ಮತ್ತು ಇದು ಮಗುವಿನ ಹೊಟ್ಟೆಯನ್ನು ಬೇಗನೆ ತುಂಬಿಸುತ್ತೆ ಮತ್ತು ಮಗುವಿಗೆ ಇತರ ವಸ್ತುಗಳನ್ನು ತಿನ್ನಲು ಸಾಧ್ಯವಾಗೋದಿಲ್ಲ. ಇದು ಪೌಷ್ಠಿಕಾಂಶದಲ್ಲಿ ಅಸಮತೋಲನವನ್ನು ಸೃಷ್ಟಿಸುತ್ತೆ ಮತ್ತು ಮಗುವಿನಲ್ಲಿ ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತೆ.

77
ಇತರ ಪೋಷಕಾಂಶಗಳ ಮೇಲೆ ಪರಿಣಾಮ

ಇತರ ಪೋಷಕಾಂಶಗಳ ಮೇಲೆ ಪರಿಣಾಮ

ಹಾಲಿನಲ್ಲಿ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಅಧಿಕವಾಗಿದೆ, ಇದರ ಅತಿ ಸೇವನೆಯು ವಿಶೇಷವಾಗಿ ಎರಡು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಲ್ಲಿ ಕ್ಯಾಲೋರಿ ಹೆಚ್ಚಿಸುತ್ತೆ. ಕ್ಯಾಲೋರಿ ಹೆಚ್ಚಿದ್ದರೆ, ಮಗುವಿನ ತೂಕ ಹೆಚ್ಚಾಗಬಹುದು ಮತ್ತು ಟೈಪ್ 2 ಮಧುಮೇಹದಂತಹ ಗಂಭೀರ ಕಾಯಿಲೆ ಮಗುವನ್ನು ಕಾಡಬಹುದು. ಹಾಗಾಗಿ ಮಗುವಿಗೆ ಹೆಚ್ಚು ಹಾಲು ಕೊಡೋ ಮೊದಲು ಒಮ್ಮೆ ಯೋಚಿಸಿ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಹಾಲು
ಜೀವನಶೈಲಿ

Latest Videos
Recommended Stories
Recommended image1
ಕರಿದ ಎಣ್ಣೆ ಮರಳಿ ಬಳಸದಂತೆ ಏಮ್ಸ್ ವೈದ್ಯೆ ಎಚ್ಚರಿಕೆ, ಫಾಸ್ಟ್ ಫುಡ್ ಮಳಿಗೆಗಳಲ್ಲಿನ ಪರೀಕ್ಷೆಯ ಶಾಕಿಂಗ್ ಸತ್ಯ!
Recommended image2
52 ವಯಸ್ಸಲ್ಲೂ ನಿಂತಿಲ್ಲ ಉತ್ಸಾಹ: ಪ್ರತಿ ಬೆಳಿಗ್ಗೆ ಈ ಡ್ರಿಂಕ್ಸ್​ ಕುಡಿದು ಫಿಟ್​ ಆಗಿರಿ ಎಂದ Maliaka Arora!
Recommended image3
ಪಾದಗಳ ಅತಿಯಾದ ಉರಿಯಿಂದ ಬಳಲುತ್ತಿದ್ದೀರಾ? ಇಲ್ಲಿವೆ ನೋಡಿ ಹಳ್ಳಿ ಶೈಲಿಯ ಸೂಪರ್ ಮನೆಮದ್ದುಗಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved