ಮಧುಮೇಹ ಮಹಿಳೆಯರ ಯೋನಿ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಾ?
ಮಹಿಳೆಯರಲ್ಲಿ ಹೆಚ್ಚುತ್ತಿರುವ ಮಧುಮೇಹದ ಸಮಸ್ಯೆ ಯೋನಿಯ ಆರೋಗ್ಯವನ್ನು ಹಾನಿಗೊಳಿಸುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಪ್ರಿಡಯಾಬಿಟಿಸ್ ಭಿನ್ನವಾಗಿದೆ. ಈ ಡಯಾಬಿಟೀಸ್ ಅವರ ಯೋನಿ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ನಮ್ಮ ಜೀವನಶೈಲಿಯಲ್ಲಿನ ಬದಲಾವಣೆ (lifestyle change) ವ್ಯಕ್ತಿಯ ಜೀವನದಲ್ಲಿ ಪ್ರಿಡಯಾಬಿಟಿಸ್ ಅಪಾಯವನ್ನು ಹೆಚ್ಚಿಸುತ್ತವೆ. ವಿಶೇಷವೆಂದರೆ ಇದರ ರೋಗಲಕ್ಷಣಗಳು ತುಂಬಾ ಸೌಮ್ಯವಾಗಿರುತ್ತವೆ, ಹೆಚ್ಚಿನ ಜನರಿಗೆ ಈ ಸಮಸ್ಯೆ ಇರುವ ಬಗ್ಗೆ ಗೊತ್ತೆ ಆಗುವುದಿಲ್ಲ. ಇನ್ನು ಮಹಿಳೆಯರಲ್ಲಿ ಹೆಚ್ಚುತ್ತಿರುವ ಮಧುಮೇಹದ ಸಮಸ್ಯೆಯು ಅವರ ಯೋನಿ ಆರೋಗ್ಯವನ್ನು ಅನೇಕ ರೀತಿಯಲ್ಲಿ ಹಾನಿಗೊಳಿಸುತ್ತದೆ. ಪುರುಷರಿಗಿಂತ ಮಹಿಳೆಯರು ಪ್ರಿಡಯಾಬಿಟಿಸ್ (prediabetes)ನಿಂದ ಹೆಚ್ಚಿನ ಪರಿಣಾಮವನ್ನು ಎದುರಿಸಬೇಕಾಗಿ ಬರುತ್ತದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
ಸ್ತ್ರೀರೋಗತಜ್ಞರ ಪ್ರಕಾರ, ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವು (blood sugar level)ಸಾಮಾನ್ಯಕ್ಕಿಂತ ಹೆಚ್ಚಾಗಿರುವುದು ಪ್ರಿಡಯಾಬಿಟಿಸ್ ಅಪಾಯವನ್ನು ಸೂಚಿಸುತ್ತದೆ. ಇದಲ್ಲದೆ, ಮಹಿಳೆಯರ ದೇಹದಲ್ಲಿ ಹೆಚ್ಚುತ್ತಿರುವ ಹಾರ್ಮೋನುಗಳ ಅಸಮತೋಲನವು ಮಹಿಳೆಯರಲ್ಲಿ ಪ್ರಿಡಯಾಬಿಟಿಸ್ ಸ್ಥಿತಿಯನ್ನು ವಿಭಿನ್ನವಾಗಿಸುತ್ತದೆ. ಡಯಾಬಿಟೀಸ್ ನಿಂದಾಗಿ ಮಹಿಳೆಯರ ಯೋನಿ ಆರೋಗ್ಯದ ಮೇಲೆ ಸಹ ಪರಿಣಾಮ ಬೀರುತ್ತದೆ. ಮಹಿಳೆಯರು ಯೋನಿ ಶುಷ್ಕತೆ, ಯುಟಿಐ ಮತ್ತು ನೋವಿನ ಲೈಂಗಿಕತೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದು ಮಹಿಳೆಯರಲ್ಲಿ ಕಾಮಾಸಕ್ತಿಯ ಕೊರತೆಯನ್ನು ಹೆಚ್ಚಿಸುತ್ತದೆ, ಅಲ್ಲದೇ ಇದು ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಪ್ರಿ ಡಯಾಬಿಟಿಸ್ ನಿಂದ ಬಳಲುತ್ತಿರುವ ಅಥವಾ ಮಧುಮೇಹದಿಂದ ಬಳಲುತ್ತಿರುವ 80 ಪ್ರತಿಶತದಷ್ಟು ಜನರಿಗೆ ತಮಗೆ ಈ ರೋಗ ಇದೆ ಅನ್ನೊದೆ ಗೊತ್ತಿರೋದಿಲ್ಲ. ಮಧುಮೇಹದ ರೋಗಲಕ್ಷಣಗಳು ಅತ್ಯಂತ ಸೌಮ್ಯವಾಗಿರುತ್ತವೆ. ಹೀಗಾಗಿ ಅವುಗಳನ್ನು ಗುರುತಿಸೋದು ಅಷ್ಟೊಂದು ಸುಲಭವೂ ಅಲ್ಲ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಅಂಡ್ ಡೈಜೆಸ್ಟಿವ್ ಅಂಡ್ ಕಿಡ್ನಿ ಡಿಸೀಸ್ ಪ್ರಕಾರ, ಬೊಜ್ಜು ಅಥವಾ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ನಿಂದ (polysystic ovary syndrome) ಬಳಲುತ್ತಿರುವ ಮಹಿಳೆಯರಿಗೆ ಪ್ರಿಡಯಾಬಿಟಿಸ್ ಬರುವ ಸಾಧ್ಯತೆ ಹೆಚ್ಚು.
ಪದೇ ಪದೇ ಮೂತ್ರ ವಿಸರ್ಜನೆ: ನಿಮಗೂ ಪ್ರಿಡಯಾಬೆಟಿಕ್ ಸಮಸ್ಯೆ ಇದ್ರೆ, ಅದರಿಂದ ಪದೇ ಪದೇ ಮೂತ್ರ (urination)ಬರೋದಿಕ್ಕೆ ಆರಂಭವಾಗುತ್ತದೆ. ಇದು ಮಹಿಳೆಯರಲ್ಲಿ ಪ್ರಿಡಯಾಬಿಟಿಸ್ ನ ಮುಖ್ಯ ಚಿಹ್ನೆಯಾಗಿದೆ. ಇದು ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗುತ್ತದೆ, ಯೋನಿ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಯೋನಿ ವಾಸನೆ, ಯೋನಿ ತುರಿಕೆ ಮತ್ತು ತೇವಾಂಶದಂತಹ ಸಮಸ್ಯೆಗಳ ಅಪಾಯ ಕೂಡ ಹೆಚ್ಚಾಗುತ್ತದೆ.
ಯೋನಿ ಶುಷ್ಕತೆ (Vaginal Dryness): ಮಹಿಳೆಯರಲ್ಲಿ ವಯಸ್ಸಾದಂತೆ ಯೋನಿ ಶುಷ್ಕತೆಯ ಅಪಾಯವು ಹೆಚ್ಚಾಗುತ್ತದೆ. ಆದರೆ ಮಧುಮೇಹ ಹೊಂದಿರುವ ಮಹಿಳೆಯರು ಯೋನಿ ಶುಷ್ಕತೆಗೆ ಹೆಚ್ಚಾಗಿ ಬಲಿಯಾಗುತ್ತಾರೆ. ಇದು ಪ್ರತಿ ಕ್ಷಣವೂ ತುರಿಕೆ ಮತ್ತು ದದ್ದುಗಳ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಅಲ್ಲದೆ, ಯೋನಿಯಲ್ಲಿ ಹೆಚ್ಚಿದ ಶುಷ್ಕತೆಯು ಲೈಂಗಿಕತೆಯ ಸಮಯದಲ್ಲಿ ನೋವನ್ನು ಉಂಟುಮಾಡುತ್ತದೆ.
ಋತುಚಕ್ರದಲ್ಲಿನ ಬದಲಾವಣೆಗಳು (changes in periods): ಅನಿಯಮಿತ ಋತುಚಕ್ರವನ್ನು ಹೊಂದುವುದರ ಜೊತೆಗೆ, ಭಾರಿ ರಕ್ತಸ್ರಾವದ ಸಾಧ್ಯತೆಗಳು ಹೆಚ್ಚಾಗುತ್ತವೆ. ಹೆಚ್ಚಿದ ರಕ್ತದ ಹರಿವಿನಿಂದಾಗಿ, ಆಯಾಸ ಮತ್ತು ದೌರ್ಬಲ್ಯದ ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಹೆಚ್ಚಿದ ರಕ್ತಸ್ರಾವವು ಪ್ರಿಡಯಾಬಿಟಿಸ್ ನ ಸಂಕೇತವಾಗಿದೆ. ಪ್ರತಿ ತಿಂಗಳು ನೀವು 5 ದಿನಗಳಿಗಿಂತ ಹೆಚ್ಚು ಕಾಲ ಭಾರಿ ರಕ್ತಸ್ರಾವವನ್ನು ಹೊಂದಿದ್ದರೆ ವೈದ್ಯರನ್ನು ಸಂಪರ್ಕಿಸಿ.
ಯೋನಿ ಯೀಸ್ಟ್ ಸೋಂಕು (vaginal infection): ಮಧುಮೇಹ ಹೊಂದಿರುವ ಮಹಿಳೆಯರು ಪದೇ ಪದೇ ಯೋನಿ ಸೋಂಕುಗಳಿಗೆ ಒಳಗಾಗುವ ಅಪಾಯವಿದೆ. ಇದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವ ಮೂಲಕ ರಕ್ತ ಪರಿಚಲನೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅಲ್ಲದೇ ಇದು ಸೋಂಕನ್ನು ಎದುರಿಸುವ ದೇಹದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
ದೈಹಿಕವಾಗಿ ಸಕ್ರಿಯರಾಗಿರಿ (Physically active): ನಿಯಮಿತ ವ್ಯಾಯಾಮದ ಸಹಾಯದಿಂದ, ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸಬಹುದು. ಇದರೊಂದಿಗೆ, ದೇಹದಲ್ಲಿನ ಮಧುಮೇಹದ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ವ್ಯಾಯಾಮದ ಹೊರತಾಗಿ, ಸೈಕ್ಲಿಂಗ್ ಮತ್ತು ಈಜು ಸಹ ದೈನಂದಿನ ದಿನಚರಿಗೆ ಸೇರಿಸಬಹುದು.
ಸಮತೋಲಿತ ಆಹಾರವನ್ನು ಸೇವಿಸಿ (Balanced Food): ಊಟದಲ್ಲಿ ಹೆಚ್ಚು ಉಪ್ಪು ಮತ್ತು ಸಕ್ಕರೆ ತೆಗೆದುಕೊಳ್ಳುವುದನ್ನು ತಪ್ಪಿಸಿ. ಸೋಡಿಯಂ ಪ್ರಮಾಣವನ್ನು ಹೆಚ್ಚಿಸುವುದು ನೀರನ್ನು ಹಿಡಿದಿಟ್ಟುಕೊಳ್ಳುವ ಅಪಾಯವನ್ನುಂಟುಮಾಡುತ್ತದೆ. ಎಣ್ಣೆಯುಕ್ತ ಮತ್ತು ಸಂಸ್ಕರಿಸಿದ ಆಹಾರವನ್ನು ಸೇವಿಸುವುದರಿಂದ ಪ್ರಿಡಯಾಬಿಟಿಸ್ ಅಪಾಯ ಹೆಚ್ಚುತ್ತದೆ. ಸೀಸನಲ್ ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿ.
ದೇಹವನ್ನು ಹೈಡ್ರೇಟ್ ಮಾಡಿ (Hydrate Your Body): ಯಾವುದೇ ರೀತಿಯ ಸೋಂಕನ್ನು ತಪ್ಪಿಸಲು ದೇಹವನ್ನು ಹೈಡ್ರೇಟ್ ಮಾಡೋದು ಅವಶ್ಯಕ. ಹಾಗಾಗಿ ಹೆಚ್ಚು ಹೆಚ್ಚು ನೀರು ಸೇವಿಸಿ, ಇದು ಯೋನಿ ಶುಷ್ಕತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಇದಲ್ಲದೆ, ಯೋನಿಯಲ್ಲಿ ಹೆಚ್ಚುತ್ತಿರುವ ತುರಿಕೆ ಮತ್ತು ವಾಸನೆಯನ್ನು ಸಹ ತೆಗೆದುಹಾಕಲಾಗುತ್ತದೆ.