ಥೈರಾಯ್ಡ್ ಕಾರ್ಯ ಸುಧಾರಿಸಲು ಆರೋಗ್ಯಕರ ಆಹಾರಗಳಿವು
ಥೈರಾಯ್ಡ್ ಚಿಟ್ಟೆ ಆಕಾರದ ಗ್ರಂಥಿಯಾಗಿದ್ದು, ಇದು ಕುತ್ತಿಗೆಯಲ್ಲಿದೆ, ಇದು ಥೈರಾಯ್ಡ್ ಹಾರ್ಮೋನ್ ಅನ್ನು ಉತ್ಪಾದಿಸುತ್ತದೆ. ಈ ಹಾರ್ಮೋನ್ ದೇಹದ ಉಷ್ಣತೆ, ಮನಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರ ಅಸಮತೋಲನವು ಅನಾರೋಗ್ಯ ಕಟ್ಟಿಟ್ಟ ಬುತ್ತಿ
ಆರೋಗ್ಯದ ಮೇಲೆ ಪರಿಣಾಮ ಬೀರುವ ಥೈರಾಯ್ಡ್ ಸ್ಥಿತಿಯ ಪ್ರಕಾರವನ್ನು ಅವಲಂಬಿಸಿ ತೂಕ ಹೆಚ್ಚಾಗಬಹುದು ಅಥವಾ ತೂಕ ಇಳಿಸಬಹುದು. ಕೆಲವು ಆಹಾರ ಬದಲಾವಣೆಗಳನ್ನು ಮಾಡುವ ಮೂಲಕ ಥೈರಾಯ್ಡ್ ಮಟ್ಟವನ್ನು ನಿರ್ವಹಿಸಬಹುದು. ಥೈರಾಯ್ಡ್ ಕಾರ್ಯವನ್ನು ಸುಧಾರಿಸಲು ಆಹಾರ ಕ್ರಮದಲ್ಲಿ ನೀವು ಸೇರಿಸಬಹುದಾದ ಕೆಲವು ಆಹಾರಗಳು ಇಲ್ಲಿವೆ.
ಸೀ ಫುಡ್
ಟ್ಯೂನ, ಕಡಲಕಳೆ, ಸೀಗಡಿ, ಸಾರ್ಡೀನ್ ಸೇರಿದಂತೆ ಸಮುದ್ರಾಹಾರವು ಅಯೋಡಿನ್ನ ಸಮೃದ್ಧ ಮೂಲಗಳಾಗಿವೆ. ಥೈರಾಯ್ಡ್ ಗ್ರಂಥಿಗಳಿಗೆ ಥೈರಾಯ್ಡ್ ಹಾರ್ಮೋನುಗಳನ್ನು ಉತ್ಪಾದಿಸಲು ಅಯೋಡಿನ್ ಅಗತ್ಯವಿರುತ್ತದೆ, ಅದಕ್ಕಾಗಿಯೇ ಅಯೋಡಿನ್ ಭರಿತ ಆಹಾರವನ್ನು ಸೇರಿಸಬೇಕಾಗುತ್ತದೆ.
ಥೈರಾಯ್ಡ್ ತೊಂದರೆಗಳನ್ನು ತಪ್ಪಿಸಲು ಅದನ್ನು ಮಿತವಾಗಿ ಸೇವಿಸಿ. ಸಮುದ್ರಾಹಾರ, ವಿಶೇಷವಾಗಿ ಮೀನು, ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಮತ್ತು ಆಹಾರಕ್ರಮಕ್ಕೆ ಅತ್ಯುತ್ತಮವಾದ ಸೇರ್ಪಡೆ.
ಕೋಸುಗಡ್ಡೆ
ಬ್ರೊಕೊಲಿ, ಹೂಕೋಸು ಮತ್ತು ಬ್ರಸೆಲ್ಸ್ ಮೊಗ್ಗುಗಳು ಕ್ರೂಸಿಫೆರಸ್ ತರಕಾರಿಗಳಾಗಿದ್ದು, ಥೈರಾಯ್ಡ್ ಕಾರ್ಯಗಳನ್ನು ಸುಧಾರಿಸಲು ಸಹಕಾರಿ. ಹೈಪೋಥೈರಾಯ್ಡಿಸಮ್ ಇರುವ ಜನರು ಇದನ್ನು ಮಿತವಾಗಿ ಸೇವಿಸಬಹುದು. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳನ್ನು ದೂರವಿರಿಸಿಕೊಳ್ಳಬಹುದು.
ನಟ್ಸ್
ನಟ್ಸ್ ಪೋಷಕಾಂಶಗಳ ಮೈನಸಲ್ ಪವರ್ಹೌಸ್ ಆಗಿದ್ದು ಅದು ಆರೋಗ್ಯದ ಪ್ರಯೋಜನಗಳನ್ನು ನೀಡುತ್ತದೆ. ನಟ್ಸ್ ಥೈರಾಯ್ಡ್‌ಗೆ ಒಳ್ಳೆಯದು. ಬ್ರೆಜಿಲ್ನಟ್ಸ್ ಗಳು ಮತ್ತು ಹ್ಯಾಜಲ್ನಟ್ಸ್ ನಂತಹ ನಟ್ಸ್ ಸೆಲೆನಿಯಂನಲ್ಲಿ ಸಮೃದ್ಧವಾಗಿವೆ, ಇದು ಥೈರಾಯ್ಡ್ ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
ವಿಟಮಿನ್ ಡಿ
ವಿಟಮಿನ್ ಡಿ ಕೊಬ್ಬಿನಲ್ಲಿ ಕರಗುವ ವಿಟಮಿನ್, ಇದು ದೇಹಕ್ಕೆ ಅತ್ಯಗತ್ಯ. ವಿಟಮಿನ್ ಡಿ ಥೈರಾಯ್ಡ್ ಕಾರ್ಯವನ್ನು ಸುಧಾರಿಸಲು ಮತ್ತು ಆಟೋಇಮ್ಯೂನ್ ಥೈರಾಯ್ಡಿಟಿಸ್ ಇರುವವರಲ್ಲಿ ಸಹಾಯ ಮಾಡುತ್ತದೆ .
ಈ ವಿಟಮಿನ್ ಮೂಳೆ, ಹಲ್ಲು ಮತ್ತು ಸ್ನಾಯುಗಳಿಗೆ ಸಹ ಒಳ್ಳೆಯದು. ಸೋಯಾ ಹಾಲು, ಕಿತ್ತಳೆ ರಸ, ಸಿರಿಧಾನ್ಯಗಳು, ಓಟ್ ಮೀಲ್ ವಿಟಮಿನ್ ಡಿ ಯ ಉತ್ತಮ ಆಹಾರ ಮೂಲಗಳಾಗಿವೆ.
ಬೀನ್ಸ್
ಬೀನ್ಸ್ ಮತ್ತು ದ್ವಿದಳ ಧಾನ್ಯಗಳು ಬಹುಶಃ ಹೆಚ್ಚು ಅಂಡರ್ರೇಟೆಡ್ ಆಹಾರಗಳಾಗಿವೆ. ಅವು ಫೈಬರ್, ಪ್ರೋಟೀನ್, ಬಿ ಜೀವಸತ್ವಗಳು ಮತ್ತು ಇತರ ಅನೇಕ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಅವು ನಿರಂತರ ಶಕ್ತಿಯ ಉತ್ತಮ ಮೂಲವಾಗಿದೆ.
ಹೈಪೋಥೈರಾಯ್ಡಿಸಮ್ ಗೆ ಇದು ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು, ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಲು ಮತ್ತು ಆರೋಗ್ಯಕರ ಕರುಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಸ್ವೀಟ್ ಪೊಟಾಟೋ
ಹೈಪೋಥೈರಾಯ್ಡಿಸಮ್ನ ಆರಂಭಿಕ ಲಕ್ಷಣವೆಂದರೆ ತೂಕ ಹೆಚ್ಚಾಗುವುದು. ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಸಾಂದ್ರತೆಯ ಆಹಾರವನ್ನು ಸೇವಿಸುವುದರಿಂದ ತೂಕವನ್ನು ನಿಯಂತ್ರಿಸಬಹುದು. ಆಹಾರದಲ್ಲಿ ಬೆರಿಹಣ್ಣುಗಳು, ಚೆರ್ರಿಗಳು, ಹಸಿರು ಮೆಣಸು ಮತ್ತು ಸ್ವೀಟ್ ಪೊಟಾಟೋಗಳಂತಹ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಲು ಪ್ರಯತ್ನಿಸಿ.