MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಹೊಟ್ಟೆಯ ಕೊಬ್ಬನ್ನು ಶಾಶ್ವತವಾಗಿ ನಿವಾರಿಸಲು 7 ಗೋಲ್ಡನ್ ರೂಲ್ಸ್

ಹೊಟ್ಟೆಯ ಕೊಬ್ಬನ್ನು ಶಾಶ್ವತವಾಗಿ ನಿವಾರಿಸಲು 7 ಗೋಲ್ಡನ್ ರೂಲ್ಸ್

ನೀವು ನಿಮ್ಮ ಹೊಟ್ಟೆಯ ಕೊಬ್ಬನ್ನು ನಿವಾರಿಸಲು ಬಯಸುತ್ತೀರಾ? ಹಾಗಿದ್ರೆ ಇಲ್ಲಿದೆ ನಿಮಗಾಗಿ 7 ಗೋಲ್ಡನ್ ರೂಲ್ಸ್. ಇದನ್ನ ಪಾಲಿಸಿದ್ರೆ, ಸ್ಲಿಮ್ ಟಮ್ಮಿ ನಿಮ್ಮದಾಗುತ್ತೆ.  

2 Min read
Author : Pavna Das
| Updated : May 15 2025, 04:55 PM IST
Share this Photo Gallery
  • FB
  • TW
  • Linkdin
  • Whatsapp
18

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಹೊಟ್ಟೆಯ ಕೊಬ್ಬಿನ (belly fat) ಸಮಸ್ಯೆಯಿಂದ ಬಳಲುತ್ತಿದ್ದಾರೆ. ನೀವು ಸಹ ಹೊಟ್ಟೆಯ ಕೊಬ್ಬನ್ನು ಹೊಂದಿದ್ದು, ಹೇಗಪ್ಪಾ ಅದನ್ನು ನಿವಾರಿಸೋದು ಎಂದು ಯೋಚಿಸುತ್ತಿದ್ದರೆ, ನಿಮಗಾಗಿ ಈ ಗೋಲ್ಡನ್ ರೂಲ್ಸ್. 
 

28

ಮದ್ಯಪಾನ ನಿಲ್ಲಿಸಿ
ಮದ್ಯವು ಹಸಿವು, ಒತ್ತಡವನ್ನು ನಿಯಂತ್ರಿಸುವ ಹಾರ್ಮೋನುಗಳ ಮೇಲೆ ಪರಿಣಾಮ (affect on hormones) ಬೀರುತ್ತದೆ. ಇದರಲ್ಲಿ ಖಾಲಿ ಕ್ಯಾಲೋರಿಗಳು ಕೂಡ ಅಧಿಕವಾಗಿದ್ದು, ಇದು ನಿಮ್ಮ ಹೊಟ್ಟೆಯ ಕೊಬ್ಬನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚು. ತೆಳ್ಳಗಿನ ಹೊಟ್ಟೆ ಬೇಕೇ? ಮದ್ಯಪಾನ ನಿಲ್ಲಿಸಿ, ಆರೋಗ್ಯದಿಂದಿರಿ.
 

Related Articles

Related image1
Belly Fat Burning: ಹೊಟ್ಟೆ ಬೊಜ್ಜು ಕರಗಿಸಲು ನಟಿ ಭಾಗ್ಯಶ್ರೀ ರಿವೀಲ್ ಮಾಡಿರುವ ಈ chair exercises ಟ್ರೈ ಮಾಡಿ ನೋಡಿ
Related image2
ಮದುವೆಯ ನಂತರವೂ ಸ್ಲಿಮ್ ಆಗಿರಲು ಇಲ್ಲಿವೆ ಸಿಂಪಲ್ ಟಿಪ್ಸ್!
38

ಕಾರ್ಬೋಹೈಡ್ರೇಟ್‌ ಸೇವನೆ
ಕಾರ್ಬೋಹೈಡ್ರೇಟ್‌ಗಳು ಕಾರ್ಯಕ್ಷಮತೆಗೆ ಇಂಧನವಾಗಿದೆ. ನೀವು ಹೆಚ್ಚಾಗಿ ಜಡ ವ್ಯಕ್ತಿಯಾಗಿದ್ದರೆ, ಕಾರ್ಬೋಹೈಡ್ರೇಟ್‌ (carbohydrates) ಕಡಿಮೆ ತಿನ್ನಿರಿ. ನೀವು ಸಕ್ರಿಯ ವ್ಯಕ್ತಿಯಾಗಿದ್ದರೆ, ಅವುಗಳನ್ನು ಹೆಚ್ಚು ತಿನ್ನಿರಿ. ಕಾರ್ಬೋಹೈಡ್ರೇಟ್‌ಗಳು ಶಕ್ತಿಯ ಸಾಧನಗಳಾಗಿವೆ. ನಿಮ್ಮ ಜೀವನಶೈಲಿಗೆ ಸರಿಹೊಂದುವಂತೆ ಅವುಗಳನ್ನು ಹೊಂದಿಸಿ.

48

ಸರಿಯಾಗಿ ನೀರು ಕುಡಿಯಿರಿ
ನಡೆಯುವಾಗ ನೀರು ಕುಡಿಯಿರಿ (drink water). ಊಟಕ್ಕೆ ಮೊದಲು ಮತ್ತು ನಂತರ ನೀರು ಕುಡಿಯಿರಿ. ಊಟ ಮಾಡುವಾಗ ನೀರು ಕುಡಿಯಬೇಡಿ. ತಿಂಡಿ ತಿನ್ನುವ ಬದಲು ಎರಡು ಊಟದ ನಡುವೆ ನೀರು ಕುಡಿಯಿರಿ. ಇದು ದಿನವಿಡೀ ಹೊಟ್ಟೆ ತುಂಬಿದಂತೆ ಇರಲು ನಿಮಗೆ ಸಹಾಯ ಮಾಡುತ್ತದೆ, ಇದು ಹೆಚ್ಚು ತಿನ್ನೋದರಿಂದ ನಿಮ್ಮನ್ನು ತಡೆಯುತ್ತೆ. 

58

ಪ್ರೋಟೀನ್-ಭರಿತ ಆಹಾರ ಸೇವಿಸಿ
ದೇಹದ ತೂಕದ ಪ್ರತಿ ಪೌಂಡ್‌ಗೆ .8 ಗ್ರಾಂ ನಿಂದ 1 ಗ್ರಾಂ ಪ್ರೋಟೀನ್ ಸೇವಿಸಿ. ನಿಮ್ಮ ಕ್ಯಾಲೊರಿಗಳಲ್ಲಿ 90 ಪ್ರತಿಶತವನ್ನು ಸಂಪೂರ್ಣ, ಸಂಸ್ಕರಿಸದ ಮೂಲಗಳಿಂದ ಪಡೆಯುವ ಗುರಿಯನ್ನು ಹೊಂದಿರಿ. ಪ್ರೋಟೀನ್ ಉತ್ತಮವಾಗಿದೆ ಮತ್ತು ಸಂಪೂರ್ಣ ಆಹಾರಗಳು ಹೆಚ್ಚು ಫೈಬರ್ ಅನ್ನು ಹೊಂದಿರುತ್ತವೆ, ಇದು ನಿಮಗೆ ಹೆಚ್ಚು ಕಾಲ ಹೊಟ್ಟೆ ತುಂಬಿರುವಂತೆ ಅನಿಸುತ್ತದೆ.

68

ಸ್ನಾಯುಗಳನ್ನು ಹೆಚ್ಚಿಸಲು ಜಿಮ್ ಮಾಡಿ
ಕಾರ್ಡಿಯೋ ನೀವು ಭಾವಿಸುವಷ್ಟು ಕ್ಯಾಲೊರಿಗಳನ್ನು ಬರ್ನ್(calorie burn) ಮಾಡೋದಿಲ್ಲ. ಆದರೆ ವೈಟ್ ಟ್ರೈನಿಂಗ್ ಸ್ನಾಯುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ, ಇದು ನಿಮ್ಮ ಚಯಾಪಚಯ ದರವನ್ನು ಹೆಚ್ಚಿಸುತ್ತದೆ ಮತ್ತು ಫ್ಯಾಟ್ ಬರ್ನ್ ಮಾಡಲು ಸಹಾಯ ಮಾಡುತ್ತದೆ.  

78

ಒತ್ತಡದ ಮಟ್ಟವನ್ನು ನಿರ್ವಹಿಸಿ
ನೀವು ಹೆಚ್ಚಿನ ಒತ್ತಡದ ಜೀವನವನ್ನು ನಡೆಸಿದಾಗ, ನಿಮ್ಮ ದೇಹವು ಹೆಚ್ಚು ಕಾರ್ಟಿಸೋಲ್ ಅನ್ನು ಉತ್ಪಾದಿಸುತ್ತದೆ. ಇದು ನಿಮ್ಮ ಹಸಿವನ್ನು ಹೆಚ್ಚಿಸುವ ಮೂಲಕ ನಿಮ್ಮ ಹೊಟ್ಟೆಯ ಸುತ್ತಲೂ ಕೊಬ್ಬಿನ ಶೇಖರಣೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ನೀವು ಹೆಚ್ಚು ತಿನ್ನಲು ಪ್ರಾರಂಭಿಸುತ್ತೀರಿ. ಒತ್ತಡವನ್ನು (stress control) ಎದುರಿಸಲು, ನಡೆಯಿರಿ ಮತ್ತು ಪ್ರಕೃತಿಯಲ್ಲಿ ಸಮಯ ಕಳೆಯಿರಿ. 

88

ಗುಣಮಟ್ಟದ ನಿದ್ರೆಗೆ ಆದ್ಯತೆ ನೀಡಿ
ನಿದ್ರೆಯ ಕೊರತೆಯು ನಿಮ್ಮ ಹಸಿವನ್ನು ಹೆಚ್ಚಿಸುತ್ತದೆ, ನಿಮ್ಮ ಶಕ್ತಿಯ ಮಟ್ಟವನ್ನು ಹಾಳು ಮಾಡುತ್ತದೆ.. ರಾತ್ರಿ 5 ಗಂಟೆ ಅಥವಾ ಅದಕ್ಕಿಂತ ಕಡಿಮೆ ನಿದ್ರೆ ಮಾಡುವ ಜನರು ದಿನಕ್ಕೆ 385 ಅಥವಾ ಅದಕ್ಕಿಂತ ಹೆಚ್ಚು ಕ್ಯಾಲೊರಿಗಳನ್ನು ತಿನ್ನುತ್ತಾರೆ ಎಂದು ಅಧ್ಯಯನಗಳು ತೋರಿಸುತ್ತವೆ. ಚಿಕ್ಕ ಹೊಟ್ಟೆ ಬೇಕೇ? ಉತ್ತಮ ನಿದ್ರೆ (healthy sleep) ಪಡೆಯಿರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಆರೋಗ್ಯ ಸಮಸ್ಯೆಗಳು
ಪುರುಷರ ಆರೋಗ್ಯ

Latest Videos
Recommended Stories
Recommended image1
ಸಿಹಿ ಗೆಣಸು ಎಲ್ಲರಿಗೂ ಇಷ್ಟ, ಆದರೆ ಇವರು ಸಿಹಿ ಗೆಣಸನ್ನು ಮುಟ್ಟಲೇಬಾರದು
Recommended image2
Rare Diseases: ಅಪರೂಪದ ಕಾಯಿಲೆಗಳೆಲ್ಲಾ ಅನುವಂಶಿಕವೇ? ಸತ್ಯ-ಮಿಥ್ಯೆಗಳೇನು? ನಿಮ್ಮ ಫ್ಯಾಮಿಲಿ ಬಗ್ಗೆ ತಿಳ್ಕೊಳ್ಳಿ
Recommended image3
ಶ್ವಾನ ಪ್ರಿಯರೇ ಎಚ್ಚರ: ನಾಯಿ ನೆಕ್ಕಿದ್ದರಿಂದ ಕೈಕಾಲು ಕಳೆದುಕೊಂಡ ಮಹಿಳೆ- 11.3 ದಶಲಕ್ಷ ಪ್ರಕರಣ ದಾಖಲು!
Related Stories
Recommended image1
Belly Fat Burning: ಹೊಟ್ಟೆ ಬೊಜ್ಜು ಕರಗಿಸಲು ನಟಿ ಭಾಗ್ಯಶ್ರೀ ರಿವೀಲ್ ಮಾಡಿರುವ ಈ chair exercises ಟ್ರೈ ಮಾಡಿ ನೋಡಿ
Recommended image2
ಮದುವೆಯ ನಂತರವೂ ಸ್ಲಿಮ್ ಆಗಿರಲು ಇಲ್ಲಿವೆ ಸಿಂಪಲ್ ಟಿಪ್ಸ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved