ಡಯಟ್ ಮಾಡದೇನೆ ತೂಕ ಇಳೀತಿದ್ರೆ ಎಚ್ಚರ, ಇದು ಹೊಟ್ಟೆಯ ಕ್ಯಾನ್ಸರ್ ಲಕ್ಷಣ
ತಪ್ಪು ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿಯಿಂದಾಗಿ, ಹೊಟ್ಟೆಯ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗಿರುತ್ತೆ. ನೀವು ಕಡಿಮೆ ಹಸಿವನ್ನು ಹೊಂದಿದ್ದರೆ ಅಥವಾ ಕಾರಣ ಇಲ್ಲದೇನೆ ತೂಕ ಕಳೆದುಕೊಳ್ಳುತ್ತಿದ್ದರೆ, ಜಾಗರೂಕರಾಗಿರಬೇಕು ಮತ್ತು ಪರೀಕ್ಷೆಗೆ ಒಳಗಾಗಬೇಕು.
ಹೊಟ್ಟೆಯ ಕ್ಯಾನ್ಸರ್ (stomach cancer) ಅನ್ನು ಗ್ಯಾಸ್ಟ್ರಿಕ್ ಕ್ಯಾನ್ಸರ್ ಎಂದೂ ಕರೆಯಲಾಗುತ್ತದೆ. ಆಹಾರವನ್ನು ನುಂಗಿದ ನಂತರ, ಆಹಾರವು ಜರಾಯುವಿನ ಮೂಲಕ ಹಾದು ಹೋಗುತ್ತದೆ ಮತ್ತು ಹೊಟ್ಟೆಯ ಮೇಲ್ಭಾಗದಲ್ಲಿರುವ ಚೀಲದಂತಹ ಅಂಗವನ್ನು ಪ್ರವೇಶಿಸುತ್ತದೆ, ಇದನ್ನು ಹೊಟ್ಟೆ ಎಂದು ಕರೆಯಲಾಗುತ್ತದೆ. ಗ್ಯಾಸ್ಟ್ರಿಕ್ ರಸವನ್ನು ಸ್ರವಿಸುವ ಮೂಲಕ ಹೊಟ್ಟೆ ಆಹಾರವನ್ನು ಜೀರ್ಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಜಠರವು ಗ್ಯಾಸ್ಟ್ರಿಕ್ ರಸ ಬೆರೆಸಿದ ಆಹಾರವನ್ನು ಸಣ್ಣ ಕರುಳಿನ ಮೊದಲ ಭಾಗಕ್ಕೆ ಕಳುಹಿಸುತ್ತದೆ. ಹೊಟ್ಟೆಯಲ್ಲಿ ಉದ್ಭವಿಸುವ ಕ್ಯಾನ್ಸರ್ ಅನ್ನು ಗ್ಯಾಸ್ಟ್ರಿಕ್ ಕ್ಯಾನ್ಸರ್ (gastric cancer) ಎಂದು ಕರೆಯಲಾಗುತ್ತದೆ.
ಹೊಟ್ಟೆಯ ಕ್ಯಾನ್ಸರ್ ವಿಶ್ವದ ಐದನೇ ಅತ್ಯಂತ ಸಾಮಾನ್ಯವಾಗಿ ಕ್ಯಾನ್ಸರ್ ಆಗಿದೆ. ವಿಶ್ವಾದ್ಯಂತ ಪ್ರತಿ ವರ್ಷ ಒಂದು ದಶಲಕ್ಷಕ್ಕೂ ಹೆಚ್ಚು ಜನರು ಗ್ಯಾಸ್ಟ್ರಿಕ್ ಕ್ಯಾನ್ಸರ್ ಗೆ ಒಳಗಾಗುತ್ತಾರೆ. ಇದು ಭಾರತದಲ್ಲಿ ನಾಲ್ಕನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ ಮತ್ತು ಭಾರತದಲ್ಲಿ ಈ ಕ್ಯಾನ್ಸರ್ನಿಂದ ಉಂಟಾಗುವ ಸಾವಿಗೆ ಎರಡನೇ ಅತಿದೊಡ್ಡ ಕಾರಣವಾಗಿದೆ.
45 ರಿಂದ 55 ವರ್ಷ ವಯಸ್ಸಿನ ಪುರುಷರಿಗೆ ಗ್ಯಾಸ್ಟ್ರಿಕ್ ಕ್ಯಾನ್ಸರ್ ಬರುವ ಅಪಾಯ ಭಾರತದ ಮಹಿಳೆಯರಿಗಿಂತ 2 ರಿಂದ 4 ಪಟ್ಟು ಹೆಚ್ಚಾಗಿದೆ. ಕಾರಣಗಳು, ರೋಗಲಕ್ಷಣಗಳು, ಅಪಾಯದ ಅಂಶಗಳು ಮತ್ತು ಹೊಟ್ಟೆಯ ಕ್ಯಾನ್ಸರ್ ತಪ್ಪಿಸುವ ಮಾರ್ಗಗಳು ಯಾವುವು ಎಂದು ತಿಳಿದುಕೊಳ್ಳೋಣ.
ಗ್ಯಾಸ್ಟ್ರಿಕ್ ಕ್ಯಾನ್ಸರ್ ನ ವಿಧಗಳು
ಅಡೆನೊಕಾರ್ಸಿನೋಮಾ (ಅತ್ಯಂತ ಸಾಮಾನ್ಯ ಪ್ರಕಾರ), ಜಠರಗರುಳಿನ ಸ್ಟ್ರೋಮಲ್ ಗೆಡ್ಡೆ ನ್ಯೂರೋ ಎಂಡೋಕ್ರೈನ್ ಟ್ಯೂಮರ್, ಲಿಂಫೋಮಾ. ಇವು ಕ್ಯಾನ್ಸರ್ ನ ವಿಧಗಳಾಗಿವೆ. ಇನ್ನು ಅವುಗಳ ಕಾರಣಗಳ ಬಗ್ಗೆ ತಿಳಿಯೋಣ.
ಗ್ಯಾಸ್ಟ್ರಿಕ್ ಕ್ಯಾನ್ಸರ್ ಗೆ ಕಾರಣಗಳು (reasons of gastric ccancer)
ಧೂಮಪಾನ/ ಆಲ್ಕೋಹಾಲ್/ತಂಬಾಕು (smoking and drinking)
ಕೊಬ್ಬು
ಹೊಟ್ಟೆಯಲ್ಲಿ ಊತ (ಗ್ಯಾಸ್ಟ್ರೋಎಂಟಿಟಿಸ್)
ಎಚ್ ಪೈಲೋರಿ ಬ್ಯಾಕ್ಟೀರಿಯಾದಿಂದ ಸೋಂಕು
ಪಾರ್ನಿಷಿಯಸ್ ಅನೀಮಿಯಾ
ಉಪ್ಪು, ಉಪ್ಪಿನಕಾಯಿ, ಸ್ಮೋಕ್ಡ್ ಆಹಾರಗಳನ್ನು ಹೊಂದಿರುವ ಆಹಾರಗಳು
ಕಡಿಮೆ ಹಣ್ಣುಗಳು ಮತ್ತು ತರಕಾರಿಗಳನ್ನು ಹೊಂದಿರುವ ಆಹಾರ ಸೇವಿಸೋದು
ಹೊಟ್ಟೆಯ ಕ್ಯಾನ್ಸರ್ನ ಕುಟುಂಬ ಇತಿಹಾಸ
ಲಕ್ಷಣಗಳು
ಗ್ಯಾಸ್ಟ್ರಿಕ್ ಕ್ಯಾನ್ಸರ್ ಲಕ್ಷಣಗಳು (symptoms of gastric cancer)ಹಸಿವಾಗದಿರೋದು
ತೂಕ ನಷ್ಟ
ರಕ್ತಹೀನತೆ
ಅಜೀರ್ಣ ಹೊಟ್ಟೆಯ ಕಿರಿಕಿರಿ
ವಾಂತಿ (vomiting)
ಹೊಟ್ಟೆಯಲ್ಲಿ ನೋವು
ಸ್ವಲ್ಪ ಪ್ರಮಾಣದ ಆಹಾರ ಸೇವಿಸಿದ ನಂತರ ಹೊಟ್ಟೆ ತುಂಬಿದ ಅನುಭವ
ಕಪ್ಪು ಮಲ
ಹೊಟ್ಟೆಯ ಕ್ಯಾನ್ಸರ್ ತಪ್ಪಿಸುವ ವಿಧಾನಗಳು
ತೂಕ ನಿಯಂತ್ರಣದಲ್ಲಿಡುವುದು (control weight)
ಧೂಮಪಾನ, ಮದ್ಯಪಾನ, ತಂಬಾಕಿನಿಂದ ದೂರವಿರಿ
ಎಚ್ ಪೈಲೋರಿ ಸೋಂಕಿಗೆ ಚಿಕಿತ್ಸೆ ಪಡೆಯಿರಿ
ನಿಯಮಿತವಾಗಿ ದೈಹಿಕ ವ್ಯಾಯಾಮ ಮಾಡಿ
ಆರೋಗ್ಯಕರ ಆಹಾರ ಸೇವಿಸಿ
ಹೊಟ್ಟೆಯ ಕ್ಯಾನ್ಸರ್ ತಪ್ಪಿಸಲು ಏನು ತಿನ್ನಬೇಕು
ವಿಟಮಿನ್ ಸಿ ಸಮೃದ್ಧವಾಗಿರುವ ಹಸಿರು ತರಕಾರಿಗಳು (vegetables with vitamin C): ಪಾಲಕ್, ಟೊಮೆಟೊ, ಬ್ರೊಕೋಲಿ, ನಿಂಬೆ ಹಣ್ಣುಗಳು : ಕಿತ್ತಳೆ, ಅನಾನಸ್, ಪಪ್ಪಾಯಿ ಇವು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ ಮತ್ತು ಡಿಎನ್ಎ ಸೋಸುವಿಕೆಯನ್ನು ತಡೆಯುತ್ತವೆ ಮತ್ತು ಗ್ಯಾಸ್ಟ್ರಿಕ್ ಕ್ಯಾನ್ಸರ್ನಿಂದ ರಕ್ಷಿಸುತ್ತವೆ.
ಕ್ಯಾರೋಟಿನ್ ಭರಿತ ಆಹಾರ : ಕ್ಯಾರೆಟ್, ಕುಂಬಳಕಾಯಿ, ಗೆಣಸು, ಆವಕಾಡೊಗಳು, ಜೋಳ, ಇತ್ಯಾದಿ. ಇವು ಕ್ಯಾನ್ಸರ್ ಕಾರಕಗಳ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.
ಈ ವಿಷಯಗಳನ್ನು ಸಹ ನೆನಪಿನಲ್ಲಿಡಿ
ಡ್ರೈ ಫ್ರುಟ್ಸ್, ಸೆಲೆನಿಯಮ್, ಸತು, ಲುಟೀನ್, ಲೈಕೋಪೀನ್, ಫ್ಲೇವನಾಯ್ಡ್ಗಳು ಮತ್ತು ವಿಟಮಿನ್ ಎ, ಸಿ ಮತ್ತು ಇ ಮುಂತಾದ ಉತ್ಕರ್ಷಣ ನಿರೋಧಕ ಸಮೃದ್ಧ ವಸ್ತುಗಳ ಸೇವನೆಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇವುಗಳನ್ನು ಯಥೆಚ್ಚವಾಗಿ ಸೇವಿಸಿ.