ಮಕ್ಕಳಿಗೆ ಕಾಫಿ-ಟೀ ಕುಡಿದ್ರೆ ಕಪ್ಪಾಗ್ತೀ ಅಂತಾರೆ ದೊಡ್ಡೋರು, ಹೌದಾ?
ನಾವು ಹೆಚ್ಚು ಹೆಚ್ಚು ಚಹಾ ಕುಡಿದಾಗ, ಮನೆಯಲ್ಲಿ ಹಿರಿಯರು ಹೇಳಿರೋದನ್ನು ಕೇಳಿರುತ್ತೇವೆ. ಹೆಚ್ಚು ಚಹಾ ಕುಡಿಯಬೇಡ, ತ್ವಚೆ ಕಪ್ಪಾಗುತ್ತೆ ಎಂದು. ಆದರೆ ನಿಜವಾಗಿಯೂ ಚಹಾ ಕುಡಿಯೋದ್ರಿಂದ ತ್ವಚೆ ಕಪ್ಪಾಗುತ್ತಾ?
ಚಹಾ ಭಾರತೀಯರ ಪ್ರತಿದಿನದ ಮೊದಲ ಆಯ್ಕೆ. ಚಹಾ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಸಿದ್ಧ. ಆದರೆ ಚಹಾ ಕುಡಿಯುವುದರಿಂದ ನಾವು ಕಪ್ಪಾಗುತ್ತೇವೆ ಎಂದು ಅನೇಕ ಜನರು ಭಾವಿಸುತ್ತಾರೆ. ಇದು ನಿಜಾನಾ? ಚಹಾ ಕುಡಿಯೋದ್ರಿಂದ ಚರ್ಮದ ಮೇಲೆ (tea effect on skin) ಕೆಟ್ಟ ಪರಿಣಾಮ ಬೀರುತ್ತಾ? ನೋಡೋಣ.
ಭಾರತದಲ್ಲಿ ಹೆಚ್ಚಿನ ಜನರು ಸೇವಿಸುವ ಪಾನೀಯ ಎಂದರೆ ಅದು ಚಹಾ. ಅನೇಕ ಜನರು ತಮ್ಮ ಬೆಳಿಗ್ಗೆಯನ್ನು ಚಹಾದೊಂದಿಗೆ ಪ್ರಾರಂಭಿಸುತ್ತಾರೆ. ಒಂದು ವೇಳೆ ಬೆಳಗ್ಗೆ ಚಹಾ ಕುಡಿಯದೇ ಹೋದರೆ ಕೆಲವರಿಗಂತೂ ತಲೆನೋವು (headache) ಕಾಡುತ್ತೆ. ಅಷ್ಟೊಂದು ಅಡಿಕ್ಟ್ ಆಗಿರ್ತಾರೆ ಚಹಾಕ್ಕೆ.
ಚಹಾವನ್ನು ಕುಡಿಯುವುದರಿಂದ ತ್ವಚೆಯ ಬಣ್ಣವು ಗಾಢವಾಗುತ್ತದೆ ಅಂದರೆ ತ್ವಚೆ ಕಪ್ಪಾಗುತ್ತದೆ ಎಂದು ಹಿರಿಯರು ಹೇಳಿರೋದನ್ನು ಕೇಳಿರಬಹುದು. ಆದರೆ ನಿಜವಾಗಿಯೂ ಚಹಾ ಕುಡಿಯೋದ್ರಿಂದ ತ್ವಚೆ ಕಪ್ಪಾಗುತ್ತಾ? (dark skin color)
ಖಂಡಿತಾ ಈ ಊಹೆ ತಪ್ಪು. ಚಹಾದ ಬಗ್ಗೆ ತಪ್ಪು ಕಲ್ಪನೆ ನಮ್ಮ ಜನರಲ್ಲಿ ಹಲವಾರು ಸಮಯದಿಂದ ಇದೆ. ಹೆಚ್ಚು ಹೆಚ್ಚು ಚಹಾ ಕುಡಿಯುವುದರಿಂದ ತ್ವಚೆ ಗಾಢ ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಅನ್ನೋದೆಲ್ಲಾ ಸುಳ್ಳು. ಯಾಕಂದ್ರೆ ಇದಕ್ಕೆ ಇಲ್ಲಿವರೆಗೆ ಯಾವುದೇ ಪುರಾವೆ ದೊರೆತಿಲ್ಲ.
ಹೌದು, ಚಹಾ ಕುಡಿಯುವುದರಿಂದ ಬಣ್ಣದ ಮೇಲೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಯಾವುದೇ ಚರ್ಮದ ಬಣ್ಣವು ಅದರ ತಿನ್ನುವುದು ಮತ್ತು ಕುಡಿಯುವುದು ಮತ್ತು ಮೆಲನಿನ್ ಅಂಶವನ್ನು ಅವಲಂಬಿಸಿರುತ್ತದೆ.
ಒಟ್ಟಿನಲ್ಲಿ ಹೇಳೋದಾದ್ರೆ ಚಹಾ ಕುಡಿಯೋದ್ರಿಂದ ಕಪ್ಪಾಗಲ್ಲ. ಇನ್ನು ಚಹಾದ ವಿಶೇಷತೆ ಬಗ್ಗೆ ಮಾತನಾಡೋದಾದ್ರೆ ಪ್ರತಿಯೊಬ್ಬರೂ ಚಹಾದ ವಿಭಿನ್ನ (varieties of tea) ರುಚಿಗಳನ್ನು ಇಷ್ಟಪಡುತ್ತಾರೆ. ಏಲಕ್ಕಿ, ಶುಂಠಿ, ದಾಲ್ಚಿನ್ನಿ, ನಿಂಬೆ ಚಹಾದಂತಹ ಚಹಾದ ವಿವಿಧ ರುಚಿಗಳಿವೆ.