ಕ್ಲೀನ್ ಮಾಡುವಂತಹ ಈ ಪ್ರಾಡಕ್ಟ್ ಗಳನ್ನು ಯಾವತ್ತೂ ಮಿಕ್ಸ್ ಮಾಡ್ಲೇಬೇಡಿ
ಟಾಯ್ಲೆಟ್, ಬಾತ್ ರೂಮ್ ಕ್ಲೀನ್ ಮಾಡೋವಾಗ ನಾವು ಎಲ್ಲವನ್ನೂ ಚೆನ್ನಾಗಿ ಸ್ವಚ್ಚವಾಗಿಡಬೇಕೆಂದು ಎರಡೆರಡು ಕೆಮಿಕಲ್ ಗಳನ್ನು ಒಟ್ಟೋಟ್ಟಿಗೆ ಹಾಕಿ ಮಿಕ್ಸ್ ಮಾಡಿ ಕ್ಲೀನ್ ಮಾಡುತ್ತೇವೆ. ಆದರೆ ಇದರಿಂದ ನಿಮ್ಮ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ಆ ಬಗ್ಗೆ ತಿಳಿಯೋಣ.
ಮನೆಯನ್ನು ಕ್ಲೀನ್ ಮಾಡೋವಾಗ ನಾವು ಅಲ್ಲಿರುವ ಹಲವು ಕ್ಲೀನಿಂಗ್ ಐಟಂ (cleaning product) ಗಳನ್ನು ಒಟ್ಟಾಗಿ ಮಿಕ್ಸ್ ಮಾಡಿ ಬಳಕೆ ಮಾಡುತ್ತೇವೆ. ಆದರೆ ಇದನ್ನು ಮಾಡೋದು ತಪ್ಪು, ಏಕೆಂದರೆ ಅವು ನಿಮಗೆ ಹಾನಿಯನ್ನುಂಟುಮಾಡಬಹುದು, ಇದರಿಂದ ನಿಮ್ಮ ಜೀವವನ್ನು ಸಹ ಕಳೆದುಕೊಳ್ಳಬಹುದು. ಕೆಲವು ಕ್ಲೀನ್ ಮಾಡುವ ರಾಸಾಯನಿಕಗಳನ್ನು ಒಟ್ಟಿಗೆ ಬೆರೆಸಿದಾಗ, ಅವು ವಿಷಕಾರಿಯಾಗುತ್ತವೆ. ಸಾಮಾನ್ಯವಾಗಿ ಸ್ವಚ್ಛಗೊಳಿಸುವ ಉತ್ಪನ್ನಗಳನ್ನು ಎಂದಿಗೂ ಒಟ್ಟಿಗೆ ಬೆರೆಸಬಾರದು. ಏಕೆಂದರೆ ವಿಷಕಾರಿ ಉಸಿರಾಟದ ಪರಿಣಾಮ ತುಂಬಾ ಅಪಾಯಕಾರಿಯಾಗಿರುತ್ತೆ.
ಟಾಯ್ಲೆಟ್ ಕ್ಲೀನರ್ ಗಳು ಮತ್ತು ಬ್ಲೀಚ್
ಶೌಚಾಲಯಗಳು ತುಂಬಾ ಕೊಳಕಾಗಿರಬಹುದು, ಮತ್ತು ಕೆಲವೊಮ್ಮೆ ಟಾಯ್ಲೆಟ್ ಕ್ಲೀನರ್ (toilet cleaner) ಮತ್ತು ಬ್ರಷಿಂಗ್ ನಿಂದ ಮೇಲ್ಮೈಯ ಎಲ್ಲಾ ಕೊಳೆಯನ್ನು ತೆಗೆದುಹಾಕಲು ಸಾಕಾಗುವುದಿಲ್ಲ. ಆದ್ದರಿಂದ, ಸ್ವಲ್ಪ ಬ್ಲೀಚ್ ಸೇರಿಸುವ ಮೂಲಕ ಕೆಲಸವನ್ನು ಮುಗಿಸುವ ಬಗ್ಗೆ ನೀವು ಯೋಚಿಸೋದಾದ್ರೆ, ಅದನ್ನು ತಪ್ಪಿಸುವುದು ಉತ್ತಮ. ನ್ಯಾಷನಲ್ ಕ್ಯಾಪಿಟಲ್ ಪಾಯಿಸನ್ ಸೆಂಟರ್ ಇದು ಅಪಾಯಕಾರಿ ಮಿಶ್ರಣವಾಗಿದೆ ಎಂದು ತಿಳಿಸಿದೆ.
ಟಾಯ್ಲೆಟ್ ಕ್ಲೀನರ್ ಗಳು ಮತ್ತು ಬ್ಲೀಚ್ ನ ಮಿಶ್ರಣವು ಕ್ಲೋರಿನ್ ಗ್ಯಾಸ್ (chlorine gas) ಉತ್ಪಾದಿಸಬಹುದು. ಈ ಅನಿಲಗಳಲ್ಲಿ ಉಸಿರಾಡುವುದರಿಂದ ಕೆಮ್ಮು, ಮೂಗು ಮತ್ತು ಗಂಟಲಿನಲ್ಲಿ ಕಿರಿಕಿರಿ ಮತ್ತು ಉಸಿರಾಟದ ತೊಂದರೆ ಉಂಟಾಗಬಹುದು. ಅಸ್ತಮಾ, ಸಿಒಪಿಡಿ ಅಥವಾ ಇತರ ಶ್ವಾಸಕೋಶದ ಕಾಯಿಲೆಗಳನ್ನು ಹೊಂದಿರುವ ಜನರಿಗೆ, ಈ ರಾಸಾಯನಿಕಗಳು ತೀವ್ರವಾದ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಬಹುದು ಮತ್ತು ಸಾವಿಗೆ ಕಾರಣವಾಗಬಹುದು.
ಬೇಕಿಂಗ್ ಸೋಡಾ ಮತ್ತು ವಿನೇಗರ್
ಅಡುಗೆ ಸೋಡಾ (baking soda) ಮತ್ತು ವಿನೆಗರ್ ಮನೆಯನ್ನು ಸ್ವಚ್ಛಗೊಳಿಸುವ ಉತ್ಪನ್ನಗಳಿಗೆ ಅದ್ಭುತ ಮತ್ತು ಅಗ್ಗದ ಪರ್ಯಾಯಗಳಾಗಿರಬಹುದು, ಆದರೆ ಅವುಗಳನ್ನು ಒಟ್ಟಿಗೆ ಬಳಸೋದು ಒಳ್ಳೆಯದಲ್ಲ. ಏಕೆಂದರೆ ಅಡುಗೆ ಸೋಡಾ ಪ್ರತ್ಯಾಮ್ಲ ಮತ್ತು ವಿನೆಗರ್ ಆಮ್ಲೀಯವಾಗಿದೆ, ಅವುಗಳನ್ನು ಬೆರೆಸುವುದರಿಂದ ಹೆಚ್ಚಿನ ನೀರನ್ನು ಬಿಡುಗಡೆ ಮಾಡುತ್ತದೆ, ಇದು ಖಂಡಿತವಾಗಿಯೂ ವಿಷಕಾರಿಯಲ್ಲ, ಆದರೆ ಸ್ವಚ್ಛಗೊಳಿಸಲು ಇದು ಸೂಕ್ತವಲ್ಲ.
ಅಮೋನಿಯಾ ಮತ್ತು ಬ್ಲೀಚ್
ಈ ಎರಡು ಪದಾರ್ಥಗಳು ಕೆಲವು ಸ್ವಚ್ಛಗೊಳಿಸುವ ಉತ್ಪನ್ನಗಳಲ್ಲಿ ಕಂಡುಬರುತ್ತವೆ. ಆದ್ದರಿಂದ ಅವುಗಳನ್ನು ಒಟ್ಟಿಗೆ ಬಳಸುವ ಮೊದಲು ಅದರಲ್ಲಿ ಏನೆಲ್ಲಾ ವಸ್ತುಗಳನ್ನು ಬಳಸಲಾಗಿದೆ ಅನ್ನೋದನ್ನು ಪರಿಶೀಲಿಸಲು ಮರೆಯದಿರಿ. ಇದರ ಪರಿಮಳ ಅಥವಾ ಗಾಳಿ ತೆಗೆದುಕೊಳ್ಳುವುದು ಉಸಿರಾಟದ ತೊಂದರೆಗಳು ಮತ್ತು ಗಂಟಲು ಕಿರಿಕಿರಿಗೆ ಕಾರಣವಾಗಬಹುದು.
ಬ್ಲೀಚ್ ಮತ್ತು ರಬ್ಬಿಂಗ್ ಅಲ್ಕೋಹಾಲ್
ಬ್ಲೀಚ್ (ಸೋಡಿಯಂ ಹೈಪೋಕ್ಲೋರೈಟ್ ಒಳಗೊಂಡಿದೆ) ಮತ್ತು ರಬ್ಬಿಂಗ್ ಆಲ್ಕೋಹಾಲ್ (ಐಸೊಪ್ರೊಪೈಲ್ ಆಲ್ಕೋಹಾಲ್) ಹೆವಿ ವಾಸನೆ ಹೊಂದಿರೋ ಕ್ಲೋರೋಫಾರ್ಮ್ ಮತ್ತು ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಕ್ಲೋರೋಅಸೆಟೋನ್ ಅನ್ನು ಉತ್ಪಾದಿಸುತ್ತೆ. ಕ್ಲೋರೋಫಾರ್ಮ್ ನ್ನು ಉಸಿರಾಡಿದಾಗ ತಲೆತಿರುಗುವಿಕೆ ಅಥವಾ ವಾಕರಿಕೆ ಸಮಸ್ಯೆ ಅನುಭವಿಸಬಹುದು.
ನೀವು ಆಕಸ್ಮಿಕವಾಗಿ ಐಸೊಪ್ರೊಪೈಲ್ ಆಲ್ಕೋಹಾಲ್ ನೊಂದಿಗೆ ಬ್ಲೀಚ್ (bleach) ಬೆರೆಸಿದರೆ, ಸಾಧ್ಯವಾದಷ್ಟು ಬೇಗ ಕೋಣೆಯಿಂದ ಹೊರಹೋಗಿ. ಈ ಮಿಶ್ರಣವನ್ನು ಹೆಚ್ಚಿನ ಪ್ರಮಾಣದ ನೀರಿನೊಂದಿಗೆ ದುರ್ಬಲಗೊಳಿಸಿ ಮತ್ತು ನಂತರ ಅದನ್ನು ಚರಂಡಿಗೆ ಎಸೆಯಿರಿ. ಇಲ್ಲವಾದರೆ ನಿಮಗೆ ಹೆಚ್ಚಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.