Gastritis Diet: ಖಾಲಿ ಹೊಟ್ಟೆಯಲ್ಲಿ ಈ ಆಹಾರ ಸೇವಿಸಿದ್ರೆ ಗ್ಯಾಸ್ ಸಮಸ್ಯೆ ಖಂಡಿತಾ
ಉತ್ತಮ ಆರೋಗ್ಯವು (better health) ಅತಿ ದೊಡ್ಡ ನಿಧಿಯಾಗಿದೆ. ಉತ್ತಮ ಆರೋಗ್ಯವು ಔಷಧಿಗಳಿಂದಲ್ಲ, ಆದರೆ ಅತ್ಯುತ್ತಮ ಆಹಾರದಿಂದ ಬರುತ್ತದೆ. ಗಡಿಬಿಡಿಯ ಜೀವನದಲ್ಲಿ, ನಮ್ಮ ಆಹಾರವು ಹದಗೆಡುತ್ತಿದೆ, ಇದರಿಂದ ಗ್ಯಾಸ್ಟಿಕ್ ಸಮಸ್ಯೆಗಳು ಹೆಚ್ಚುತ್ತಿವೆ.
ಗ್ಯಾಸ್ ಸಮಸ್ಯೆಯಲ್ಲಿ (gastric problem) ನಮ್ಮ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಚಳಿಗಾಲದಲ್ಲಿ, ನಾವು ಆಮ್ಲೀಯತೆಗೆ ಕಾರಣವಾಗುವ ವಿವಿಧ ಹುರಿದ ವಸ್ತುಗಳನ್ನು ತಿನ್ನುತ್ತೇವೆ. ಅಸಿಡಿಟಿಯು ಹೊಟ್ಟೆ, ಎದೆ, ಅಥವಾ ಕೆಲವೊಮ್ಮೆ ತಲೆಯಲ್ಲಿಯೂ ತೀಕ್ಷ್ಣವಾದ ನೋವನ್ನು ಉಂಟು ಮಾಡುತ್ತದೆ.
ಗ್ಯಾಸ್ ಸಮಸ್ಯೆ ಉಂಟುಮಾಡುವ ಕೆಲವು ಆಹಾರಗಳಿವೆ. ಈ ಆಹಾರಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಗ್ಯಾಸ್ ಸಮಸ್ಯೆ ತೀವ್ರವಾಗಿ ಹೆಚ್ಚಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಎಂದಿಗೂ ತಿನ್ನಬಾರದ 5 ಆಹಾರಗಳ ಬಗ್ಗೆ ನಮಗೆ ತಿಳಿಯಿರಿ.
ಸಿಹಿ ಗೆಣಸು
ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸ್ವೀಟ್ ಪೊಟಾಟೋ ಅಥವಾ ಗೆಣಸು ಒಂದು ಸೂಪರ್ ಫುಡ್ ಆಗಿದ್ದು, ಇದು ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಹೊಂದಿದೆ. ಆದರೆ ಇದನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಸಮಸ್ಯೆ ಖಂಡಿತಾ.
ಸಿಹಿ ಗೆಣಸನ್ನು ಬರಿ ಹೊಟ್ಟೆಯಲ್ಲಿ ತಿಂದರೆ ಇದರಿಂದ ಟ್ಯಾನಿನ್ ಮತ್ತು ಪೆಕ್ಟಿನ್ ಅನಿಲವನ್ನು ಹೆಚ್ಚಿಸಬಹುದು, ಇದು ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಕಾರಣವಾಗಬಹುದು. ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನುವುದರಿಂದ ಎದೆಯುರಿ ಉಂಟಾಗಬಹುದು. ಎಚ್ಚರ ವಹಿಸಿ.
ಸಿಟ್ರಸ್ ಹಣ್ಣು
ಸಿಟ್ರಸ್ ಹಣ್ಣುಗಳನ್ನು ಸಹ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಸಿಟ್ರಸ್ ಹಣ್ಣುಗಳಲ್ಲಿ ಗ್ಯಾಸ್ ಹೆಚ್ಚಿಸುವ ರಾಸಾಯನಿಕಗಳು ಇರುತ್ತವೆ, ಅದು ಅನಿಲ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ, ಇದರಲ್ಲಿ ಇರುವ ಅನೇಕ ಆಂಟಿ ಆಕ್ಸಿಡೆಂಟುಗಳು ನಮಗೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿವೆ.
ಮಸಾಲೆ ಯುಕ್ತ ಆಹಾರಕ್ಕಾಗಿ ಸುವಾಸನೆಯುಕ್ತ ಮಸಾಲೆಗಳು
ಖಾಲಿ ಹೊಟ್ಟೆಯಲ್ಲಿ ಅಥವಾ ಮುಂಜಾನೆ ತುಂಬಾ ಮಸಾಲೆಗಳನ್ನು ತಿನ್ನುವುದರಿಂದ ಹೊಟ್ಟೆನೋವು ಉಂಟಾಗಬಹುದು. ಇದು ಎದೆಯುರಿಗೂ ಕಾರಣವಾಗಬಹುದು. ಖಾಲಿ ಹೊಟ್ಟೆಯಲ್ಲಿ ಗರಂ ಮಸಾಲ ಸೇವಿಸುವುದರಿಂದ ಗ್ಯಾಸ್ ಹೆಚ್ಚಾಗುತ್ತದೆ ಇದು ಕಿಬ್ಬೊಟ್ಟೆ ನೋವು ಸಹ ಉಂಟು ಮಾಡಬಹುದು.
ಬಾಳೆಹಣ್ಣು
ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು, ಇದು ಅನಿಲವನ್ನು ಸಹ ಹೊಂದಿರುತ್ತದೆ ಮತ್ತು ಬಾಳೆಹಣ್ಣು ತುಂಬಾ ಪ್ರಯೋಜನಕಾರಿಯಾದರೂ ಹೊಟ್ಟೆ ಉಬ್ಬರದ ಸಮಸ್ಯೆಗಳಿಗೆ ಕಾರಣವಾಗಬಹುದು. ಆದುದರಿಂದ ಬಾಳೆಹಣ್ಣು ತಿನ್ನೋ ಮೊದಲು ಏನಾದರೂ ಸೇವಿಸಿ.
ಸೋಡಾ
ಸೋಡಾವನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವ ಮೂಲಕ ಸಾಕಷ್ಟು ಹಾನಿ ಉಂಟುಮಾಡುತ್ತದೆ ಎಂದು ತಿಳಿದಿದ್ದರೂ, ಕೆಲವರು ಅದನ್ನು ಕುಡಿಯುತ್ತಾರೆ. ಅದರಲ್ಲಿ ಇರುವ ಕಾರ್ಬೋನೇಟ್ ಆಮ್ಲವು ಹೊಟ್ಟೆನೋವನ್ನು ಉಂಟುಮಾಡುತ್ತದೆ.