ಹಲ್ಲಿನ ಬಿಳುಪಿಗೂ ಸಹಕಾರಿ: ನಿಮಗರಿಯದ ಕೊಬ್ಬರಿ ಎಣ್ಣೆಯ ಗುಣಗಳಿವು
ಶುದ್ಧ ಕೊಬ್ಬರಿ ಎಣ್ಣೆ ನಮ್ಮ ಆರೋಗ್ಯ ಕಾಪಾಡುವಲ್ಲಿ ಹಲವು ತರ, ಹಲವು ವಿಧದಲ್ಲಿ ನೆರವಾಗುತ್ತದೆ. ಕಾಂತಿಯುತ ಚರ್ಮಕ್ಕೂ ತೆಂಗಿನೆಣ್ಣೆ ಸಹಕಾರಿ. ನೀವು ತಿಳಿಯದೇ ಇರೋ ಕೊಬ್ಬರಿ ಎಣ್ಣೆಯ ಉಪಯುಕ್ತ ಗುಣಗಳಿವು
ಶುದ್ಧ ಕೊಬ್ಬರಿ ಎಣ್ಣೆ ನಮ್ಮ ಆರೋಗ್ಯ ಕಾಪಾಡುವಲ್ಲಿ ಹಲವು ತರ, ಹಲವು ವಿಧದಲ್ಲಿ ನೆರವಾಗುತ್ತದೆ.
ಕಾಂತಿಯುತ ಚರ್ಮಕ್ಕೂ ತೆಂಗಿನೆಣ್ಣೆ ಸಹಕಾರಿ.
ಮೇಕಪ್ ತೆಗೆಯುವುದು: ನೀವು ಹಾಕಿದ ಮೇಕಪ್ ತೆಗೆಯಲು ಕೊಬ್ಬರಿ ಎಣ್ಣೆ ಬಹಳ ಸಹಕಾರಿ. ಯಕ್ಷಗಾನದ ಬಹಳ ದಪ್ಪ ಬಣ್ಣಗಳನ್ನೇ ಕೊಬ್ಬರಿ ಎಣ್ಣೆ ಸುಲಭವಾಗಿ ತೆಗೆಯುತ್ತದೆ. ಇದು ತ್ವಚೆಗೆ ಹಿತವೂ ಹೌದು. ಕೊಬ್ಬರಿ ಎಣ್ಣೆ ಹದ ಬಿಸಿ ಮಾಡಿ ಹತ್ತಿಯಲ್ಲಿ ಅದ್ದಿ ಮೇಕಪ್ ಉಜ್ಜಿ. ನಂತರ ಸ್ವಲ್ಪ ಹೊತ್ತು ಮಸಾಜ್ ಮಾಡಿ.
ಹಲ್ಲನ್ನು ಬಿಳಿಯಾಗಿಸುವುದರ ಜೊತೆ ಬಾಯಿ ಸ್ವಚ್ಛತೆ: ಪ್ರಾಚೀನಾ ಆಯುರ್ವೇದದಲ್ಲಿ ಬಾಯಿಯ ಆರೋಗ್ಯ ಕಾಪಾಡಲು ತೆಂಗಿನೆಣ್ಣೆ ಬಾಯಿಗೆ ಹಾಕಿ 5 ನಿಮಿಷ ಬಿಟ್ಟು ಉಗುಳುವ ಅಭ್ಯಾಸವೂ ಸೇರಿದೆ.
ಸೂಕ್ಷ್ಮ ತ್ವಚೆ: ಹಾರ್ಶ್ ಆದಂತಹ ಡಿಯೋಡ್ರೆಂಟ್ಸ್ ನಿಮ್ಮ ದೇಹಕ್ಕೆ ಕಿರಿಕಿರಿ ಮಾಡಬಹುದು. ಇದಕ್ಕೆ ಬದಲಾಗಿ ಕೊಬ್ಬರಿ ಎಣ್ಣೆ ಆಧಾರಿತ ಸುಗಂಧ ದ್ರವ್ಯ ಬಳಸಿ. ಇದು ಆರೋಗ್ಯಕ್ಕೆ ಹಿತ ಮತ್ತು ತ್ವಚೆಗೂ ಹಾನಿ ಇಲ್ಲ.
ಸಾಕುಪ್ರಾಣಿಗಳಿಗಾಗಿ: ನಿಮ್ಮ ಮನೆಯ ನಾಯಿಗೆ ತುರಿಕೆ, ಅಲರ್ಜಿ ಚರ್ಮವಿದ್ದರೆ ತೆಂಗಿನ ಹಾಲನ್ನು ಹಚ್ಚಿ. ಇದು ನೈಸರ್ಗಿಕ ಔಷಧ.
ಸ್ನಾನಕ್ಕೆ ಮುನ್ನ ದೇಹಕ್ಕೆ ತೆಂಗಿನ ಎಣ್ಣೆ ಹಚ್ಚಿ: ಕೊಬ್ಬರಿ ಎಣ್ಣೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಹದವಾದ ಬಿಸಿ ನೀರಲ್ಲಿ ಸ್ನಾನ ಮಾಡುವುದರಿಂದ ನಿಮ್ಮ ತ್ವಚೆಯ ತೇವಾಂಶ ನಷ್ಟವಾಗುವುದಿಲ್ಲ. ನೀರಿನ ಅಂಶ ಹಿಡಿದಿಡಲು ಕೊಬ್ಬರಿ ಎಣ್ಣೆ ನೆರವಾಗುತ್ತದೆ.
ತೆಂಗಿನ ಹಾಲು: ತೆಂಗಿನ ಹಾಲು ಕೊಬ್ಬರಿ ಎಣ್ಣೆಯಂತೇ ಉಪಯುಕ್ತ. ಸ್ನಾನ ಮಾಡುವಾಗ ತೆಂಗಿನ ಹಾಲಿನಿಂದ ಮಸಾಜ್ ಮಾಡುವುದರಿಂದ ತ್ವಚೆ ಮೃದುವಾಗಿ ಸ್ವಚ್ಛವಾಗುತ್ತದೆ.