ದೀಪಾವಳೀಲಿ ಪಟಾಕಿಗಿಂತ ಹೆಚ್ಚು ಬೆಂಕಿ ದುರಂತ ಆಗೋದು ಕ್ಯಾಂಡಲ್, ದೀಪದಿಂದಾನಾ?
ದೀಪಾವಳಿ ಹಬ್ಬ ಸಂಭ್ರಮದ ಹಬ್ಬವೇ ಸರಿ ಆದರೆ ಪಟಾಕಿ ವಿಷಯ ಬಂದಾಗ ಈ ದೀಪಾವಳಿಯಲ್ಲಿ ನೀವು ಹೆಚ್ಚು ಜಾಗರೂಕರಾಗಿರಬೇಕು. ಇದರಿಂದ ಸಂತೋಷದಿಂದ ತುಂಬಿದ ಈ ಹಬ್ಬದಲ್ಲಿ ನೀವು ಯಾವುದೇ ರೀತಿಯ ದುಃಖವನ್ನು ಎದುರಿಸಬೇಕಾಗಿಲ್ಲ.
ಪಟಾಕಿಗಳಿಲ್ಲದೆ (Crackers) ದೀಪಾವಳಿಯನ್ನು ಆಚರಿಸುವ ಆಲೋಚನೆಯನ್ನು ಕೆಲವು ವರ್ಷಗಳ ಹಿಂದಿನವರೆಗೂ ಜನರು ಯೋಚಿಸಿಯೇ ಇರಲಿಲ್ಲ, ಆದರೆ ಪ್ರತಿ ವರ್ಷ ಚಳಿಗಾಲದಲ್ಲಿ ಮಾಲಿನ್ಯಕ್ಕೆ ಸಂಪೂರ್ಣ ಹೊಣೆ ಪಟಾಕಿ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಪಟಾಕಿಗಳನ್ನು ಹಲವೆಡೆ ನಿಷೇಧಿಸಲಾಯಿತು. ಈ ವರ್ಷ ದೆಹಲಿ-ಎನ್ಸಿಆರ್ನಲ್ಲಿ ದೀಪಾವಳಿ ಪಟಾಕಿಗಳಿಗೆ ಮುಂಚಿತವಾಗಿಯೇ ಮಾಲಿನ್ಯದಿಂದಾಲೇ (pollution) ಈಗಾಗಲೇ ಜನರ ಜೀವನ ಹದಗೆಟ್ಟಿದೆ.
ಪಟಾಕಿಗಳಿಂದ ಉಂಟಾಗುವ ಮಾಲಿನ್ಯದ ಹೊರತಾಗಿ, ಬೆಂಕಿಯಿಂದ ಸುಡುವ ಅಪಾಯವೂ ಇದೆ, ಇಲ್ಲಿವರೆಗೆ ಹಲವೆಡೆ ಪಟಾಕಿಗಳಿಂದ ಉಂಟಾದ ಸಮಸ್ಯೆಗಳ ಬಗ್ಗೆ ವರದಿಯಾಗಿರೋದನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ ಸಹ. ಆದರೆ ಕಳೆದ ಕೆಲವು ವರ್ಷಗಳಲ್ಲಿ, ಪಟಾಕಿಯಿಂದ ಸುಟ್ಟುಕೊಂಡ (burning) ಪ್ರಕರಣಗಳಿಗಿಂತ, ಇತರ ವಸ್ತುಗಳಿಂದ ಸುಟ್ಟುಕೊಂಡ ಪ್ರಕರಣ ಹೆಚ್ಚಾಗಿ ಕಂಡು ಬಂದಿದೆ.
ಪಟಾಕಿಗಳಲ್ಲ, ಈ ವಿಷಯವು ಹೆಚ್ಚು ಬೆಂಕಿ ಆಘಾತ ಉಂಟುಮಾಡುತ್ತದೆ.
ಮಾಲಿನ್ಯದ ಹೊರತಾಗಿ, ಪ್ರತಿ ವರ್ಷ ದೀಪಾವಳಿಯಂದು ಪಟಾಕಿಯಿಂದಾಗಿ ಅಥವಾ ಇತರ ಘಟನೆಗಳಿಂದ ಮೈಕೈ ಸುಟ್ಟುಕೊಂಡ ಘಟನೆ ನಡೆದೆ ನಡೆಯುತ್ತದೆ. ದೀಪಾವಳಿಯ ಉತ್ಸಾಹದ ಸಮಯದಲ್ಲಿ, ನಾವೆಲ್ಲರೂ ಮಕ್ಕಳು ಪಟಾಕಿಗಳನ್ನು ಸುಡುವುದರ ಮೇಲೆ ಗಮನ ಹರಿಸೋದ್ರಿಂದ, ಅಷ್ಟಾಗಿ ಪಟಾಕಿಗಳಿಂದ ಸುಟ್ಟ ಪ್ರಕರಣ ವರದಿಯಾಗಿಲ್ಲ, ಆದರೆ ಕಳೆದ ವರ್ಷ ಏಮ್ಸ್ನಲ್ಲಿ ದೀಪಾವಳಿಯ ಸಮಯದಲ್ಲಿ ಪಟಾಕಿಗಿಂತ ಹೆಚ್ಚಾಗಿ ದೀಪ, ಕ್ಯಾಂಡಲ್ (diya and candles) ಬೆಂಕಿಯಿಂದ ಸುಟ್ಟಪ್ರಕರಣಗಳೇ ಹೆಚ್ಚಾಗಿ ನಡೆದಿರುವುದು ವರದಿಯಾಗಿದೆ.
2022ರ ದೀಪಾವಳಿಯ ಸಮಯದಲ್ಲಿ, ಒಂಬತ್ತು ಜನರನ್ನು ತೀವ್ರ ಸುಟ್ಟಗಾಯಗಳೊಂದಿಗೆ ಏಮ್ಸ್ ತುರ್ತುಸ್ಥಿತಿಗೆ ಕರೆತರಲಾಯಿತು, ಅದರಲ್ಲಿ ಏಳು ಜನರು ಸಾವನ್ನಪ್ಪಿದ್ದರಂತೆ. ಆದರೆ ಹೆಚ್ಚಿನ ಜನರು ಮನೆಯಲ್ಲಿ ದೀಪಗಳಿಂದ ಅಥವಾ ಕ್ಯಾಂಡಲ್ ಬೆಂಕಿಯಿಂದ ಸುಟ್ಟುಕೊಂಡ ಘಟನೆಗಳೇ ಹೆಚ್ಚಾಗಿ ನಡೆದಿವೆ. ಒಟ್ಟು ಪ್ರಕರಣಗಳಲ್ಲಿ ಸುಮಾರು 70 ಪ್ರತಿಶತದಷ್ಟು ಸುಟ್ಟ ಗಾಯಗಳು ಬೆಂಕಿಯಿಂದಾಗಿ ಮತ್ತು 30 ಪ್ರತಿಶತದಷ್ಟು ಗಾಯಗಳು ಪಟಾಕಿಗಳಿಂದ ಸಂಭವಿಸಿವೆ.
ಸುಟ್ಟ ಗಾಯಗಳ ಹೆಚ್ಚಿನ ಪ್ರಕರಣಗಳು
AIMSನ ಸುಟ್ಟಗಾಯ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಮನೀಶ್ ಸಿಂಘಾಲ್ ಅವರ ಪ್ರಕಾರ, ಪಟಾಕಿಗಳಿಂದ ಹಾನಿಯಾಗುವ ಪ್ರಮಾಣ ಕಡಿಮೆ, ಆದರೆ ದೀಪ ಹಚ್ಚುವಾಗ ತಾಗಿರುವ ಬೆಂಕಿಯಿಂದಾಗಿ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.
ಬೆಂಕಿ ಕಾಣಿಸಿಕೊಂಡಾಗ ಏನು ಮಾಡಬೇಕು?
ಉಣ್ಣೆ ಅಥವಾ ಬೆಚ್ಚಗಿನ ಬಟ್ಟೆಗಳನ್ನು ಬಳಸುವುದನ್ನು ತಪ್ಪಿಸಿ
ವಾಸ್ತವವಾಗಿ, ಕಂಬಳಿ ಶಾಖವನ್ನು ಹೀರಿಕೊಳ್ಳುತ್ತದೆ, ಇದು ದೇಹದಲ್ಲಿ ಶಾಖವನ್ನು ಇರಿಸುತ್ತದೆ ಮತ್ತು ವ್ಯಕ್ತಿಗೆ ಹೆಚ್ಚು ಸುಟ್ಟ ಗಾಯ ಉಂಟಾಗುವ ಸಾಧ್ಯತೆ ಇದೆ.
ಈ ವಸ್ತುಗಳನ್ನು ತೆಗೆದುಹಾಕಿ
ನೀವು ಆಭರಣ, ಬೆಲ್ಟ್ ಅಥವಾ ಇನ್ನಾವುದೇ ಬಿಗಿಯಾದ ವಸ್ತುವನ್ನು ಧರಿಸುತ್ತಿದ್ದರೆ, ತಕ್ಷಣ ಅದನ್ನು ದೇಹದಿಂದ ಬೇರ್ಪಡಿಸಿ. ಇಲ್ಲವಾದರೆ ಅದರಿಂದ ಬೆಂಕಿ ಮೈಗೆ ಮತ್ತಷ್ಟು ಸುಡುವ ಸಾಧ್ಯತೆ ಇದೆ.
ನೀರನ್ನು ಬಳಸಿ
ಬೆಂಕಿಯಿಂದ ಗಾಯ ಅಥವಾ ಯಾವುದೇ ದೊಡ್ಡ ಅಥವಾ ಸಣ್ಣ ಅಪಾಯ ಉಂಟಾದರೂ, ಮೊದಲಿಗೆ ಸುಟ್ಟ ಪ್ರದೇಶದ ಮೇಲೆ ಶುದ್ಧ ನೀರನ್ನು ಸುರಿಯಿರಿ ಮತ್ತು ತಕ್ಷಣ ಆಸ್ಪತ್ರೆಗೆ ತಲುಪಿ. ಇದರಿಂದ ಅಪಾಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತೆ.
ರಕ್ಷಿಸುವುದು ಹೇಗೆ?
1. ದೀಪಾವಳಿಯಂದು ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ.
2. ಸಿಂಥೆಟಿಕ್ ಬಟ್ಟೆಗಳು ಹೆಚ್ಚು ಹಾನಿಯನ್ನುಂಟುಮಾಡುತ್ತವೆ, ಆದ್ದರಿಂದ ಅದನ್ನು ತಪ್ಪಿಸಿ.
3. ದೀಪಗಳು ಮತ್ತು ಮೇಣದಬತ್ತಿಗಳನ್ನು ಸಮತಟ್ಟಾದ ಜಾಗದಲ್ಲಿ ಇರಿಸಿ. ಇದರಿಂದ ಅವು ನಿಮ್ಮ ಮೇಲೆ ಬೀಳುವ ಅಪಾಯ ಕಡಿಮೆ ಇರುತ್ತೆ.
4. ವಿದ್ಯುತ್ ತಂತಿಗಳು ಅಥವಾ ಕಂಬಗಳ ಬಳಿ ದೀಪಗಳು ಅಥವಾ ಪಟಾಕಿಗಳನ್ನು ಬೆಳಗಿಸಬೇಡಿ.