ಈ ಹೊಸ ಡ್ರಗ್ಸ್ ಸೇವಿಸಿ Zombie ಗಳಂತಾಗುತ್ತಿದ್ದಾರೆ ಅಮೆರಿಕನ್ನರು
ನಿಜ ಜೀವನದಲ್ಲಿ ನೋಡಿಲ್ಲದಿದ್ದರೂ ಝಾಂಬಿ (Zombie ) ಎನ್ನುವ ಪದ ಪ್ರತಿಯೊಬ್ಬರಿಗೂ ಭಯ ಹುಟ್ಟಿಸುವಂತದ್ದು ಅಲ್ವಾ? ಯಾಕಂದ್ರೆ ಚಲನಚಿತ್ರಗಳಲ್ಲಿ ಝಾಂಬಿಯನ್ನು ನಾವು ನೋಡಿದ್ದೇವೆ. ಇದೀಗ ಅಂತಹುದೇ ರೋಗ ಕಂಡು ಬರುತ್ತಿದೆಯಂತೆ. ಹೌದು ಡ್ರಗ್ ಒಂದರ ಸೇವನೆಯಿಂದಾಗಿ ಮನುಷ್ಯರು ಝಾಂಬಿಗಳಂತೆ ಕಾಣಿಸಿಕೊಳ್ಳುತ್ತಿರುವ ವಿಚಿತ್ರ ಘಟನೆಗಳು ಅಮೇರಿಕಾದಲ್ಲಿ ಕಾಣಿಸಿಕೊಂಡಿವೆಯಂತೆ. ಅವುಗಳ ಬಗ್ಗೆ ತಿಳಿಯೋಣ.
ಝಾಂಬಿ ಡ್ರಗ್ ಕ್ಸೈಲಾಜೈನ್ (Zombie Drug Xylazine ) ಎಂಬ ಔಷಧವು ಅದರ ಬಳಕೆದಾರರ ಚರ್ಮವನ್ನು ಕೊಳೆಯುವಂತೆ ಮಾಡುತ್ತಿದೆ, ಇದು ಈಗ ಅಮೆರಿಕದ ನಗರಗಳಲ್ಲಿ ವಿನಾಶವನ್ನು ಉಂಟುಮಾಡುತ್ತ ಸಾಗುತ್ತಿದೆ. ಈ ಔಷಧದ ರೋಗಲಕ್ಷಣಗಳನ್ನು ಜೊಂಬಿಗಳಿಗೆ ಹೋಲಿಸಲಾಗುತ್ತಿದೆ. ಅಂದರೆ, ಜನರು ಅದರ ಅಮಲಿನಲ್ಲಿ ಜೋಂಬಿಗಳಂತೆ ಕಾಣಲು ಪ್ರಾರಂಭಿಸುತ್ತಾರೆ. ಅವರಂತೆ ವರ್ತಿಸಲು ಆರಂಭಿಸುತ್ತಿದ್ದಾರೆ.
ಮಿತಿ ಮೀರಿದ ಮಾದಕ ದ್ರವ್ಯದ (drugs) ಸೇವನೆ ಅಮೆರಿಕದ ದೊಡ್ಡ ಸಮಸ್ಯೆ. ಫೆಡರಲ್ ವರದಿಗಳ ಪ್ರಕಾರ, ಯುಎಸ್ನಲ್ಲಿ ಪ್ರತಿ 5 ನಿಮಿಷಕ್ಕೆ ಒಬ್ಬ ವ್ಯಕ್ತಿ ಮಾದಕ ದ್ರವ್ಯದ ಮಿತಿಮೀರಿದ ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ. ಈಗ ಹೊಸ ಡ್ರಗ್ ಒಂದು ಅಮೇರಿಕದಲ್ಲಿ ಗೊಂದಲವನ್ನು ಉಂಟುಮಾಡಿದೆ, ಇದರಿಂದಾಗಿ ಜನರ ಚರ್ಮ ಕೊಳೆಯಲು ಪ್ರಾರಂಭಿಸುತ್ತದೆ.
ಈ ಹೊಸ ಡ್ರಗ್ ಹೆಸರು ಕ್ಸೈಲಾಜಿನ್, ಇದನ್ನು ಟ್ರಾಂಕ್ ಎಂದೂ ಕರೆಯಲಾಗುತ್ತದೆ. ಈ ಔಷಧದಿಂದಾಗಿ, ದೇಶದ ಅನೇಕ ನಗರಗಳಲ್ಲಿ ಜನರು ವಿಚಿತ್ರವಾಗಿ ವರ್ತಿಸುತ್ತಿದ್ದಾರೆ.. ಈ ಡ್ರಗ್ ಜನರನ್ನು ಝಾಂಬಿಗಳನ್ನಾಗಿ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ಡಿಎ) ಇದನ್ನು ಅನುಮೋದಿಸಿತು, ಆದರೆ ಈಗ ಇದು ಇತ್ತೀಚೆಗೆ ಫೆಂಟಾನಿಲ್ ಮತ್ತು ಇತರ ಡ್ರಗ್ಸ್ ಗಳಲ್ಲಿ ಕಂಡುಬಂದಿದೆ.
ಪ್ರಾಣಿಗಳ ಔಷಧಿ ಕ್ಸೈಲಾಜಿನ್ (Xylazine)
ವರದಿಯ ಪ್ರಕಾರ, ಕ್ಸೈಲಾಜೈನ್ ಒಂದು ಪ್ರಾಣಿಗೆ ಬಳಸುವಂತಹ ಒಂದು ಔಷಧಿ, ಇದನ್ನು ಹೆರಾಯಿನ್ ನಂತಹ ಓಪಿಯಾಡ್ ಗಳಿಗೆ ಸಿಂಥೆಟಿಕ್ ಕಟಿಂಗ್ ಏಜೆಂಟ್ ಆಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಈಗ ಇದು ದೇಶದ ಎಲ್ಲಾ ನಗರಗಳಲ್ಲಿ ಕಂಡುಬರುತ್ತಿದೆ. ಈ ಔಷಧಿಯ ಬಳಕೆಯು ಮಾರಣಾಂತಿಕವಾಗಿ ಹೆಚ್ಚುತ್ತಿದೆ, ಇದನ್ನು ಸೇವಿಸುವುದರಿಂದ, ಚರ್ಮದ ಸೋಂಕುಗಳು (skin problems) ಮತ್ತು ಮಾದಕವಸ್ತುಗಳ ಮಿತಿಮೀರಿದ ಸೇವನೆ ಕಂಡುಬರುತ್ತದೆ. ಈ ರೀತಿಯಾಗಿ ದೇಶಾದ್ಯಂತ ಕ್ಸೈಲಾಜೈನ್ ಹರಡುವುದು ಆರೋಗ್ಯಕ್ಕೆ ಸಾರ್ವಜನಿಕ ಬೆದರಿಕೆಯಾಗುತ್ತಿದೆ.
ಅತ್ಯಂತ ಅಪಾಯಕಾರಿ ವಿಷಯವೆಂದರೆ ಈ ಔಷಧವು ಅಮೆರಿಕ ನಗರಗಳಲ್ಲಿ ಸುಲಭವಾಗಿ ಲಭ್ಯವಿದೆ. ಈ ಡ್ರಗ್ಸ್ ಬ್ಯಾಗ್ ಬೀದಿಗಳಲ್ಲಿ ಕೆಲವು ಡಾಲರ್ ಗಳಿಗೆ ಮಾರಾಟವಾಗುತ್ತಿದೆ. ಸಾರ್ವಜನಿಕ ಆರೋಗ್ಯ ಅಧಿಕಾರಿಗಳು (public health officer) ಅದರ ಹರಡುವಿಕೆಯ ಬಗ್ಗೆ ಭಯಭೀತರಾಗಿದ್ದಾರೆ. ಅದನ್ನು ಬಳಸುವ ಜನರ ಕೈಗಳಲ್ಲಿ ಭಯಾನಕ ಗಾಯಗಳು ಕಂಡುಬರುತ್ತಿರುವುದು ಮತ್ತಷ್ಟು ಆತಂಕ ಹುಟ್ಟಿಸಿವೆ.. ವರದಿಗಳ ಪ್ರಕಾರ, ಕ್ಸೈಲಾಜೈನ್ ಮಾನವರಿಗೆ ಸುರಕ್ಷಿತವಲ್ಲ, ಅದನ್ನು ಅತಿಯಾಗಿ ಸೇವಿಸಿದಾಗ ಯಾವುದೇ ರೀತಿಯ ಚಿಕಿತ್ಸೆ ಕಾರ್ಯನಿರ್ವಹಿಸುವುದಿಲ್ಲ.
'ಝಾಂಬಿ ಡ್ರಗ್'ನ ಲಕ್ಷಣಗಳು ಯಾವುವು? (symptoms of zombie drugs)
ಈ ಔಷಧಿಯನ್ನು ಬಳಸುವ ಜನರು ಭಯಂಕರ ನಿದ್ರೆ, ಉಸಿರಾಟದ ಖಿನ್ನತೆ ಮತ್ತು ಚರ್ಮದ ಮೇಲೆ ಗಾಯಗಳನ್ನು ಹೊಂದುತ್ತಾರೆ, ಇದು ದೇಹದಲ್ಲಿ ವೇಗವಾಗಿ ಬೆಳೆಯುತ್ತದೆ. ಇದಕ್ಕೆ ಚಿಕಿತ್ಸೆ ನೀಡದಿದ್ದರೆ, ಹುಣ್ಣು ಸತ್ತ ಚರ್ಮವಾಗಿ ಬದಲಾಗುತ್ತದೆ, ಬಳಿಕ ಅದನ್ನು ಕತ್ತರಿಸಬೇಕಾಗುತ್ತದೆ.
2021 ರಲ್ಲಿ ಅತಿಯಾದ ಡ್ರಗ್ ಸೇವನೆಯಿಂದ 2660 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ
ಡ್ರಗ್ಸ್ ತೆಗೆದುಕೊಂಡಾಗ ಬರುವ ನಶೆ ಈ ಹೊಸ ಔಷಧಿಯಿಂದ ಸಿಗುದಿಲ್ಲ ಎಂದು ಈ ಔಷಧಿಯನ್ನು ಬಳಸಿದವರು ಹೇಳುತ್ತಾರೆ. 9 ತಿಂಗಳ ಹಿಂದೆ ನನ್ನ ದೇಹದ ಮೇಲೆ ಯಾವುದೇ ರೀತಿಯ ಗಾಯವಾಗಿರಲಿಲ್ಲ, ಆದರೆ ಈಗ ನನ್ನ ಕಾಲುಗಳು ಮತ್ತು ಕಾಲ್ಬೆರಳುಗಳಲ್ಲಿ ರಂಧ್ರಗಳಿವೆ ಎಂದು 28 ವರ್ಷದ ಸ್ಯಾಮ್ ಸ್ಕೈ ನ್ಯೂಸ್ಗೆ ತಿಳಿಸಿದರು.
2021 ರಲ್ಲಿ, ನ್ಯೂಯಾರ್ಕ್ನಲ್ಲಿ ಈ ಔಷಧದಿಂದಾಗಿ ಸುಮಾರು 2668 ಜನರು ಸಾವನ್ನಪ್ಪಿದ್ದಾರೆ ಎಂದು ನ್ಯೂಯಾರ್ಕ್ ಸಿಟಿ ಡಿಪಾರ್ಟ್ಮೆಂಟ್ ಆಫ್ ಹೆಲ್ತ್ (NewYork city department of health) ತಿಳಿಸಿದೆ. ಅದೇ ಸಮಯದಲ್ಲಿ, ಕ್ಸೈಲಾಜೈನ್ ಬಳಕೆಯು ಡ್ರಗ್ ಸಾಂಕ್ರಾಮಿಕ ರೋಗವನ್ನು ಹೆಚ್ಚು ಅಪಾಯಕಾರಿಯನ್ನಾಗಿ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ..