ಇಮ್ಯುನಿಟಿ ಹೆಚ್ಚಿಸೋಕೆ ಕ್ಯಾರೆಟ್ ಜ್ಯೂಸ್ ಹೀಗೆ ತಯಾರಿಸಿ ಕುಡೀರಿ
ಕ್ಯಾರೆಟ್ ಜ್ಯೂಸ್ ಹೆಲ್ತಿ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಈ ಹೊಸ ರೆಸಿಪಿ ನಿಮ್ಮ ರೋಧ ನಿರೋಧಕ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಸಮಯ ಹೋಗ್ತಾ ಇದ್ದಂತೆ ಮಸಾಲಗಳ ಪ್ರಾಮುಖ್ಯತೆಯನ್ನು ಜನರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಕ್ಯಾರೆಟ್ ಜ್ಯೂಸ್ ಆರೋಗ್ಯಕ್ಕೆ ಅತ್ಯಂತ ಸಹಕಾರಿ.
ಈ ಹೊಸ ರೆಸಿಪಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತೆ. ಭಾರತೀಯ ಅಡುಗೆಯಲ್ಲಿ ಬಳಸುವ ಮಸಾಲೆಗಳು ರುಚಿಯಷ್ಟೇ ಅಲ್ಲ, ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತೆ.
ಕರಿಮೆಣಸು, ಅರಶಿನದಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿ ಇದೆ. ಕೆಮ್ಮು, ಶೀತವನ್ನು ಬೇಗನೆ ಶಮನ ಮಾಡುತ್ತದೆ ಕರಿ ಮೆಣಸು. ಇನ್ನು ಅರಶಿನ ಜ್ವರ ಸೇರಿ ಹಲವು ರೋಗಗಳಿಗೆ ಸುಲಭ ಔಷಧ.
ಅರಶಿನದಲ್ಲಿ ಬ್ಯಾಕ್ಟಿರಿಯಾ ವಿರುದ್ಧವೂ ಹೋರಾಡುವ ಶಕ್ತಿ ಇದೆ. ಹಾಗಾಗಿಯೇ ಅರಶಿನವನ್ನು ಸ್ನಾನಕ್ಕೂ ಬಳಸುತ್ತಾರೆ.
ನಾವು ಆರೋಗ್ಯ, ತ್ವಚೆಗಾಗಿ ಬಳಸುವ ಕ್ಯಾರೆಟ್ ಜ್ಯೂಸನ್ನು ಸ್ವಲ್ಪ ಬದಲಾಯಿಸಿ ತಯಾರಿಸಿದರೆ ಇಮ್ಯುನಿಟಿ ಹೆಚ್ಚಿಸಿಕೊಳ್ಳಬಹುದು.
ಬೇಕಾದ ವಸ್ತುಗಳು: 1 ಕ್ಯಾರೆಟ್, ಚಿಟಿಕೆ ಅರಶಿನ, 1 ಸ್ಪೂನ್ ಕರಿಮೆಣಸು ಪುಡಿ, ನೀರು ಅಗತ್ಯದಷ್ಟು
ಕ್ಯಾರೆಟ್ ರುಬ್ಬಿಕೊಂಡು ಮಸಾಲೆಗಳನ್ನು ಸೇರಿಸಿ. ನಿಮಗೆ ಬೇಕಾದ ಕನ್ಸಿಸ್ಟೆನ್ಸಿ ಸಿಗುವ ತನಕ ಚೆನ್ನಾಗಿ ಕದಡಿಕೊಳ್ಳಿ. ಉತ್ತಮ ಫಲಿತಾಂಶಕ್ಕೆ ಇದನ್ನು ಬೆಳಗ್ಗೆ ಕುಡಿಯಿರಿ.