ಚಳಿಗಾಲದಲ್ಲಿ ಕಾಡುವ ಸೈನಸ್ ಸಮಸ್ಯೆಗೆ ಸೂಪ್ ಮನೆಮದ್ದು
ಹವಾಮಾನವು ಬದಲಾಗಲು ಪ್ರಾರಂಭಿಸಿದೆ ಮತ್ತು ಚಳಿಗಾಲ ಸಮೀಪಿಸುತ್ತಿದ್ದಂತೆ, ಅನೇಕ ಜನರು ಸೈನಸ್ ಸಮಸ್ಯೆ ಹೊಂದಲು ಪ್ರಾರಂಭಿಸುತ್ತಾರೆ. ಶೀತ ಮತ್ತು ತಲೆನೋವು ಮಾತ್ರವಲ್ಲದೆ, ಸೈನಸ್ ನಿಂದಾಗಿ ಆಗಾಗ್ಗೆ ಸೀನುವ ಸಮಸ್ಯೆಯೂ ಈ ಸೀಸನ್ ನಲ್ಲಿ ಸಾಮಾನ್ಯವಾಗಿದೆ. ಸೈನಸ್ ನಿಂದಾಗಿ, ಹಣೆಯ ಮೇಲೆ ಒತ್ತಡ ಉಂಟಾಗುತ್ತೆ, ಅಷ್ಟೇ ಅಲ್ಲ ಅನೇಕ ಜನರು ಕಣ್ಣು ನೋವಿನ ಸಮಸ್ಯೆ ಸಹ ಎದುರಿಸುತ್ತಾರೆ. ಇದು ಅನೇಕ ಕಾರಣಗಳಿಂದಾಗಿರಬಹುದು. ಈ ಸಮಸ್ಯೆಯನ್ನು ದೂರ ಮಾಡಲು ನೀವು ಮನೆಯಲ್ಲಿಯೇ ಏನು ಮಾಡಬಹುದು ಅನ್ನೋದನ್ನು ನಾವಿಂದು ನಿಮಗೆ ತಿಳಿಸುತ್ತೇವೆ.
ಇತ್ತೀಚಿನ ದಿನಗಳಲ್ಲಂತೂ ನಿಮ್ಮ ಸುತ್ತಲೂ ಸೈನಸ್ ನಿಂದ ಬಳಲುತ್ತಿರುವ ಜನರ ಸಂಖ್ಯೆ ಹೆಚ್ಚಾಗಿರೋದನ್ನು ನೀವು ನೋಡಿರಬಹುದು. ಮಾಲಿನ್ಯದ ಹೆಚ್ಚಳವೇ ಇದಕ್ಕೆ ಒಂದು ಕಾರಣ ಎಂದು ವರದಿ ಹೇಳುತ್ತೆ. ಆದರೆ ಸೈನಸ್ ಸಮಸ್ಯೆಯನ್ನು (sinus problem) ತಪ್ಪಿಸಲು ಯಾವ ರೀತಿಯ ಕ್ರಮ ತೆಗೆದುಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯೇ? ನಿಮಗೆ ಸೈನಸ್ ಇದ್ದರೆ, ಮೊದಲು ವೈದ್ಯರನ್ನು ಸಂಪರ್ಕಿಸೋದು ಬಹಳ ಮುಖ್ಯ, ಇದರ ಹೊರತಾಗಿ, ಹಬೆಯನ್ನು ತೆಗೆದುಕೊಳ್ಳುವುದು ಮತ್ತು ಅಲರ್ಜಿಗಳಿಂದ ದೂರವಿರುವುದು ಸಹ ಮುಖ್ಯ. ಅದೇ ಸಮಯದಲ್ಲಿ, ಸೈನಸ್ ಸಮಸ್ಯೆಗಳನ್ನು ದೂರವಿಡಲು ಕೆಲವು ಆಹಾರ ಸಲಹೆಗಳನ್ನು ಅನುಸರಿಸುವುದು ಸಹ ಉತ್ತಮ.
ಸೈನಸ್ ಸಮಸ್ಯೆ ನಿವಾರಿಸಲು ಸೂಪ್ ಸಹಾಯ ಮಾಡುತ್ತೆ…
ತಜ್ಞರ ಪ್ರಕಾರ, ಸೈನಸ್ ಸಮಸ್ಯೆಗೆ ಈ ಸೂಪ್ ನೈಸರ್ಗಿಕ ಪರಿಹಾರವಾಗಿದ್ದು (natural remedies), ಇದು ನಿಮ್ಮ ದೇಹವನ್ನು ಒಳಗಿನಿಂದ ಬಿಸಿ ಮಾಡುತ್ತದೆ ಮತ್ತು ಇದು ಗಂಟಲು ನೋವು, ಸೈನಸ್ ಸಮಸ್ಯೆಗಳು ಇತ್ಯಾದಿಗಳನ್ನು ಕಡಿಮೆ ಮಾಡುತ್ತದೆ, ಇದರಿಂದ ಉಸಿರಾಟದ ತೊಂದರೆ ಇರುವುದಿಲ್ಲ. ಇದನ್ನು ತಯಾರಿಸೋದು ಹೇಗೆ? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ತಿಳಿಯೋಣ.
ಸೂಪ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
2-3 ಮಧ್ಯಮ ಗಾತ್ರದ ಎಲೆಕೋಸುಗಳು (ಅವುಗಳನ್ನು ಕತ್ತರಿಸಿ)
2 ಮಧ್ಯಮ ಗಾತ್ರದ ಈರುಳ್ಳಿ
1 ಟೀಸ್ಪೂನ್ ನುಣ್ಣಗೆ ಕತ್ತರಿಸಿದ ಶುಂಠಿ
2-3 ಟೀಸ್ಪೂನ್ ಪುಡಿ ಕರಿಮೆಣಸು
2 ತುಂಡು ಹಸಿರು ಏಲಕ್ಕಿ
2 ಹಿಪ್ಪಲಿ
ರುಚಿಗೆ ತಕ್ಕಷ್ಟು ಉಪ್ಪು
ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡುವ ಮೂಲಕ ನೀವು ಸೂಪ್ ತಯಾರಿಸಬೇಕು. ಈ ಸೂಪ್ ತಯಾರಿಸಲು, ಮೊದಲು ಎಲ್ಲಾ ಮಸಾಲೆಗಳನ್ನು ನೀರಿಗೆ ಸೇರಿಸಿ ಕುದಿಸಿ, ನಂತರ ಎಲೆಕೋಸನ್ನು ಬೆರೆಸಿ ಬೇಯಿಸಿ. ಸೂಪ್ (soup) ಸರಿಯಾಗಿ ಬರುವವರೆಗೆ ಅದನ್ನು ಕಡಿಮೆ ಉರಿಯಲ್ಲಿ ಸ್ವಲ್ಪ ಸಮಯದವರೆಗೆ ಬೇಯಲು ಬಿಡಿ.
ಈ ಸೂಪ್ ಏಕೆ ಪ್ರಯೋಜನಕಾರಿಯಾಗಿದೆ?
ಈ ಸೂಪ್ ಸೈನಸ್ ಗೆ (sinus) ಸಹಾಯ ಮಾಡುವುದಲ್ಲದೆ, ದೇಹದಿಂದ ಹೆಚ್ಚುವರಿ ದ್ರವ ತೆಗೆದುಹಾಕಲು ಕೆಲಸ ಮಾಡುತ್ತದೆ, ಅಲ್ಲದೇ ಹೊಟ್ಟೆಯ ಸಮಸ್ಯೆಗಳಿಗೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಅಲ್ಲದೇ ಇದರಲ್ಲಿರುವ ಶುಂಠಿ ಶೀತ ಮತ್ತು ಕಫ, ಸೈನಸ್ ಮತ್ತು ಶ್ವಾಸನಾಳದ ಸೋಂಕು ಇತ್ಯಾದಿಗಳಿಗೆ ಸಹಾಯ ಮಾಡುತ್ತದೆ.
ಶುಂಠಿ (ginger) ದೇಹದಲ್ಲಿ ದ್ರವ ಸಂವಹನವನ್ನು ಹೆಚ್ಚಿಸುತ್ತದೆ ಮತ್ತು ಈ ಕಾರಣದಿಂದಾಗಿ, ಲೋಳೆಯ ಪದರವು ಸಹ ತೆಳುವಾಗಿರುತ್ತದೆ, ಇದು ದೇಹಕ್ಕೆ ಉತ್ತಮ ಪರಿಹಾರ ನೀಡುತ್ತೆ. ಶುಂಠಿಯು ಉತ್ಕರ್ಷಣ ನಿರೋಧಕದಂತಿದೆ, ಇದು ಉರಿಯೂತ ನಿವಾರಿಸುತ್ತದೆ. ಇದನ್ನು ಸೇವಿಸೋದ್ರಿಂದ ಊತ ಮತ್ತು ನೋವಿನಂತಹ ಸಮಸ್ಯೆಗಳು ಕಡಿಮೆಯಾಗುತ್ತೆ.
ಇತರ ಗಿಡಮೂಲಿಕೆಗಳಾದ (herbs) ಹಿಪ್ಪಲಿ, ಏಲಕ್ಕಿ, ಬೇ ಎಲೆಗಳು, ಕರಿಬೇವಿನ ಎಲೆಗಳು, ಇತ್ಯಾದಿಗಳನ್ನು ಈ ಸೂಪ್ ಗೆ ಸೇರಿಸಬಹುದು, ಇದು ದೇಹದ ನೈಸರ್ಗಿಕ ಗುಣಪಡಿಸುವ (natural home remedies) ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಇದು ಕಫ, ಶೀತ ಮತ್ತು ಸೈನಸ್ ಸಮಸ್ಯೆಗೆ ನೈಸರ್ಗಿಕ ಪರಿಹಾರ ನೀಡುತ್ತೆ.
ಈ ಸೂಪ್ ಬಹುತೇಕ ಎಲ್ಲರಿಗೂ ಪ್ರಯೋಜನಕಾರಿ, ಆದರೆ ನಿಮಗೆ ಆಹಾರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಇದನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ನಿಮ್ಮ ಆರೋಗ್ಯವು ಈಗಾಗಲೇ ಕೆಟ್ಟದಾಗಿದ್ದರೆ, ಆಹಾರದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.
ಮನೆಗಳಲ್ಲಿ ಸುಲಭವಾಗಿ ಮಾಡಬಹುದಾದಂತಹ ಈ ಸೂಪ್ ನಲ್ಲಿ ಎಲ್ಲಾ ಪದಾರ್ಥಗಳನ್ನು ಬಳಸಲಾಗಿದೆಯಾದರೂ, ಅದರಲ್ಲಿ ಬಳಸುವ ಯಾವುದೇ ಪದಾರ್ಥ ನಿಮಗೆ ಅಲರ್ಜಿ ಇದ್ದರೆ, ನಂತರ ಅದನ್ನು ಬಿಟ್ಟುಬಿಡಿ. ಆದರೆ ಅದಕ್ಕೂ ಮುನ್ನ ಇದರ ಬಗ್ಗೆ ನೀವು ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.