ದೇಹದ ಈ ಭಾಗದ ನೋವುಗಳಿಗೆ ತಲೆದಿಂಬು ಇಲ್ಲದೇ ಮಲಗುವುದೇ ಮದ್ದು, ನಿಜವಾ?
ಕೆಲವ್ರಿಗೆ ದಿಂಬಿಲ್ಲದೆ ನಿದ್ದೆನೇ ಬರಲ್ಲ. ಇನ್ನು ಕೆಲವ್ರಿಗೆ ದಿಂಬಿಲ್ಲದೆ ಮಲಗಿದ್ರೆ ಚೆನ್ನಾಗಿ ನಿದ್ದೆ ಬರುತ್ತೆ. ದಿಂಬಿಲ್ಲದೆ ಮಲಗೋದು ಆರೋಗ್ಯಕರವೇ? ತಲೆದಿಂಬು ಇಲ್ಲದೆ ಮಲಗೋದ್ರಿಂದ ಏನಾಗುತ್ತೆ ಈ ಪೋಸ್ಟ್‌ನಲ್ಲಿ ತಿಳಿಯೋಣ.

ನಿದ್ದೆ
ನಮ್ಮ ದೇಹಕ್ಕೆ ನಿದ್ದೆ ತುಂಬಾ ಮುಖ್ಯ. ದಣಿದ ದೇಹ ರಿಫ್ರೆಶ್ ಆಗಿ, ಎನರ್ಜಿಟಿಕ್ ಆಗಿರೋಕೆ ನಿದ್ದೆ ಸಹಾಯ ಮಾಡುತ್ತೆ. ಹಾಯಾಗಿ, ಪ್ರಶಾಂತವಾಗಿ ನಿದ್ದೆ ಮಾಡೋಕೆ ತಲೆಕೆಳಗೆ ದಿಂಬು ಇಡ್ಕೊಳ್ತಾರೆ. ಆದ್ರೆ ದಿಂಬಿಲ್ಲದೆ ಮಲಗೋದೇ ಒಳ್ಳೆ ಅಭ್ಯಾಸ ಅಂತಾರೆ ಆರೋಗ್ಯ ತಜ್ಞರು. ದಿಂಬಿಲ್ಲದೆ ಮಲಗಿದ್ರೆ ಏನೆಲ್ಲಾ ಲಾಭ ಇದೆ ಅಂತ ನೋಡೋಣ ಬನ್ನಿ.
ನಿದ್ದೆ
ಬೆನ್ನು ನೋವು ಕಡಿಮೆ
ಈಗಿನ ಕಾಲದಲ್ಲಿ ಬೆನ್ನುನೋವು ತುಂಬಾ ಜನರ ಸಮಸ್ಯೆಯಾಗಿದೆ.. ಇದಕ್ಕೆ ಹಲವಾರು ಕಾರಣಗಳಿವೆ. ಆದ್ರೆ ಬೆನ್ನುನೋವು ಇರೋರು ದಿಂಬು ಬಳಸಬಾರದು. ದಿಂಬಿಲ್ಲದೆ ಮಲಗಿದ್ರೆ ಬೆನ್ನುಮೂಳೆ ನೇರವಾಗಿರುತ್ತೆ. ಹೀಗಾಗಿ ನೋವು ಕಡಿಮೆ ಆಗುತ್ತೆ.
ಕುತ್ತಿಗೆ ನೋವು ಕಡಿಮೆ
ಕುತ್ತಿಗೆ ನೋವಿಗೂ ತುಂಬಾ ಕಾರಣಗಳಿವೆ. ಕುತ್ತಿಗೆ ನೋವು ಇರೋರು ದಿಂಬು ಬಳಸಬಾರದು. ದಿಂಬಿಲ್ಲದೆ ಮಲಗಿದ್ರೆ ನೋವು ಕಡಿಮೆ ಆಗುತ್ತೆ. ಕುತ್ತಿಗೆ ಮತ್ತು ತೋಳಿಗೆ ರಕ್ತ ಸರಬರಾಜು ಸುಲಭವಾಗುತ್ತೆ. ಹೀಗಾಗಿ ನೋವು ಕಡಿಮೆ ಆಗುತ್ತೆ.
ಚರ್ಮ ಮತ್ತು ಕೂದಲು
ದಿಂಬು ಬಳಸಿ ಮಲಗೋದ್ರಿಂದ ಕೂದಲು ಮತ್ತು ಚರ್ಮ ಹಾಳಾಗುತ್ತೆ. ದಿಂಬು ಬಳಸೋರಿಗೆ ಕೂದಲು ಮತ್ತು ಚರ್ಮದ ಸಮಸ್ಯೆ ಜಾಸ್ತಿ ಅಂತ ಅಧ್ಯಯನಗಳು ಹೇಳ್ತಿವೆ. ದಿಂಬಿನ ಮೇಲೆ ಧೂಳು, ಬೆವರು ಇರುತ್ತೆ. ಇದ್ರಿಂದ ಕೂದಲು ದುರ್ಬಲ ಆಗುತ್ತೆ. ದಿಂಬಿಲ್ಲದೆ ಮಲಗಿದ್ರೆ ಈ ಸಮಸ್ಯೆಗಳಿಂದ ಮುಕ್ತಿ ಸಿಗುತ್ತೆ.
ತಲೆನೋವು ಕಡಿಮೆ
ಕೆಲವ್ರಿಗೆ ಬೆಳಗ್ಗೆ ಎದ್ದ ತಕ್ಷಣ ತಲೆನೋವು ಬರುತ್ತೆ. ಇದಕ್ಕೆ ಕಾರಣ ದಿಂಬು ಅಂತಾರೆ ತಜ್ಞರು. ಎತ್ತರದ ದಿಂಬಿನಿಂದ ತಲೆಗೆ ರಕ್ತಸಂಚಾರ ಕಡಿಮೆ ಆಗುತ್ತೆ. ಹೀಗಾಗಿ ತಲೆನೋವು ಬರುತ್ತೆ. ದಿಂಬಿಲ್ಲದೆ ಮಲಗಿದ್ರೆ ಈ ಸಮಸ್ಯೆ ಬರಲ್ಲ.
ಶರೀರದ ಭಂಗಿ ಚೆನ್ನಾಗಿರುತ್ತೆ
ದಿಂಬು ಇಟ್ಕೊಂಡು ಮಲಗಿದ್ರೆ ಕುತ್ತಿಗೆ ಬಾಗುತ್ತೆ. ದಿಂಬಿಲ್ಲದೆ ಮಲಗಿದ್ರೆ ಕುತ್ತಿಗೆ ನೇರವಾಗಿರುತ್ತೆ.
ಚೆನ್ನಾಗಿ ನಿದ್ದೆ ಬರುತ್ತೆ
ದಿಂಬು ಇದ್ರೆನೇ ನಿದ್ದೆ ಬರುತ್ತೆ ಅಂತಾರೆ ಕೆಲವರು. ಆದ್ರೆ ದಿಂಬಿನಿಂದ ಸಮಸ್ಯೆಗಳು ಬರುತ್ತೆ. ನಿದ್ದೆ ಸರಿಯಾಗಿ ಬರಲ್ಲ. ದಿಂಬಿಲ್ಲದೆ ಮಲಗಿದ್ರೆ ಮೆದುಳಿಗೆ ರಕ್ತಸಂಚಾರ ಜಾಸ್ತಿ ಆಗುತ್ತೆ. ಒತ್ತಡ ಕಡಿಮೆ ಆಗಿ ಚೆನ್ನಾಗಿ ನಿದ್ದೆ ಬರುತ್ತೆ.
ಗಮನಿಸಿ: ಇಲ್ಲಿ ಒದಗಿಸಲಾದ ಮಾಹಿತಿಯು ಕೇವಲ ಆರೋಗ್ಯ ನಿಯತಕಾಲಿಕೆ, ಆರೋಗ್ಯ ಸಂಬಂಧಿತ ವರದಿ ಆಧರಿಸಿದೆ. ಇದು ಕೇವಲ ಮಾಹಿತಿ ಹೊರತು ಪರ್ಯಾಯ ಚಿಕಿತ್ಸೆ ಕ್ರಮವಲ್ಲ. ಯಾವುದೇ ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.