ಸುಲಭವಾಗಿ ತೂಕ ಇಳಿಸಬೇಕೇ? ಹಾಗಿದ್ರೆ ಹುರಿದ ಕಡ್ಲೆ ಸೇವಿಸಿ
ಯಾವುದೇ ವ್ಯಾಯಾಮ ಅಥವಾ ಆಹಾರ ಪತ್ಯಗಳನ್ನು ಅನುಸರಿಸದೆಯೇ ತೂಕ ಇಳಿಸುವ ಆಲೋಚನೆಯನ್ನು ಹೊಂದಿದ್ದರೆ ನಿಮಗೆ ಹುರಿದ ಕಡ್ಲೇ ಕಾಳು ಉತ್ತಮ ಆಯ್ಕೆ ಆಗುವುದು. ಕಡ್ಲೇ ಕಾಳು ಸಮೃದ್ಧವಾದ ನಾರಿನಂಶ, ಪ್ರೋಟೀನ್ ಹಾಗೂ ಪೋಷಕಾಂಶಗಳನ್ನು ಒಳಗೊಂಡಿರುವುದರಿಂದ ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಇದರಿಂದ ದೇಹದ ತೂಕವು ಗಮನಾರ್ಹ ಇಳಿಕೆಯನ್ನು ಕಾಣುವುದು.
ಕಡಿಮೆ ಕ್ಯಾಲೂರಿ: ಕಡ್ಲೇ ಕಾಳು ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಲಘು ಆಹಾರವಾಗಿರುತ್ತದೆ. ಅದನ್ನು ಸೇವಿಸಿದರೆ ಹೆಚ್ಚು ಕಾಲ ಹಸಿವನ್ನು ತಡೆಯಬಹುದು. ಆಗ ಅಧಿಕ ಆಹಾರಗಳ ಸೇವನೆಯನ್ನು ನಿಯಂತ್ರಣದಲ್ಲಿ ಇಡಬಹುದು. ಅನಗತ್ಯವಾದ ತೂಕವು ನಿಯಂತ್ರಣಕ್ಕೆ ಬರುವುದು.
ಸಮೃದ್ಧವಾದ ಪ್ರೋಟೀನ್: ತಜ್ಞರು ಹೇಳುವ ಪ್ರಕಾರ ಹುರಿದ ಕಡ್ಲೇ ಕಾಳಿನಲ್ಲಿ ಹೇರಳವಾಗಿ ಪ್ರೋಟೀನ್ ಇರುತ್ತದೆ. ಅದು ದೇಹದ ತೂಕವನ್ನು ನಿಯಂತ್ರಿಸಲು ಮತ್ತು ಕಡಿಮೆ ಮಾಡಲು ಸಹಾಯ ಮಾಡುವುದು.
ಹುರಿದ ಕಡ್ಲೆ ನಿಯಮಿತವಾಗಿ ಸೇವನೆ ಮಾಡಿದರೆ, ಅದರಲ್ಲಿರುವ ಪ್ರೋಟೀನ್ ದೀರ್ಘ ಸಮಯ ಹಸಿವಾಗದಂತೆ ತಡೆಯುವುದು. ಆ ಮೂಲಕ ದೇಹದ ತೂಕವು ನಿಯಂತ್ರಣಕ್ಕೆ ಬರುವುದು.
ಅಧಿಕ ನಾರಿನಂಶ: ಸಮೃದ್ಧವಾದ ನಾರಿನಂಶವು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವುದು. ದೇಹದಲ್ಲಿ ಇರುವ ವಿಷಕಾರಿ ಅಂಶ ಹಾಗೂ ಕೊಬ್ಬಿನ ಪ್ರಮಾಣವು ಗಮನಾರ್ಹವಾಗಿ ಬದಲಾವಣೆಯನ್ನು ಕಾಣುವುದು. ಜೊತೆಗೆ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇಡಲು ಸಹಾಯ ಮಾಡುತ್ತದೆ.
ಇತರ ಪ್ರಯೋಜನಗಳು: ಈ ಎಲ್ಲಾ ಆರೋಗ್ಯಕರ ಅಂಶವು ವ್ಯಕ್ತಿಯ ಆರೋಗ್ಯ ಸ್ಥಿತಿಯು ಉತ್ತಮವಾಗಿಡಲು ಸಹಕರಿಸುತ್ತದೆ. ಹುರಿದ ಕಡ್ಲೇ ಕಾಳು ಮಧುಮೇಹದಿಂದ ಬಳಲುತ್ತಿದ್ದವರಿಗೆ ಒಳ್ಳೆಯದು.
ಹುರಿದ ಕಡ್ಲೆ ರಕ್ತದಲ್ಲಿ ಇರುವ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ. ಮೂಳೆಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವುದು. ಜೊತೆಗೆ ಮೂಳೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡುವುದು.
ರಕ್ತದ ಸ್ಥಿರತೆಯನ್ನು ಉತ್ತಮ ಸ್ಥಿತಿಯಲ್ಲಿ ಇಡುವಂತೆ ಮಾಡುವುದು. ಜೊತೆಗೆ ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ತಜ್ಞರ ಪ್ರಕಾರ ನೀವು ದಿನಕ್ಕೆ 100 ಗ್ರಾಂನಷ್ಟು ಕಡಲೆಯನ್ನು ಸೇವಿಸಬಹುದು. ಆದರೆ ಇದನ್ನು ಸೇವಿಸಿದ ಅರ್ಧ ಗಂಟೆಗಳ ವರೆಗೆ ನೀರನ್ನು ಕುಡಿಯುವಂತಿಲ್ಲ.