ಬೆಳಗ್ಗೆ ಎದ್ದು ಪ್ರತಿದಿನ ತಿನ್ನಿರಿ ಮುಷ್ಟಿಯಷ್ಟು ಹುರಿಗಡಲೆ, ಎಲ್ಲಾ ಕಾಯಿಲೆಗಳಿಗೆ ಹೇಳಿ ಬೈ- ಬೈ

First Published May 23, 2021, 5:19 PM IST

ಕೆಲವು ಜನರು ಸಮಯವನ್ನು ಕಳೆಯಲು ಅಥವಾ ಹೊಟ್ಟೆಯನ್ನು ತುಂಬಲು ಹುರಿಗಡಲೆ ತಿನ್ನುತ್ತಾರೆ, ಆದರೆ ಆರೋಗ್ಯದ ದೃಷ್ಟಿಯಿಂದಲೂ ಅವು ತುಂಬಾ ಪ್ರಯೋಜನಕಾರಿ. ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವುದರಿಂದ ಅವುಗಳನ್ನು ಆರೋಗ್ಯಕರ ತಿಂಡಿ ಎಂದು ಪರಿಗಣಿಸಲಾಗುತ್ತದೆ. ತೂಕ ಇಳಿಸುವಲ್ಲಿ ಅವು ಬಹಳ ಪರಿಣಾಮಕಾರಿ. ಬೇರೆ ಯಾವುದೇ ಒಣ ಹಣ್ಣುಗಳಿಗಿಂತ ಇವು ಅಗ್ಗವಾಗಿವೆ. ಜೊತೆಗೆ ಆರೋಗ್ಯಕ್ಕೂ ಉತ್ತಮ. ಹೇಗೆ ಅನ್ನೋದು ನೀವೇ ತಿಳಿಯಿರಿ.