6 ತಿಂಗಳ ಒಳಗಿನ ಮಗುವಿಗೆ ನೀರು ಕುಡಿಸಿದರೆ ಏನಾಗುತ್ತೆ? ತಾಯಂದಿರಿಗೆ ಈ ವಿಚಾರ ತಿಳಿದಿರಬೇಕು!
ಮನುಷ್ಯರಿಗೆ ಆಹಾರ ಎಷ್ಟು ಮುಖ್ಯವೋ ನೀರು ಕೂಡ ಅಷ್ಟೇ ಮುಖ್ಯ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದ್ರೆ ನಿರ್ಜಲೀಕರಣ ಆಗುತ್ತೆ. ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತೆ. ಹಾಗಾಗಿ ಸಾಕಷ್ಟು ನೀರು ಕುಡಿಯಬೇಕು ಅಂತ ವೈದ್ಯರು ಹೇಳ್ತಾರೆ. ಆದ್ರೆ ಹುಟ್ಟಿದ ಮಗುವಿಗೆ ನೀರು ಕೊಟ್ರೆ ಏನಾಗುತ್ತೆ? ಯಾವಾಗ ನೀರು ಕೊಡಬೇಕು? ಈ ಬಗ್ಗೆ ತಿಳಿದುಕೊಳ್ಳೋಣ.

ಪುರುಷರು ದಿನಕ್ಕೆ 3 ರಿಂದ 4 ಲೀಟರ್ ನೀರು, ಮಹಿಳೆಯರು 2 ರಿಂದ 3 ಲೀಟರ್ ನೀರು, ಮಕ್ಕಳು 1-2.5 ಲೀಟರ್ ನೀರು ಕುಡಿಯಬೇಕು ಅಂತ ವೈದ್ಯರು ಹೇಳ್ತಾರೆ. ಇದಕ್ಕಿಂತ ಕಡಿಮೆ ಆದ್ರೆ ದೇಹ ನಿರ್ಜಲೀಕರಣಕ್ಕೆ ಒಳಗಾಗುತ್ತೆ. ಆದ್ರೆ ಇದು ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅನ್ವಯಿಸುವುದಿಲ್ಲ. ಹುಟ್ಟಿದ ಮಗುವಿಗೆ ಆರು ತಿಂಗಳವರೆಗೂ ನೀರು ಕೊಡಬಾರದು.
ಮಕ್ಕಳಿಗೆ ನೀರು ಯಾಕೆ ಕೊಡಬಾರದು ಅನ್ನೋದಕ್ಕೆ ವೈದ್ಯರು ಕೆಲವು ಕಾರಣಗಳನ್ನು ಹೇಳ್ತಾರೆ. ಸಾಮಾನ್ಯವಾಗಿ 6 ತಿಂಗಳವರೆಗೂ ಮಗುವಿನ ಮೂತ್ರಪಿಂಡಗಳು ಪೂರ್ಣವಾಗಿ ಬೆಳವಣಿಗೆ ಆಗಿರುವುದಿಲ್ಲ. ಹಾಗಾಗಿ ನೀರು ಕುಡಿದ್ರೆ ದೇಹದಿಂದ ಹೆಚ್ಚುವರಿ ನೀರು, ಸೋಡಿಯಂ ಮೂತ್ರದ ಮೂಲಕ ಹೊರಗೆ ಹೋಗುತ್ತೆ. ಇದು ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತೆ.
ದೇಹದಲ್ಲಿ ಸೋಡಿಯಂ ಕೊರತೆ ಉಂಟಾದ್ರೆ ಮೆದುಳಿನ ಮೇಲೆ ಪರಿಣಾಮ ಬೀರುತ್ತೆ. ಮೆದುಳಿನ ಕಾರ್ಯಕ್ಷಮತೆ ಕುಂಠಿತವಾಗಬಹುದು. ಕಿರಿಕಿರಿ ಜೊತೆಗೆ ದೀರ್ಘಕಾಲದಲ್ಲಿ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಮುಖ, ಕಾಲು, ಕೈಗಳಲ್ಲಿ ಊತ ಕಾಣಿಸಿಕೊಳ್ಳಬಹುದು. ನೀರು ಕುಡಿಸುವುದರಿಂದ ನವಜಾತ ಶಿಶುಗಳಲ್ಲಿ ಪೋಷಕಾಂಶಗಳ ಕೊರತೆ, ನಿಧಾನ ಬೆಳವಣಿಗೆ, ಅಪೌಷ್ಟಿಕತೆ, ತೂಕ ಕಡಿಮೆಯಾಗುವುದು ಮುಂತಾದ ಸಮಸ್ಯೆಗಳು ಬರಬಹುದು.
ಮಗು
ಆರು ತಿಂಗಳವರೆಗೂ ಮಕ್ಕಳಿಗೆ ತಾಯಿ ಹಾಲು ಮಾತ್ರ ಕುಡಿಸಬೇಕು. ತುಂಬಾ ಬಿಸಿಲು ಇದ್ದಾಗ ಅಥವಾ ಮಲಬದ್ಧತೆ ಸಮಸ್ಯೆ ಇದ್ದಾಗ ಸ್ಪೂನ್‌ನಲ್ಲಿ ಸ್ವಲ್ಪ ನೀರು ಕೊಡಬಹುದು. ಆದ್ರೆ ವೈದ್ಯರನ್ನು ಸಂಪರ್ಕಿಸಿದ ನಂತರ, ಅವರ ಸಲಹೆ ಮೇರೆಗೆ ನೀರು ಕೊಡಬೇಕು.
ಗಮನಿಸಿ: ಮೇಲಿನ ಮಾಹಿತಿ ಕೇವಲ ಪ್ರಾಥಮಿಕ ಮಾಹಿತಿಗಾಗಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆ ಪಾಲಿಸುವುದೇ ಉತ್ತಮ.