MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಅರಿಶಿನ ಅತಿಯಾಗಿ ಸೇವಿಸಿದ್ರೆ ಗಂಭೀರ ಸಮಸ್ಯೆ !

ಅರಿಶಿನ ಅತಿಯಾಗಿ ಸೇವಿಸಿದ್ರೆ ಗಂಭೀರ ಸಮಸ್ಯೆ !

ಅರಿಶಿನವು ಅನೇಕ ಪ್ರಯೋಜನಗಳನ್ನು ಹೊಂದಿದೆ, ಇದನ್ನು ನಾವು ನಮ್ಮ ಹಿರಿಯರಿಂದ ಕೇಳಿದ್ದೇವೆ.  ಅಲ್ಲದೇ ಇದರ ಬಗ್ಗೆ ನಾವು ಸಹ ಸಾಕಷ್ಟು ತಿಳಿದುಕೊಂಡಿದ್ದೇವೆ. ಈ ಕಾರಣದಿಂದಾಗಿಯೇ ಶುಭ ಕಾರ್ಯಗಳಲ್ಲಿ ಮುಖ್ಯವಾಗಿದೆ, ಜೊತೆಗೆ ಗಾಯವನ್ನು ತ್ವರಿತವಾಗಿ ಗುಣಪಡಿಸಲು, ಅರಿಶಿನವನ್ನು ಬಳಸಲಾಗುತ್ತದೆ. ಆದರೆ ಅರಿಶಿನದಿಂದ ಕೇವಲ ಪ್ರಯೋಜನಗಳು ಮಾತ್ರವೇ?, ಯಾವುದೇ ಹಾನಿಯಿಲ್ಲವೇ? ಅನ್ನೋ ಪ್ರಶ್ನೆಗಳು ನಿಮ್ಮನ್ನು ಕಾಡಬಹುದು. ಅವುಗಳ ಬಗ್ಗೆ ತಿಳಿಯೋಣ. 

2 Min read
Author : Suvarna News
Published : Jul 26 2022, 03:18 PM IST
Share this Photo Gallery
  • FB
  • TW
  • Linkdin
  • Whatsapp
19

"ಅತಿ ಸರ್ವತ್ರ್ ವರ್ಜನ್ಯೆ" ಎಂಬ ಸಾಲುಗಳನ್ನು ನಿಮ್ಮ ಹಿರಿಯರ ಬಾಯಿಂದ ನೀವು ಅನೇಕ ಬಾರಿ ಕೇಳಿರಬಹುದು. ಇದರರ್ಥ ಅತಿಯಾದ ಯಾವುದೇ ವಿಷಯವು ನಿಮಗೆ ಹಾನಿಕಾರಕವಾಗಬಹುದು. ಅದು ಎಷ್ಟೇ ಪ್ರಯೋಜನಕಾರಿಯಾಗಿದ್ದರೂ ಪರವಾಗಿಲ್ಲ. ಅತಿಯಾದರೆ ಅಮೃತವೂ ವಿಷವಾಗುತ್ತೆ. ಇದು ಅರಿಶಿನಕ್ಕೂ ಅನ್ವಯಿಸುತ್ತದೆ. 

29

ಅರಿಶಿನವು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇದು ಗಂಭೀರದಿಂದ ತೀವ್ರವಾದ ರೋಗಗಳನ್ನು ತೆಗೆದುಹಾಕಲು ಪರಿಣಾಮಕಾರಿಯಾಗಬಹುದು, ಆದರೆ ಅದನ್ನು ಅತಿಯಾಗಿ ಸೇವಿಸಿದರೆ, ಅದು ನಿಮ್ಮ ಆರೋಗ್ಯಕ್ಕೂ ಮಾರಕವಾಗಬಹುದು. ಹೌದು, ಅರಿಶಿನದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅರಿಶಿನವನ್ನು ಅತಿಯಾಗಿ ತಿನ್ನೋದ್ರಿಂದ ಉಂಟಾಗುವ ಅನಾನುಕೂಲಗಳು ಯಾವುವು ಎಂದು ತಿಳಿಯೋಣ.

39

 ಎಷ್ಟು ತಿನ್ನಬೇಕು?
ಅರಿಶಿನವು ಆಂಟಿ-ಆಕ್ಸಿಡೆಂಟ್ (anti oxidant) ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಈ ಗುಣಗಳು ನಿಮ್ಮನ್ನು ರೋಗಗಳಿಂದ ರಕ್ಷಿಸಲು ಕೆಲಸ ಮಾಡುತ್ತವೆ. ಈ ಗುಣಲಕ್ಷಣಗಳಿಂದಾಗಿ, ಅರಿಶಿನವು ಹೆಚ್ಚು ಪ್ರಸಿದ್ಧವಾಗಿದೆ. ಆದರೆ ನೀವು ಅದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ ನೀವು ಈ ಪ್ರಯೋಜನಗಳನ್ನು ಪಡೆಯುತ್ತೀರಿ. ಪ್ರತಿದಿನ ಒಂದು ಟೀಸ್ಪೂನ್ ಅರಿಶಿನವನ್ನು ಸೇವಿಸುವುದು ಅದರ ಪ್ರಯೋಜನವನ್ನು ಪಡೆಯಲು ಸಾಕು ಎಂದು ತಜ್ಞರು ಸೂಚಿಸುತ್ತಾರೆ.

49

ಒಂದು ವೇಳೆ, ನೀವು ಅರಿಶಿನವನ್ನು ಹೆಚ್ಚು ಸೇವಿಸಿದರೆ, ಅದು ನಿಮಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. ಅಷ್ಟೇ ಅಲ್ಲದೇ ಇದರಿಂದ ತಲೆತಿರುಗುವಿಕೆ ಸಹ ಅನುಭವಿಸಬಹುದು. ಒಬ್ಬ ವ್ಯಕ್ತಿಯು ಇದನ್ನು ಕ್ಯಾಪ್ಸೂಲ್ (capsule) ಅಥವಾ ಪೂರಕಗಳ ರೂಪದಲ್ಲಿ ಸೇವಿಸಿದಾಗ ಹೆಚ್ಚಿನ ಸಂದರ್ಭಗಳಲ್ಲಿ ಇದು ಕಂಡುಬರುತ್ತದೆ. ಆದ್ದರಿಂದ, ತಜ್ಞರು ಆಗಾಗ್ಗೆ ಅರಿಶಿನವನ್ನು ನೈಸರ್ಗಿಕ ರೂಪದಲ್ಲಿ ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ.   

59

ಅರಿಶಿನ ಸೇವನೆಯ ಅಡ್ಡಪರಿಣಾಮಗಳು 

ಕಿಡ್ನಿಯಲ್ಲಿ ಕಲ್ಲು ಉಂಟಾಗುವ ಸಾಧ್ಯತೆ

ಅರಿಶಿನದಲ್ಲಿ ಆಕ್ಸಲೇಟ್ ಇದೆ. ಹಾಗಾಗಿ, ನೀವು ಅರಿಶಿನವನ್ನು ಅತಿಯಾಗಿ ಸೇವಿಸಿದರೆ, ಅದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಯಾವುದೇ ಆಕ್ಸಲೇಟ್ ಸಮೃದ್ಧ ಆಹಾರದ ಅತಿಯಾದ ಸೇವನೆಯು ಕಿಡ್ನಿಯಲ್ಲಿ ಕಲ್ಲುಗಳನ್ನು ಉಂಟು ಮಾಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. 

69

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು

ಅರಿಶಿನವನ್ನು ಅತಿಯಾಗಿ ಸೇವಿಸೋದ್ರಿಂದ ನಿಮ್ಮ ಹೊಟ್ಟೆಗೆ ಹಾನಿಯಾಗಬಹುದು (effect on stomoch). ನೀವು ದಿನವಿಡೀ 1 ಟೀಸ್ಪೂನ್ ಗಿಂತ ಹೆಚ್ಚು ಅರಿಶಿನ ಸೇವಿಸಿದರೆ, ಅದು ಹೊಟ್ಟೆಯ ಅಸ್ವಸ್ಥತೆ, ಅತಿಸಾರ, ವಾಂತಿಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. 

79

ಕಬ್ಬಿಣದ ಕೊರತೆ
ಅರಿಶಿನವನ್ನು ಅತಿಯಾಗಿ ಸೇವಿಸೋದ್ರಿಂದ ದೇಹದಲ್ಲಿ ರಕ್ತದ ಕೊರತೆ ಉಂಟಾಗಬಹುದು. ಹೆಚ್ಚು ಅರಿಶಿನವನ್ನು ಸೇವಿಸುವುದರಿಂದ ದೇಹದಲ್ಲಿ ಕಬ್ಬಿಣ ಹೀರಿಕೊಳ್ಳುವುದನ್ನು ನಿಲ್ಲಿಸುತ್ತದೆ.  ಈ ಕಾರಣದಿಂದಾಗಿ ನಿಮ್ಮ ದೇಹದಲ್ಲಿ ರಕ್ತದ ಕೊರತೆ ಉಂಟಾಗಬಹುದು. 

89

ಅತಿಸಾರ ಅಥವಾ ವಾಂತಿ
ಅರಿಶಿನದಲ್ಲಿ ಅನೇಕ ಅಂಶಗಳು ಕಂಡುಬರುತ್ತವೆ, ಅವುಗಳಲ್ಲಿ ಒಂದು ಕರ್ಕ್ಯುಮಿನ್ ಆಗಿದೆ. ಈ ಕರ್ಕ್ಯುಮಿನ್ ಜೀರ್ಣಕಾರಿ ಸಮಸ್ಯೆಗಳನ್ನು (digestion problem) ಸೃಷ್ಟಿಸುತ್ತದೆ. ಈ ಕಾರಣದಿಂದಾಗಿ, ಅನೇಕ ಬಾರಿ ಅತಿಸಾರ ಅಥವಾ ವಾಂತಿಯ ಸಮಸ್ಯೆಯೂ ಸಂಭವಿಸಲು ಪ್ರಾರಂಭಿಸುತ್ತದೆ. ಆದರೆ ನೀವು ಹೆಚ್ಚು ಅರಿಶಿನವನ್ನು ಸೇವಿಸಿದರೆ ಮಾತ್ರ ಈ ಸಮಸ್ಯೆ ಉಂಟಾಗುತ್ತದೆ.

99

ಚರ್ಮ ಮತ್ತು ಉಸಿರಾಟದ ಸಮಸ್ಯೆಗಳು
ಅರಿಶಿನದ ಗುಣಲಕ್ಷಣಗಳನ್ನು ಚರ್ಮ ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿ. ನೀವು ಅದನ್ನು ಅತಿಯಾಗಿ ಸೇವಿಸಿದಾಗ ಅದರಿಂದ ಚರ್ಮಕ್ಕೆ ಹಾನಿಯಾಗುತ್ತೆ. ಅರಿಶಿನದ ಸೇವನೆಯು ಉಸಿರಾಟದ ತೊಂದರೆ ಮತ್ತು ಚರ್ಮದ ದದ್ದುಗಳಿಗೆ ಕಾರಣವಾಗಬಹುದು. ಇದರಿಂದ ಉಂಟಾಗುವ ಅಲರ್ಜಿಯು ಚರ್ಮ ಮತ್ತು ಒಳಭಾಗಕ್ಕೂ ಹರಡಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಜೀವನಶೈಲಿ

Latest Videos
Recommended Stories
Recommended image1
Rare Diseases: ಅಪರೂಪದ ಕಾಯಿಲೆಗಳೆಲ್ಲಾ ಅನುವಂಶಿಕವೇ? ಸತ್ಯ-ಮಿಥ್ಯೆಗಳೇನು? ನಿಮ್ಮ ಫ್ಯಾಮಿಲಿ ಬಗ್ಗೆ ತಿಳ್ಕೊಳ್ಳಿ
Recommended image2
ಶ್ವಾನ ಪ್ರಿಯರೇ ಎಚ್ಚರ: ನಾಯಿ ನೆಕ್ಕಿದ್ದರಿಂದ ಕೈಕಾಲು ಕಳೆದುಕೊಂಡ ಮಹಿಳೆ- 11.3 ದಶಲಕ್ಷ ಪ್ರಕರಣ ದಾಖಲು!
Recommended image3
Weight Loss: ತೂಕ ಇಳಿಸೋಕೆ ಟ್ರೈ ಮಾಡ್ತಿದ್ದೀರಾ? ಹೆಚ್ಚು ಪ್ರೋಟೀನ್ ಇರುವ ಈ 6 ಸ್ನ್ಯಾಕ್ಸ್ ತಿನ್ನಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved