ಯೂರಿಕ್ ಆಮ್ಲದಿಂದ ಕಿಡ್ನಿ ಸಮಸ್ಯೆ... ಈ ಆಹಾರ ದೂರ ಮಾಡಿ ಆರೋಗ್ಯದಿಂದಿರಿ

First Published Jun 11, 2021, 4:29 PM IST

ಹೆಚ್ಚಿದ ಯೂರಿಕ್ ಆಮ್ಲ ದೇಹದಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಇದು ಅಂಗಾಲು ಮತ್ತು ಹಿಮ್ಮಡಿಗಳಲ್ಲಿ ನೋವನ್ನು ಉಂಟುಮಾಡುವುದಲ್ಲದೇ ಸಂಧಿವಾತವನ್ನು ಆಹ್ವಾನಿಸುತ್ತದೆ. ವಾಸ್ತವವಾಗಿ ದೇಹದಲ್ಲಿ ಪ್ಯೂರಿನ್ ಎಂಬ ಧಾತುವಿನ ವಿಘಟನೆಯು ಯೂರಿಕ್ ಆಮ್ಲದ ಪ್ರಮಾಣವನ್ನು ಹೆಚ್ಚಿಸುತ್ತದೆ. ಅಂದಹಾಗೆ, ಹೆಚ್ಚಿನ ಯೂರಿಕ್ ಆಮ್ಲವು ದೇಹದಿಂದ ಮೂತ್ರದ ಮೂಲಕ ಹೊರಹಾಕಲ್ಪಡುತ್ತದೆ. ಆದರೆ ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚು ಹೆಚ್ಚಾದಾಗ ಅದು ಹರಳುಗಳ ರೂಪದಲ್ಲಿ ಕೀಲುಗಳು ಮತ್ತು ಮೂಳೆಗಳ ನಡುವೆ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದರಿಂದ ಕೀಲು ನೋವು, ಮೂತ್ರಪಿಂಡದ ಸಮಸ್ಯೆಗಳು ಮತ್ತು ಸಂಧಿವಾತ ಉಂಟಾಗುತ್ತದೆ.